ಅನಂತ ಅವರು ಇಲ್ಲಿನ ರೈಲ್ ಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಶೇ. 89ರಷ್ಟು ರೈಲು ಮಾರ್ಗ ವಿದ್ಯುದ್ದೀಕರಣಗೊಂಡಿದೆ. ಘಾಟ್ ಪ್ರದೇಶದ ವಿವಿಧೆಡೆ ವಿದ್ಯುದ್ದೀಕರಣ ಕಾಮಗಾರಿ ಬಾಕಿ ಉಳಿದಿದೆ. ಇದೇ ಸೆಪ್ಟೆಂಬರ್ವೊಳಗಾಗಿ ಇನ್ನೂ ಶೇ. 8ರಷ್ಟು ಇಲೆಕ್ಟ್ರಿಫಿಕೇಶನ್ ಮಾರ್ಗ ಪೂರ್ಣಗೊಳಿಸುವ ಗುರಿ ಹೊಂದಿದ್ದಾಗಿ ಹೇಳಿದರು. ನೈಋತ್ಯ ರೈಲ್ವೆ ವಲಯ ಈ ಬಾರಿಯ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 9,487.88 ಕೋಟಿ ರೂ. ಒಟ್ಟಾರೆ ಆದಾಯ ಗಳಿಸಿದ್ದು, ಕಳೆದ ಆರ್ಥಿಕ ವರ್ಷದ 8,489.67 ಕೋಟಿ ರೂ. ಆದಾಯಕ್ಕೆ ಹೋಲಿಸಿದರೆ, ಈ ವರ್ಷ ಶೇ. 11.76ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು. ರೈಲುಗಳ ಸಮಯ ಪರಿಪಾಲನೆಯಡಿ ರೈಲ್ವೆ ಸಚಿವಾಲಯ ನೈಋತ್ಯ ರೈಲ್ವೆಗೆ ಶೇ. 90ರಷ್ಟು ಗುರಿ ನೀಡಿದ್ದು, ಶೇ. 89.37ರಷ್ಟು ಗುರಿ ಸಾಧಿಸಲಾಗಿದೆ. 6 ವಿಶೇಷ ರೈಲುಗಳನ್ನು ಸಾಮಾನ್ಯ ರೈಲುಗಳನ್ನಾಗಿ ಬದಲಾಯಿಸಲಾಗಿದೆ. 6 ಎಕ್ಸ್ಪ್ರೆಸ್ ರೈಲುಗಳನ್ನು ಸೂಪರ್ಫಾಸ್ಟ್ ರೈಲುಗಳನ್ನಾಗಿ ಪರಿವರ್ತಿಸಲಾಗಿದೆ. 27 ಮೆಮು ರೈಲುಗಳ ಸಂಚಾರಕ್ಕೆ ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವಾಲಯದಿಂದ ಅನುಮೋದನೆ ದೊರೆತ ತಕ್ಷಣ ಅವುಗಳ ಸಂಚಾರ ಆರಂಭಿಸಲಾಗುವುದು ಎಂದು ಹೇಳಿದರು.ಸಿಪಿಆರ್ಒ ಡಾ. ಮಂಜುನಾಥ ಕನಮಡಿ ಹಾಗೂ ವಿವಿಧ ವಿಭಾಗದ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಇನ್ನಷ್ಟು ಓದಿ