ವಿಜಯವಾಣಿ

495k Followers

2021 ಮುನ್ನೋಟ|ರಾಜ್ಯದ ಪ್ರಮುಖ ಜಾತ್ರೋತ್ಸವ, ಜಯಂತಿ, ಹಬ್ಬಗಳು ಮತ್ತು ಸಾರ್ವತ್ರಿಕ ರಜೆಗಳು

01 Jan 2021.1:50 PM

ನೂತನ ಸಂವತ್ಸರಕ್ಕೆ ಜಗತ್ತು ಕಾಲಿಟ್ಟಿದೆ. ಹೊಸ ವರ್ಷದಲ್ಲಿನ ಪ್ರಮುಖ ವಿದ್ಯಮಾನ, ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಇಡೀ ವಿಶ್ವ ಸಜ್ಜಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರ-ರಾಜ್ಯ ರಾಜಕಾರಣ, ರಾಜ್ಯದ ಪ್ರಸಿದ್ಧ ಜಾತ್ರಾ ಮಹೋತ್ಸವ, ಸಾಹಿತ್ಯ, ಕ್ರೀಡೆ, ಸಿನಿಮಾ ಹೀಗೆ ಕ್ಷೇತ್ರವಾರು ಆಯ್ದ ವಿದ್ಯಮಾನಗಳ ಸಂಕ್ಷಿಪ್ತ ಮುನ್ನೋಟ ಇಲ್ಲಿದೆ…

ರಾಜ್ಯದ ಪ್ರಮುಖ ಜಾತ್ರೋತ್ಸವ

ಜನವರಿ

 • 9 ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ
 • 12 ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ರಾಯಣ್ಣನ ಉತ್ಸವ ಆರಂಭ.
 • 12 ಸುತ್ತೂರು ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ 1061ನೇ ಜಯಂತಿ
 • 12 -18 ಆದಿಚುಂಚನಗಿರಿ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯುತ್ಸವ
 • 14 ವಿಜಯಪುರ ಸಿದ್ಧೇಶ್ವರ ಜಾತ್ರೆ. ಕೂಡಲಸಂಗಮದಲ್ಲಿ ಶರಣಮೇಳ
 • 14 ಯಾದಗಿರಿಯ ಮೈಲಾಪುರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಜಾತ್ರೋತ್ಸವ
 • 18 ಹಾರಕೂಡದಲ್ಲಿ ಶ್ರೀ ಚೆನ್ನಬಸವ ಶಿವಯೋಗಿಗಳ ಜಾತ್ರೋತ್ಸವ
 • 21 ತುಮಕೂರು ಸಿದ್ಧಗಂಗಾ ಶ್ರೀಗಳ ಪುಣ್ಮಸ್ಮರಣೆ
 • 22 ಕದ್ರಿ ಮಂಜುನಾಥೇಶ್ವರ ರಥ.
 • 26 ಹುಮ್ನಾಬಾದ್ ವೀರಭದ್ರೇಶ್ವರ ಜಾತ್ರೆ.
 • 28 ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಜಾತ್ರೆ ಆರಂಭ. ಬಾದಾಮಿ ಬನಶಂಕರಿ ಜಾತ್ರೆ
 • 30 ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ

ಫೆಬ್ರವರಿ

 • 8, 9 ಹರಿಹರ ತಾಲೂಕು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ.
 • 11 ವಿಜಯಪುರ ಜಿಲ್ಲೆ ಚಡಚಣ ಸಂಗಮೇಶ್ವರ ಜಾತ್ರೆ
 • 12 ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಜಯಂತಿ
 • 14, 15 ಸೇವಾಲಾಲ ಜಯಂತಿ
 • 16 ಧಾರವಾಡ ಮುರುಘಾಮಠದ ಜಾತ್ರೆ
 • 19 ಇಡಗುಂಜಿ ಗಣಪತಿ ರಥೋತ್ಸವ
 • 26 ಉಳವಿ ಚನ್ನಬಸವೇಶ್ವರ ಜಾತ್ರೆ
 • 27 ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಭರತ ಹುಣ್ಣಿಮೆ ಜಾತ್ರೆ ಆರಂಭ.
 • 28 ಬೆಳವಡಿಯಲ್ಲಿ ವೀರರಾಣಿ ಮಲ್ಲಮ್ಮಳ ಉತ್ಸವ ಆರಂಭ.

