Wednesday, 28 Jul, 3.45 pm ವಿಜಯವಾಣಿ

ಸಮಸ್ತ-ಕರ್ನಾಟಕ
2023ಕ್ಕೆ ವಿಜಯೇಂದ್ರರನ್ನ ಸಿಎಂ ಗಾದಿಗೆ ಕೂರಿಸಲೆಂದೇ ಈಗ ಬೊಮ್ಮಾಯಿ ಆಯ್ಕೆ ಮಾಡಲಾಗಿದೆ: ಅಸ್ನೋಟಿಕರ್

ಉತ್ತರಕನ್ನಡ: ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಆಯ್ಕೆಯಿಂದ ಬಿ.ಎಸ್.ಯಡಿಯೂರಪ್ಪ ಹಿಡಿತ ಸಾಧಿಸಿದ್ದಾರೆ. ಬೊಮ್ಮಾಯಿಯನ್ನು ಸಿಎಂ ಆಗಿ ಮಾಡಿರುವುದು ಭವಿಷ್ಯದಲ್ಲಿ ಬಿ.ವೈ.ವಿಜಯೇಂದ್ರ ಸಿಎಂ ಆಗಬೇಕೆಂದು ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.

ಕಾರವಾರದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಆನಂದ್​, 2023ಕ್ಕೆ ವಿಜಯೇಂದ್ರ ಅವರನ್ನು ಸಿಎಂ ಮಾಡಲು ಈಗ ಬೊಮ್ಮಾಯಿಗೆ ಪಟ್ಟಾಭಿಷೇಕ ಮಾಡಲಾಗಿದೆ. ಯತ್ನಾಳ್ ಹಾಗೂ ಯೋಗೇಶ್ವರ್ ಐದಾರು ತಿಂಗಳಿನಿಂದ ಯಡಿಯೂರಪ್ಪರ ವಿರುದ್ಧ ಮಾತನಾಡುತ್ತಿದ್ದರು. ಬೋನಿನಲ್ಲಿ ಇದ್ದ ಮಂಗನಂತೆ ಯತ್ನಾಳ್ ಕೂಗಾಡಿದರೂ ಏನು ಮಾಡಿಕೊಳ್ಳಲಾಗಲಿಲ್ಲ. ಬಿಜೆಪಿ ಶಿಸ್ತಿನ ಪಕ್ಷ ಆಗಿದ್ದರೆ ಅವರಿಬ್ಬರನ್ನ ಮಂತ್ರಿ ಮಾಡಬಾರದು ಎಂದರು.

ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿರುವುದು ಸೂಕ್ತ ಆಯ್ಕೆ. ಇದರಿಂದ ಬಿಜೆಪಿಗೆ ಭವಿಷ್ಯದಲ್ಲಿ ಲಾಭವಾಗಲಿದೆ. ರಾಜ್ಯಕ್ಕೆ ಒಳ್ಳೆಯ ದಿನ ಬರುತ್ತದೆ. ಈಗಿನ ಸರ್ಕಾರದ ಬೆಳವಣಿಗೆ ಮುಂದೆ ಜೆಡಿಎಸ್​ಗೆ ಪಾಲಿಗೆ ಒಳಿತು ತರಲಿದೆ ಎಂದ ಆನಂದ್​, ಮುಂದಿನ ಬಾರಿ ಸರ್ಕಾರ ರಚನೆ ವೇಳೆ ಕುಮಾರಸ್ವಾಮಿ ದೊಡ್ಡ ರೋಲ್ ತೆಗೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು.

ರೈತರ ಮಕ್ಕಳಿಗೆ ಶಿಷ್ಯವೇತನ: ನೂತನ ಸಿಎಂ ಬೊಮ್ಮಾಯಿ ಘೋಷಣೆ

ಮೊದಲ ದಿನವೇ ಆಡಳಿತಕ್ಕೆ ಹೊಸ ದಿಕ್ಸೂಚಿ, ಆರ್ಥಿಕ ಶಿಸ್ತಿಗೆ ಮಾರ್ಗಸೂಚಿ ಕೊಟ್ಟ ಬೊಮ್ಮಾಯಿ

ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top