Sunday, 22 Nov, 7.53 pm ವಿಜಯವಾಣಿ

ಮುಖಪುಟ
2020ರ ಬಳಿಕ 2021ರಲ್ಲೂ ಕ್ರೀಡಾಕೂಟಗಳ ಮುಂದೂಡಿಕೆ ಭೀತಿ!

ಮೆಲ್ಬೋರ್ನ್: ಕರೊನಾ ವೈರಸ್ ಹಾವಳಿಯಿಂದ ಈಗಾಗಲೆ 2020ರ ಹಲವು ಕ್ರೀಡಾಕೂಟಗಳು ಮುಂದೂಡಿಕೆಯಾಗಿವೆ. ಇದೀಗ 2021ರಲ್ಲೂ ಇದು ಮುಂದುವರಿಯುವ ಭೀತಿ ಕಾಣಿಸಿಕೊಂಡಿದೆ. ಮುಂದಿನ ವರ್ಷಾರಂಭದ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೇಲಿಯನ್ ಓಪನ್ ಜನವರಿಯಿಂದ ಫೆಬ್ರವರಿ ಅಥವಾ ಮಾರ್ಚ್‌ಗೆ ಮುಂದೂಡಿಕೆಯಾಗುವ ಸಾಧ್ಯತೆ ಎದುರಾಗಿದೆ.

ಹಾಲಿ ವೇಳಾಪಟ್ಟಿಯ ಪ್ರಕಾರ ಜನವರಿ 18ರಂದು ಟೂರ್ನಿ ಆರಂಭಗೊಳ್ಳಬೇಕಿದೆ. ಆದರೆ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರ ಸಹಿತ ಸುಮಾರು 2,500 ಮಂದಿಯ ಕ್ವಾರಂಟೈನ್‌ಗೆ ವ್ಯವಸ್ಥೆ ಕಲ್ಪಿಸುವುದು ಸಂಘಟಕರಿಗೆ ದೊಡ್ಡ ತಲೆನೋವಾಗಿದೆ. ಅಲ್ಲದೆ ಜನವರಿ 1ಕ್ಕೆ ಮುನ್ನ ವಿದೇಶಿ ಆಟಗಾರರಿಗೆ ಪ್ರವೇಶ ಅವಕಾಶ ಕಲ್ಪಿಸಲು ಆಸ್ಟ್ರೇಲಿಯಾ ಸರ್ಕಾರ ನಿರಾಕರಿಸಿದೆ. ಬಳಿಕ 14 ದಿನಗಳ ಕ್ವಾರಂಟೈನ್ ಕೂಡ ಕಡ್ಡಾಯವಾಗಿದೆ. ಇದರಿಂದ ನಿಗದಿಯಂತೆ ಟೂರ್ನಿ ಆರಂಭಿಸುವುದು ಸವಾಲೆನಿಸಿದೆ. ಹೀಗಾಗಿ ಮುಂದಿನ 2 ವಾರದೊಳಗೆ ಟೂರ್ನಿಯ ದಿನಾಂಕವನ್ನು ಅಂತಿಮಗೊಳಿಸುವುದಾಗಿ ಸಂಘಟಕರು ತಿಳಿಸಿದ್ದಾರೆ.

ಆಸೀಸ್‌ನಲ್ಲಿ 2ನೇ ಅತಿಹೆಚ್ಚು ಕೋವಿಡ್-19 ಪ್ರಕರಣಗಳು ದಾಖಲಾದ ನಗರ ಮೆಲ್ಬೋರ್ನ್. ಆದರೆ ಕಳೆದ 23 ದಿನಗಳಿಂದ ಒಂದೂ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

ಕರೊನಾ ಹಾವಳಿಯಿಂದಾಗಿ 2020ರಲ್ಲಿ ಈಗಾಗಲೆ ಟೋಕಿಯೊ ಒಲಿಂಪಿಕ್ಸ್, ಯುರೋ ಕಪ್ ಫುಟ್‌ಬಾಲ್, ಐಸಿಸಿ ಟಿ20 ವಿಶ್ವಕಪ್‌ನಂಥ ಪ್ರತಿಷ್ಠಿತ ಟೂರ್ನಿಗಳು ಮುಂದೂಡಿಕೆಯಾಗಿವೆ. ಕೆಲ ಟೂರ್ನಿಗಳು ನಿಗದಿಗಿಂತ ತಡವಾಗಿ ನಡೆದಿದ್ದರೆ, ಉಳಿದೆಲ್ಲವೂ 2021 ಅಥವಾ 2022ಕ್ಕೆ ಮುಂದೂಡಿಕೆಯಾಗಿವೆ. ಇದಕ್ಕೆ ಮುನ್ನ 2021ಕ್ಕೆ ಮುಂದೂಡಿಕೆಯಾಗಿದ್ದ ಭಾರತದಲ್ಲಿನ 17 ವಯೋಮಿತಿಯ ಮಹಿಳೆಯರ ಫಿಫಾ ವಿಶ್ವಕಪ್ ಟೂರ್ನಿ ರದ್ದುಗೊಂಡಿತ್ತು.

ಡಿಸೆಂಬರ್ ಮೊದಲ ವಾರದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಶ್ರೀಶಾಂತ್ ವಾಪಸ್

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top