Wednesday, 28 Jul, 6.33 pm ವಿಜಯವಾಣಿ

ಮುಖಪುಟ
2020ರಲ್ಲಿ ಎರಡೆರೆಡು ಬಾರಿ ಜನಿಸಿದ ನಟ ಮಿಲಿಂದ್ ಸೋಮನ್?!

ಮುಂಬೈ: ಬಾಲಿವುಡ್ ನಟ ಮಿಲಿಂದ್ ಸೋಮನ್ ನಿಮಗೆಲ್ಲರಿಗೂ ಗೊತ್ತಿರುತ್ತಾರೆ. 55ರ ಹರೆಯದಲ್ಲೂ ಹಾಟ್ ಆಗಿ ಕಾಣಿಸಿಕೊಳ್ಳುವ ನಟನಿಗೆ ಅಪಾರ ಪ್ರಮಾಣ ಅಭಿಮಾನಿ ಬಳಗವೂ ಇದೆ. ಆದರೆ ಈ ನಟನ ಬಗ್ಗೆ ವಿಕಿಪೀಡಿಯಾ ಕೊಟ್ಟಿರುವ ಮಾಹಿತಿ ನೋಡಿದರೆ ನೀವು ಗಾಬರಿಯಾಗುತ್ತೀರಿ.

ವಿಕಿಪೀಡಿಯಾದಲ್ಲಿ ಕಾಣಿಸಿಕೊಳ್ಳುವ ಮಾಹಿತಿಯನ್ನು ಯಾರು ಬೇಕಾದರೂ ಎಡಿಟ್ ಮಾಡಬಹುದು. ಅದನ್ನೇ ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು ಯಾರೋ ಮಲಿಂದ್ ಅವರ ಹುಟ್ಟಿದ ದಿನವನ್ನೇ ವಿಕಿಪೀಡಿಯಾದಲ್ಲಿ ಬದಲಾಯಿಸಿದ್ದಾರೆ. ಒಂದು ಕಡೆ ಮಿಲಿಂದ್ 2020ರ ಜುಲೈ 28ರಂದು ಹುಟ್ಟಿದರು ಎಂದು ಬರೆದಿದ್ದರೆ ಇನ್ನೊಂದು ಕಡೆ ಅವರು ಕಳೆದ ವರ್ಷ ನವೆಂಬರ್ 4ರಂದು ಹುಟ್ಟಿದರು ಎಂದು ಬರೆಯಲಾಗಿದೆ.

ವಿಕಿಪೀಡಿಯಾದ ಈ ಯಡವಟ್ಟನ್ನು ಕಂಡ ಮಿಲಿಂದ್ ಅದನ್ನು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ವಿಕಿಪೀಡಿಯಾ ಪ್ರಕಾರ ನಾನು ಕಳೆದ ವರ್ಷ ಎರಡೆರೆಡು ಬಾರಿ ಜನಿಸಿದೆ ಎಂದು ಅವರು ಕಾಲೆಳೆದಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ವಿಕಿಪೀಡಿಯ ಮಾಹಿತಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಅವರ ನಿಜ ಡೇಟ್ ಆಫ್ ಬರ್ತ್ ಹಾಕಲಾಗಿದೆ.

ಅದಷ್ಟೇ ಅಲ್ಲ, ಮಿಲಿಂದ್ ಅವರು ಬೆತ್ತಲಾಗಿ ಬೀಚ್​ನಲ್ಲಿ ಓಡಿ ಅರೆಸ್ಟ್ ಆಗಿದ್ದರು ಎಂದೂ ವಿಕಿಪೀಡಿಯಾ ಮಾಹಿತಿ ನೀಡಿದ್ದಾರೆ. ಇದನ್ನೂ ಹಂಚಿಕೊಂಡಿರುವ ನಟ, ನಾನು ಬೆತ್ತಲಾಗಿ ಓಡಿದ್ದು ನಿಜ, ಅದರ ಫೋಟೋ ಇನ್​ಸ್ಟಾಗ್ರಾಂನಲ್ಲೂ ಇದೆ. ಆದರೆ ಅದಕ್ಕೆ ನಾನು ಅರೆಸ್ಟ್ ಆಗಿದ್ದೆ ಎನ್ನುವುದು ಸತ್ಯವಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ಪಾಕಿಸ್ತಾನದ ಕರಾಚಿಯಲ್ಲಿ ಇಬ್ಬರು ಚೀನಾ ಪ್ರಜೆಗಳ ಮೇಲೆ ಗುಂಡಿನ ದಾಳಿ!

ಕರೊನಾ ವಿಚಾರದಲ್ಲಿ ದಾಖಲೆ ಬರೆದ ಕೇರಳ! ಒಂದೇ ದಿನ 22 ಸಾವಿರಕ್ಕೂ ಅಧಿಕ ಪ್ರಕರಣ ದೃಢ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top