ಮಾರ್ಚ್

 • 1 ಮೈಲಾರ ಕಾರಣಿಕೋತ್ಸವ
 • 5-6 ಹಾನಗಲ್ಲ ಕುಮಾರಸ್ವಾಮಿಗಳ ಪುಣ್ಯತಿಥಿ. ಜಾತ್ರೆ
 • 7 ಕೊಟ್ಟೂರು ಜಾತ್ರೆ ರಥೋತ್ಸವ
 • 11 ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಉತ್ಸವ
 • 11 ಗೋಕರ್ಣ ಮಹಾಬಲೇಶ್ವರ ರಥೋತ್ಸವ
 • 12 ಶ್ರೀ ಸಿದ್ಧಾರೂಢರ ಜಾತ್ರೆ
 • 14 ಹರಿಹರ ತಾಲೂಕು ಉಕ್ಕಡಗಾತ್ರಿ ಕರಿಬಸವೇಶ್ವರ ಜಾತ್ರೆ.
 • 16 ಹೊರನಾಡು ಅನ್ನಪೂರ್ಣೆಶ್ವರಿ ರಥೋತ್ಸವ
 • 22 ಚಿಕ್ಕಬಳ್ಳಾಪುರ ನಂದಿಯ ಭೋಗನಂದೀಶ್ವರ ಸ್ವಾಮಿ ಬ್ರಹ್ಮ ರಥೋತ್ಸವ
 • 23 ಯಾದಗಿರಿಯ ಅಬ್ಬೆತುಮಕೂರಿನಲ್ಲಿ ಸದ್ಗುರು ಶ್ರೀ ವಿಶ್ವಾರಾಧ್ಯರ ಜಾತ್ರೋತ್ಸವ.
 • 26 ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯುತ್ಸವ. ಶ್ರೀ ರಂಭಾಪುರಿ ಪೀಠದಲ್ಲಿ ಯುಗಮಾನೋತ್ಸವ. ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ
 • 26 ನಂಜನಗೂಡಿನ ಪ್ರಸಿದ್ಧ ಪಂಚರಥಗಳ ಗೌತಮ ಮಹಾರಥೋತ್ಸವ

ಏಪ್ರಿಲ್

 • 1 ಚಾಮುಂಡಿಬೆಟ್ಟದಲ್ಲಿ ಮಹಾಬಲೇಶ್ವರ ರಥೋತ್ಸವ
 • 1 ಸಿದ್ಧಗಂಗೆಯ ಡಾ.ಶಿವಕುಮಾರ ಸ್ವಾಮೀಜಿ ಜನ್ಮದಿನ
 • 2 ಕಲಬುರಗಿ ಆರಾಧ್ಯದೈವ ಶ್ರೀ ಶರಣಬಸವೇಶ್ವರ ಜಾತ್ರೆ
 • 17 ಶ್ರೀ ದೇವರ ದಾಸಿಮಯ್ಯ ಜಯಂತಿ, ಇಂಡಿ ತಾಲೂಕು ಲಚ್ಯಾಣ ಶಂಕರಲಿಂಗ ರಥ,
 • 17 ಪುತ್ತೂರು ಮಹಾಲಿಂಗೇಶ್ವರ ಬ್ರಹ್ಮರಥ
 • 18 ಕೋಲಾರದ ಕೋದಂಡರಾಮ ಸ್ವಾಮಿ ರಥ
 • 19 ಕಟೀಲು ಬ್ರಹ್ಮರಥ. ಡೊಂಗರಕೇರಿ ವೆಂಕಟರಮಣ ರಥ.
 • 19 ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
 • 23-25 ಕಿತ್ತೂರಿನಲ್ಲಿ ವೀರರಾಣಿ ಚನ್ನಮ್ಮಳ ಉತ್ಸವ.
 • 25 ಮಂತ್ರಾಲಯ ಶ್ರೀ ರಾಘವೇಂದ್ರ ಗುರುರಾಯರ ಉತ್ತರಾರಾಧನೆ. ಪ್ರಹ್ಲಾದರಾಜರ ಮಹಾರಥೋತ್ಸವ
 • 27 ಹಂಪಿ ಜಾತ್ರೆ
 • 27 ಬೆಂಗಳೂರು ಕರಗ ಮಹೋತ್ಸವ

ಮೇ

 • 2 ಸನ್ನತಿ ಚಂದ್ರಲಾಂಬಾ ಪರಮೇಶ್ವರಿ ಜಾತ್ರೆ.
 • 9 ಮುಳಬಾಗಿಲು ತಾಲೂಕಿನ ತಾಯಲೂರು ಕಾಶಿ ವಿಶ್ವೇಶ್ವರಸ್ವಾಮಿ ಜಾತ್ರೆ
 • 27 ಬಂಗಾರಪೇಟೆಯಲ್ಲಿ ಪ್ರಸಿದ್ಧ ಕರಗ

