Wednesday, 27 Jan, 7.30 pm ವಿಜಯವಾಣಿ

ಮುಖಪುಟ
30 ನಿಮಿಷದಲ್ಲಿ 30 ಕೆಜಿ ಕಿತ್ತಳೆ ತಿಂದ ಸ್ನೇಹಿತರು! ಕಾರಣ ಕೇಳಿದರೆ ನೀವೂ ನಗುತ್ತೀರ

ಬೀಜಿಂಗ್​: ಪ್ರಪಂಚದಲ್ಲಿ ಎಂತೆಂತಾ ವಿಚಿತ್ರ ಜನರಿರುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಚೀನಾದ ನಾಲ್ವರು ಸ್ನೇಹಿತರು ಕೇವಲ 30 ನಿಮಿಷಗಳಲ್ಲಿ 30 ಕೆಜಿ ಕಿತ್ತಳೆ ಹಣ್ಣನ್ನು ತಿಂದು ಮುಗಿಸಿದ್ದಾರೆ. ಅದಕ್ಕೆ ಕಾರಣ ಕೇಳಿದರೆ ನೀವು ನಗುವುದು ಗ್ಯಾರಂಟಿ.

ಆ ನಾಲ್ವರು ಮೊದಲಿನಿಂದಲೂ ಸ್ನೇಹಿತರಂತೆ. ಇತ್ತೀಚೆಗೆ ಚೀನಾದಲ್ಲಿಯೇ ಯಾವುದೋ ಒಂದು ಸ್ಥಳಕ್ಕೆ ಪ್ರವಾಸಕ್ಕೆ ಹೋಗಿದ್ದಾರೆ. ಅಲ್ಲಿಂದ ಮನೆಗೆ ವಾಪಾಸಾಗಲು ವಿಮಾನದ ಟಿಕೆಟ್​ ಬುಕ್​ ಮಾಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಹೋಗುವಾಗ ಮನೆಯವರಿಗೆಂದು 30 ಕೆಜಿ ಕಿತ್ತಳೆ ಹಣ್ಣಿನ ಬಾಕ್ಸ್​ ತೆಗೆದುಕೊಂಡು ಹೊರಟಿದ್ದಾರೆ. ಆದರೆ ವಿಮಾನಗಳಲ್ಲಿ ಒಬ್ಬರಿಗೆ ಅಷ್ಟೊಂದು ಸಾಮಾಗ್ರಿ ಹೊತ್ತೊಯ್ಯಲು ಅವಕಾಶವಿಲ್ಲ. ಅದಕ್ಕೆ ಹೆಚ್ಚಿನ ಹಣ ತೆರಬೇಕಾಗುತ್ತದೆ. ಅದೇ ರೀತಿಯಲ್ಲಿ ಆ 30 ಕೆಜಿ ಲಗೇಜ್​ಗೆ 300 ಯುವಾನ್​ ಅಂದರೆ 3,384 ರೂಪಾಯಿ ಶುಲ್ಕ ವಿಧಿಸುವುದಾಗಿ ತಿಳಿಸಲಾಗಿದೆ.

ಅಯ್ಯೋ, ಹಣ್ಣಿಗೆ ಇಷ್ಟೊಂದು ದುಡ್ಡು ಕೊಡಬೇಕಲ್ಲಾ ಎಂದು ಯೋಚಿಸಿದ ಸ್ನೇಹಿತರು ಒಂದು ಉಪಾಯ ಹುಡುಕಿದ್ದಾರೆ. 30 ಕೆಜಿ ಹಣ್ಣನ್ನು ಇಲ್ಲಿಯೇ ತಿಂದು ಮನೆಗೆ ಹೋಗೋಣ ಎಂದು ಪ್ಲ್ಯಾನ್​ ಮಾಡಿದ್ದಾರೆ. ಅದರಂತೆ ಅದನ್ನು ವಿಮಾನ ನಿಲ್ದಾಣದಲ್ಲಿಯೇ ಕುಳಿತು ತಿಂದಿದ್ದಾರೆ. ಕೇವಲ 20-30 ನಿಮಿಷಗಳಲ್ಲಿ ಅಷ್ಟೂ ಹಣ್ಣನ್ನು ತಿಂದು ಮುಗಿಸಿದರಂತೆ. ಆಮೇಲೆ ವಿಮಾನದಲ್ಲಿ ಅರಾಮವಾಗಿ ಪ್ರಯಾಣಿಸಿದರಂತೆ.

ಈ ಸುದ್ದಿ ಚೀನಾದ ಮಾಧ್ಯಮಗಳಲ್ಲಿ ವೈರಲ್​ ಆಗಿದೆ. 30 ಕೆಜಿಯನ್ನ ನಾಲ್ಕು ಜನರು ಭಾಗ ಮಾಡಿಕೊಂಡು ತೆಗೆದುಕೊಂಡು ಬಂದಿದ್ದರೆ ಹೆಚ್ಚುವರಿ ಖರ್ಚು ಆಗುತ್ತಲೇ ಇರಲಿಲ್ಲ. ಅದೆಷ್ಟು ದಡ್ಡರಿರಬೇಕು ಅವರು ಎಂದು ಅಲ್ಲಿನ ನೆಟ್ಟಿಗರು ಸ್ನೇಹಿತರ ಕಾಲೆಳೆಯಲಾರಂಭಿಸಿದ್ದಾರೆ. (ಏಜೆನ್ಸೀಸ್​)

ಹಳೆಯ ಗಾಡಿ ಮಾಲೀಕರಿಗೆ ಹೊಸ ಟ್ಯಾಕ್ಸ್​! ಶೀಘ್ರವೇ ಜಾರಿಯಾಗಲಿದೆ ಗ್ರೀನ್​ ಟ್ಯಾಕ್ಸ್​ ನಿಯಮ

ನೀ ಬಂದ ಮೇಲೆ ಸಾಲ ಹೆಚ್ಚಾಯಿತೆಂದು ಸೊಸೆಯನ್ನು ಹೀಯಾಳಿಸಿದ ಮಾವ; ಕೆಲವೇ ದಿನಗಳಲ್ಲಿ ಹಾದಿಯ ಹೆಣವಾದ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top