Dailyhunt Logo
  • Light mode
    Follow system
    Dark mode
    • Play Story
    • App Story
ವಿವಿಧ ಪದವೀಧರರಿಗೆ ಐಡಿಬಿಐ ಬ್ಯಾಂಕ್‌ನಲ್ಲಿವೆ 134 ಹುದ್ದೆಗಳು

ವಿವಿಧ ಪದವೀಧರರಿಗೆ ಐಡಿಬಿಐ ಬ್ಯಾಂಕ್‌ನಲ್ಲಿವೆ 134 ಹುದ್ದೆಗಳು

ಐಡಿಬಿಐ ಬ್ಯಾಂಕ್ ಲಿಮಿಟೆಡ್‍ನಲ್ಲಿರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಡಿಜಿಟಲ್ ಬ್ಯಾಂಕಿಂಗ್, ಸೆಕ್ಯುರಿಟಿ, ಫ್ರಾಡ್‌ ರಿಸ್ಕ್ ಮ್ಯಾನೇಜ್‍ಮೆಂಟ್, ಎಕನಾಮಿಸ್ಟ್, ಸಿಎಸ್‍ಪಿಡಿ , ಐಟಿ, ಎಫ್‌ಡಿಎ, ಲೀಗಲ್, ಖಜಾನೆ ವಿಭಾಗಗಳಿಗೆ 134 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು.

ಅಭ್ಯರ್ಥಿಗಳು ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ದೇಶಾದ್ಯಂತ ಇರುವ ಬ್ಯಾಂಕ್‍ನ ಯಾವ ಶಾಖೆಯಲ್ಲಾದರೂ ಕೆಲಸ ಮಾಡಲು ಸಿದ್ಧರಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 63, ಎಸ್‍ಸಿಗೆ 19, ಎಸ್‍ಟಿಗೆ 7, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 12 ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 33 ಸ್ಥಾನಗಳನ್ನು ಮೀಸಲಿರಿಸಿದ್ದು, ಇವುಗಳಲ್ಲಿ 5 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ಹುದ್ದೆ, ಸಂಖ್ಯೆ ವಿವರ
* ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ-ಗ್ರೇಡ್ ಡಿ) - 11
* ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಎಜಿಎಂ-ಗ್ರೇಡ್ ಸಿ) - 52
* ಮ್ಯಾನೇಜರ್ (ಗ್ರೇಡ್ ಬಿ) - 62
* ಅಸಿಸ್ಟೆಂಟ್ ಮ್ಯಾನೇಜರ್ (ಗ್ರೇಡ್ ಎ) - 9

ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್ ಆಯಂಡ್ ಟೆಲಿಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಆಯಂಡ್ ಎಲೆಕ್ಟ್ರಿಕಲ್, ಇನ್‌ಫಾರ್ಮೇಷನ್‌ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಆಯಂಡ್ ಕಮ್ಯುನಿಕೇಷನ್‍ನಲ್ಲಿ ಬಿಇ, ಬಿ.ಟೆಕ್, ಬಿಕಾಂ, ಬಿಬಿಎ, ಮ್ಯಾಥ್ಸ್, ಸ್ಟಾೃಟಿಸ್ಟಿಕ್ಸ್‍ನಲ್ಲಿ ಬಿಎಸ್ಸಿ, ಯಾವುದೇ ಪದವಿ, ಸ್ನಾತಕೋತ್ತರ ಪದವಿ. ಕಂಪ್ಯೂಟರ್ ಜ್ಞಾನ, ವೃತ್ತಿ ಅನುಭವ ಅವಶ್ಯ.

ವಯೋಮಿತಿ: ಹುದ್ದೆಗೆ ಅನುಗುಣವಾಗಿ 1.11.2020ಕ್ಕೆ ಕನಿಷ್ಠ 25 ರಿಂದ ಗರಿಷ್ಠ 40 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಹುದ್ದೆಗೆ ಅವಶ್ಯ ಇರುವ ಅರ್ಹತೆಗಳು, ವೃತ್ತಿ ಅನುಭವ ಆಧರಿಸಿ ಶಾರ್ಟ್ ಲಿಸ್ಟ್ ಸಿದ್ಧಪಡಿಸಲಾಗುವುದು. ನಂತರ ಅರ್ಜಿ ಸಲ್ಲಿಸಲಿದ ಅಭ್ಯರ್ಥಿಗಳ ಸಂಖ್ಯೆ ಆಧರಿಸಿ ಗುಂಪು ಚರ್ಚೆ ಅಥವಾ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಎಸ್‍ಸಿ, ಎಸ್‍ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 150 ರೂ., ಉಳಿದ ಎಲ್ಲ ಅಭ್ಯರ್ಥಿಗಳಿಗೆ 700 ರೂ. ನಿಗದಿಯಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 7.1.2021

ಮಾಹಿತಿಗೆ: https://www.freejobalert.com/idbi-bank-recruitment/14467/

ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ.

ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇವೆ ಫೈರ್ ಇಂಜಿನಿಯರ್ ಹುದ್ದೆಗಳು

ನೌಕಾಪಡೆಯಲ್ಲಿ ನೌಕರಿಯ ಕನಸೀಗ ನನಸು- 210 ಹುದ್ದೆಗಳು ಖಾಲಿ

Dailyhunt
Disclaimer: This content has not been generated, created or edited by Dailyhunt. Publisher: Vijayvani