ಪ್ಯಾರಿಸ್: ಯುರೋಪ್‌ನಲ್ಲಿ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ಸದ್ಯಕ್ಕಂತೂ ಬಿಸಿಲಿನ ಬೇಗೆಯಿಂದ ಮುಕ್ತಿ ಸಿಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಫ್ರಾನ್ಸ್ ನಲ್ಲಿ ಕಳೆದ ಎರಡು ವಾರಗಳಿಂದ ಹೀಟ್‌ವೇವ್‌ಗೆ ಬಲಿಯಾದವರ ಒಟ್ಟು ಸಂಖ್ಯೆ 16,000 ದಾಟಿದೆ.
ಫ್ರಾನ್ಸ್ ಆರೋಗ್ಯ ಸಚಿವರು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಕಳವಳ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ಸಂಸ್ಥೆಯ ಪ್ರಕಾರ, ಕಳೆದ ವಾರಕ್ಕೂ ಹಿಂದಿನ ವಾರಕ್ಕೆ ಹೋಲಿಸಿದರೆ ಸಾವಿನ ಪ್ರಮಾಣದಲ್ಲಿ ಶೇಕಡಾ 29.1 ರಷ್ಟು ಹೆಚ್ಚಳವಾಗಿದ್ದು, 65 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ವೃದ್ಧರು ಬಿಸಿಲಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಈ ಪರಿಯ ಅಪಾಯಕಾರಿ ಮಟ್ಟದ ಹೀಟ್ ವೇವ್‌ಅನ್ನು ಯುರೋಪಿಯನ್ನರು ಎರಡು ದಶಕಗಳ ಹಿಂದೆ ಎದುರಿಸಿದ್ದರು.
2003ರ ಆಗಸ್ಟ್ ನಲ್ಲಿ ಸಂಭವಿಸಿದ 16 ದಿನಗಳ ಭೀಕರ ಹೀಟ್‌ವೇವ್‌ಗೆ ಫ್ರಾನ್ಸ್‌ನಲ್ಲಿ 15,000 ಮಂದಿ ಸಾವನ್ನಪ್ಪಿದ್ದರು. ಈಗ ಮತ್ತೆ ಯುರೋಪ್ ಹೀಟ್ ವೇವ್‌ನ ಬಿಗಿಮುಷ್ಠಿಯಲ್ಲಿ ಸಿಲುಕಿದೆ. ಶೇ. 35 ಡಿಗ್ರಿ ದಾಟಿದ ತಾಪಮಾನ: ವರದಿಗಳ ಪ್ರಕಾರ, ಯುರೋಪಿನ ಒಟ್ಟು ಜನಸಂಖ್ಯೆಯ ಅರ್ಧಕ್ಕೂ ಹೆಚ್ಚಿನ ಮಂದಿ ಜೂನ್ 15ರಿಂದ 30ರ ಅವಯಲ್ಲಿ 35 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ತಾಪಮಾನವನ್ನು ಎದುರಿಸಿದ್ದಾರೆ 2003ರ ಭೀಕರ ಹೀಟ್ ವೇವ್ ಸಂದರ್ಭ ಫ್ರಾಸ್ಸ್ ಒಂದರಲ್ಲೇ ಸುಮಾರು 15,000 ಜನರು ಸಾವಿಗೀಡಾಗಿದ್ದರು.
ವಿದ್ಯುತ್ ಉತ್ಪಾದನೆಗೂ ಕಂಟಕ
ಜೂನ್ ತಿಂಗಳಿನಲ್ಲಿ ಫ್ರಾಸ್ಸ್, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ನಲ್ಲಿ ಒಟ್ಟು 3,700 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಬೆಲ್ಜಿಯಂನಲ್ಲಿ ಜೂನ್ 18ರಿಂದ 29ರ ನಡುವೆ ಶೇಕಡಾ 39ರಷ್ಟು ಸಾವಿನ ಪ್ರಮಾಣ ಏರಿಕೆಯಾಗಿದೆ. ಮೃತರಲ್ಲಿ ಅರ್ಧದಷ್ಟು ಮಂದಿ 85 ವರ್ಷ ಮೇಲ್ಪಟ್ಟವರಾಗಿದ್ದಾರೆ. ಹೀಟ್ ವೇವ್ ಕೇವಲ ಮನುಷ್ಯರನ್ನು ಬಲಿ ಪಡೆಯುತ್ತಿಲ್ಲ, ಬದಲಿಗೆ ಆರೋಗ್ಯ ವ್ಯವಸ್ಥೆ, ವಿದ್ಯುತ್ ಉತ್ಪಾದನೆ ಮತ್ತು ಮೂಲಸೌಕರ್ಯ ಮತ್ತಿತರ ವಲಯಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ.ದಾಖಲೆಯ ತಾಪಮಾನ
ಯುರೋಪ್‌ನ ಹಲವೆಡೆ ತಾಪಮಾನ ದಾಖಲೆಯ 40 ಡಿಗ್ರಿಯಷ್ಟು ಏರಿಕೆ ಕಂಡಿರುವುದು ಆತಂಕಕಾರಿ. ಈ ವರ್ಷ ಅತಿ ಹೆಚ್ಚಿನ ತಾಪಮಾನ ಜೆಕ್ ಗಣರಾಜ್ಯದಲ್ಲಿ ದಾಖಲಾಗಿದೆ. ಜೂ.28ರಂದು ಜೆಕ್‌ನ ದೊಕ್ಸಾನಿ ಎಂಬಲ್ಲಿ 41.9 ಡಿಗ್ರಿ ತಾಪಮಾನ ದಾಖಲಾಗಿದೆ. ಜರ್ಮನಿ (41.7ಡಿಗ್ರಿ), ಪೋಲೆಂಡ್ (40.5ಡಿಗ್ರಿ), ಸ್ಲೊವಾಕಿಯಾ (41ಡಿಗ್ರಿ) ದೇಶಗಳಲ್ಲಿಯೂ ಹೀಟ್‌ವೇವ್ ತಾಂಡವ ಮುಂದುವರಿದಿದೆ. 2021ರಲ್ಲಿ ಇಟಲಿಯ ಸಿಸಿಲಿಯಲ್ಲಿ 48.8 ಡಿಗ್ರಿ ದಾಖಲಾಗಿದ್ದು ಇದುವರೆಗಿನ ದಾಖಲೆಯಾಗಿದೆ. ಜಗತ್ತಿನಲ್ಲೇ ಸಾರ್ವಕಾಲಿಕ ಅತ್ಯಕ ತಾಪಮಾನ (ದಾಖಲಿತ) ದಾಖಲೆ ಅಮೆರಿಕದ ಕ್ಯಾಲಿಫೋರ್ನಿಯಾ ಹೆಸರಲ್ಲಿದೆ. 1913 ರಲ್ಲಿ ಇಲ್ಲಿನ ಡೆತ್ ವ್ಯಾಲಿ ಕಣಿವೆಯಲ್ಲಿ 56.7 ಡಿಗ್ರಿ ತಾಪಮಾನ ದಾಖಲಾಗಿದೆ.