ಜೂನ್

 • 10 ವಿಜಯಪುರ ಜಿಲ್ಲೆ ಸಿಂದಗಿ ಚೌಡೇಶ್ವರಿ ದೇವರ ಜಾತ್ರೆ
 • 22 ಚಡಚಣ ತಾಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದ ಶ್ರೀ ಮಾಧವಾನಂದ ಪ್ರಭುಜಿಯವರ ಪುಣ್ಯತಿಥಿ

ಜುಲೈ

 • 28 ಮಳಖೇಡ ಉತ್ತರಾದಿ ಮಠದಲ್ಲಿ ಶ್ರೀ ಜಯತೀರ್ಥರ ಆರಾಧನೆ
 • 30ಕ್ಕೆ ಕೋಲಾರಮ್ಮ ಜನ್ಮದಿನದ ಅಂಗವಾಗಿ ರಥೋತ್ಸವ

ಆಗಸ್ಟ್

 • 21 ತಿರು ಓಣಂ
 • 26 ಬಸವನ ಬಾಗೇವಾಡಿ ಶ್ರೀ ಬಸವೇಶ್ವರ ರಥೋತ್ಸವ
 • 26 ಹುಬ್ಬಳ್ಳಿ ಮೂರುಸಾವಿರ ಮಠದ ಜಾತ್ರೆ
 • 30 ಇಳಕಲ್ಲ ಮಹಾಂತ ಸ್ವಾಮಿಗಳ ಜಾತ್ರೆ, ಅಡ್ಡಪಲ್ಲಕ್ಕಿ ಉತ್ಸವ
 • 31 ಉಡುಪಿ ವಿಟ್ಲ ಪಿಂಡಿ ಉತ್ಸವ

ಸೆಪ್ಟೆಂಬರ್

 • 6 ಶಿಗ್ಗಾಂವಿ ಶಿಶುನಾಳ ಶರೀಫರ ತೆಪ್ಪೋತ್ಸವ
 • 20 ಮಹಾಲಿಂಗಪುರ ಶ್ರೀ ಗುರುಮಹಾಲಿಂಗೇಶ್ವರ ರಥೋತ್ಸವ
 • 27 ಬನಹಟ್ಟಿ ಕಾಡಸಿದ್ಧೇಶ್ವರ ಜಾತ್ರೆ
 • 30 ಇಂಡಿ ತಾಲೂಕಿನ ಲಚ್ಯಾಣದ ಸಿದ್ಧಲಿಂಗ ಮಹಾರಾಜರ ಪುಣ್ಯತಿಥಿ

ಅಕ್ಟೋಬರ್

 • 7-15 ಮೈಸೂರು ದಸರಾ ಮಹೋತ್ಸವ
 • 7 ಮಂಗಳೂರು ಕುದ್ರೋಳಿ ದಸರಾ ಆರಂಭ, ಶ್ರೀ ಮಂಗಳಾದೇವಿ ದೇವಸ್ಥಾನ ನವರಾತ್ರಿ ಆರಂಭ
 • 20 ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋತ್ಸವ, ತೆಪ್ಪೋತ್ಸವ

ನವೆಂಬರ್

 • 5 ಗೂಳೂರು ಗಣೇಶೋತ್ಸವಕ್ಕೆ ಚಾಲನೆ
 • 5 ಇಟಗಿ ಭೀಮಾಂಬಿಕೆ ಜಾತ್ರೆ
 • 24 ಬಸವನಬಾಗೇವಾಡಿ ತಾಲೂಕಿನ ಮನಬಿನಾಳ ಗ್ರಾಮದ ಗೌರಿ ಶಂಕರ ಜಾತ್ರೆ
 • 29 ನರಹರಿ ಪರ್ವತ ದೀಪೋತ್ಸವ

ಡಿಸೆಂಬರ್

 • 3 ಧರ್ಮಸ್ಥಳ ಲಕ್ಷದೀಪೋತ್ಸವ, ಕದ್ರಿ ಲಕ್ಷದೀಪೋತ್ಸವ, ಪುತ್ತೂರು ಮಹಾಲಿಂಗೇಶ್ವರ ದೀಪೋತ್ಸವ
 • 4 ಮಹಾರಾಷ್ಟ್ರದ ಗುಡ್ಡಾಪುರ ದಾನಮ್ಮದೇವರ ಜಾತ್ರೆ
 • 5 ಕದರಮಂಡಲಗಿ ಕಾಂತೇಶ್ವರ ಕಾರ್ತಿಕ ಮತ್ತು ತೆಪ್ಪದ ರಥೋತ್ಸವ
 • 9 ಸುಬ್ರಹ್ಮಣ್ಯ ಷಷ್ಠಿ, ಮಂಜೇಶ್ವರ ಷಷ್ಠಿ, ಕುಡುಪು ಷಷ್ಠಿ
 • 13 ಇಂಡಿ ತಾಲೂಕಿನ ಶಾಂತೇಶ್ವರ ಜಾತ್ರೆ

ಪ್ರಮುಖ ಜಯಂತಿ-ಆರಾಧನೆ

 • ಜ. 19 ಯೋಗಿ ವೇಮನ ಜಯಂತಿ
 • ಫೆ. 11 ಪುರಂದರದಾಸರ ಆರಾಧನೆ
 • ಫೆ. 19 ಛತ್ರಪತಿ ಶಿವಾಜಿ ಜಯಂತಿ
 • ಫೆ. 21 ಮಧ್ವ ನವಮಿ
 • ಏ. 25 ಮಹಾವೀರ ಜಯಂತಿ
 • ಏ. 21 ಶ್ರೀರಾಮ ನವಮಿ
 • ಏ. 14 ಅಂಬೇಡ್ಕರ್ ಜಯಂತಿ
 • ಏ. 18 ಶ್ರೀರಾಮಾನುಜಾಚಾರ್ಯ ಜಯಂತಿ
 • ಮೇ 14 ಬಸವ ಜಯಂತಿ
 • ಮೇ 17 ಶಂಕರಾಚಾರ್ಯ ಜಯಂತಿ
 • ಅ. 20 ಮಹರ್ಷಿ ವಾಲ್ಮೀಕಿ ಜಯಂತಿ
 • ಸೆ.17 ವಿಶ್ವಕರ್ಮ ಜಯಂತಿ
 • ನ.19 ಗುರುನಾನಕ್ ಜಯಂತಿ
 • ನ. 22 ಕನಕದಾಸ ಜಯಂತಿ
 • ಡಿ. 19 ದತ್ತಾತ್ರೇಯ ಜಯಂತಿ

ಹಬ್ಬಗಳು

 • ಫೆ. 19 ರಥ ಸಪ್ತಮಿ
 • ಮಾ. 11 ಮಹಾಶಿವರಾತ್ರಿ
 • ಮಾ. 28 ಹೋಳಿ ಹಬ್ಬ
 • ಏ. 21 ಶ್ರೀರಾಮ ನವಮಿ
 • ಮೇ 14 ಅಕ್ಷಯ ತೃತೀಯ
 • ಆ. 22 ಯಜುರ್ ಉಪಾಕರ್ಮ
 • ಆ. 29 ಶ್ರೀಕೃಷ್ಣ ಜನ್ಮಾಷ್ಠಮಿ
 • ಸೆ. 10 ಗಣೇಶ ಚತುರ್ಥಿ
 • ಸೆ. 19 ಅನಂತ ಪದ್ಮನಾಭ ವ್ರತ
 • ಅ.14 ಆಯುಧ ಪೂಜೆ
 • ಅ.15 ವಿಜಯದಶಮಿ
 • ನ.3 ನರಕ ಚತುರ್ದಶಿ
 • ನ.5 ಬಲಿಪಾಡ್ಯಮಿ
 • ಡಿ. 25 ಕ್ರಿಸ್​ವುಸ್

ಸಾರ್ವತ್ರಿಕ ರಜೆಗಳು

 • ಜ.14 ಮಕರ ಸಂಕ್ರಾಂತಿ
 • ಜ.26 ಗಣರಾಜ್ಯೋತ್ಸವ
 • ಮಾ.11 ಮಹಾಶಿವರಾತ್ರಿ
 • ಏ.4 ಗುಡ್​ಫ್ರೖೆಡೇ
 • ಏ.13 ಯುಗಾದಿ
 • ಏ.14 ಅಂಬೇಡ್ಕರ್ ಜಯಂತಿ
 • ಮೇ 1 ಕಾರ್ವಿುಕರ ದಿನಾಚರಣೆ
 • ಮೇ 14 ಬಸವ ಜಯಂತಿ
 • ಜು.21 ಬಕ್ರಿದ್
 • ಆ. 20 ಮೊಹರಂ ಕಡೆದಿನ
 • ಸೆ.10 ವಿನಾಯಕ ಚತುರ್ಥಿ
 • ಅ. 2 ಗಾಂಧಿ ಜಯಂತಿ
 • ಅ.6 ಮಹಾಲಯ ಅಮಾವಾಸ್ಯೆ
 • ಅ.14 ಆಯುಧ ಪೂಜೆ
 • ಅ.15 ವಿಜಯದಶಮಿ
 • ಅ.20 ವಾಲ್ಮೀಕಿ ಜಯಂತಿ
 • ನ.1 ಕನ್ನಡ ರಾಜ್ಯೋತ್ಸವ
 • ನ.3 ನರಕ ಚತುರ್ದಶಿ
 • ನ.5 ಬಲಿಪಾಡ್ಯಮಿ
 • ನ.22 ಕನಕದಾಸ ಜಯಂತಿ
Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags