Dailyhunt
4,4,4,4,4... ಕೊಹ್ಲಿ ಸ್ಫೋಟಕ ಓಪನಿಂಗ್​ ನೀಡಿದ್ರೂ ಪ್ರಯೋಜನವಿಲ್ಲ! ಗಿಲ್​ ಪಡೆಗೆ 156 ರನ್​ಗಳ ಸಾಧಾರಣ ಗುರಿ | RCB vs GT

4,4,4,4,4... ಕೊಹ್ಲಿ ಸ್ಫೋಟಕ ಓಪನಿಂಗ್​ ನೀಡಿದ್ರೂ ಪ್ರಯೋಜನವಿಲ್ಲ! ಗಿಲ್​ ಪಡೆಗೆ 156 ರನ್​ಗಳ ಸಾಧಾರಣ ಗುರಿ | RCB vs GT

RCB vs GT: ಇಂದು (ಏ.30) ಅಹಮದಾಬಾದ್​ನಲ್ಲಿ ಗುಜರಾತ್​ ಟೈಟನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ 19ನೇ ಆವೃತ್ತಿಯ ಐಪಿಎಲ್​ ಪಂದ್ಯ ನಡೆಯುತ್ತಿದ್ದು, ಇದೀಗ ಮೊದಲ ಇನ್ನಿಂಗ್ಸ್​ ಮುಕ್ತಾಯಗೊಂಡಿದೆ.
ಟಾಸ್​ ಗೆದ್ದ ಶುಭಮನ್​ ಗಿಲ್​, ಆರ್​ಸಿಬಿಗೆ ಮೊದಲು ಬ್ಯಾಟ್​ ಮಾಡುವಂತೆ ತಿಳಿಸಿದರು.
ಅಂತೆಯೇ, ಬ್ಯಾಟಿಂಗ್​ಗಿಳಿದ ಆರಂಭಿಕರಾದ ಜಾಕಬ್​ ಬೆಥಲ್​ ಮತ್ತು ವಿರಾಟ್​ ಕೊಹ್ಲಿ ಪೈಕಿ ಕೊಹ್ಲಿ ಸ್ಫೋಟಕ ಓಪನಿಂಗ್ ನೀಡಿದರು. ಸಿರಾಜ್​ ಬೌಲಿಂಗ್​ನಲ್ಲಿ ಕೇವಲ 5 ರನ್​ಗೆ ಬೆಥಲ್​ ವಿಕೆಟ್​ ಒಪ್ಪಿಸಿದರು. ಆದರೆ, ಕಗಿಸೋ ರಬಾಡ ಅವರ ಬೌಲಿಂಗ್​ನಲ್ಲಿ ಕಿಂಗ್​ ಕೊಹ್ಲಿ ಬ್ಯಾಕ್​ ಟು ಬ್ಯಾಕ್​ ಐದು ಬೌಂಡರಿ ಬಾರಿಸಿದರು. ಮೊದಲ 10 ಬಾಲ್​ಗೆ 28 ರನ್​ ಕಲೆಹಾಕಿದ ಕೊಹ್ಲಿ, ಹೆಚ್ಚು ಕಾಲ ಕ್ರೀಸ್​ಗೆ ಅಂಟಿ ನಿಲ್ಲುವಲ್ಲಿ ವಿಫಲರಾದರು.

ಟಾಪ್​ ಆರ್ಡರ್​ ಕುಸಿದ ಬೆನ್ನಲ್ಲೇ ಕಣಕ್ಕಿಳಿದ ದೇವದತ್ತ ಪಡಿಕಲ್​ (24 ಎಸೆತಗಳಲ್ಲಿ 40 ರನ್​) ಎಂದಿನಂತೆ ತಂಡಕ್ಕೆ ತಮ್ಮ ಕೊಡುಗೆ ನೀಡಿ ಹೊರಟರು. ಕ್ಯಾಪ್ಟನ್ ರಜತ್ ಪಾಟೀದಾರ್ (19)​, ಜಿತೇಶ್​ ಶರ್ಮ (1), ಟಿಮ್ ಡೇವಿಡ್ (9)​, ಕೃನಾಲ್​ ಪಾಂಡ್ಯ(4) ರೊಮಾರಿಯೋ ಶೆಫರ್ಡ್​ (17) ರಂತಹ ಸ್ಟಾರ್​ ಬ್ಯಾಟರ್​ಗಳು ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಲು ತೀರ ಹೆಣಗಾಡಿದರು. ಜಿಟಿ ಪರ ಬೌಲಿಂಗ್ ಮಾಡಿದ ಮೊಹಮ್ಮದ್​ ಸಿರಾಜ್​, ಕಗಿಸೊ ರಬಾಡ ತಲಾ ಒಂದು ವಿಕೆಟ್​ ಪಡೆದರೆ, ರಶೀದ್​ ಖಾನ್​, ಜೇಸನ್​ ಹೋಲ್ಡರ್​, ಅರ್ಷದ್​ ಖಾನ್​ ತಲಾ ಎರಡು ವಿಕೆಟ್​ ಪಡೆದು ಮಿಂಚಿದರು.

20 ಓವರ್​ನಲ್ಲಿ ಕೇವಲ 155 ರನ್​ಗೆ ಆರ್​ಸಿಬಿ ಆಲ್​ಔಟ್​ ಆಯಿತು. ಈ ಸಾಧಾರಣ ಗುರಿಯನ್ನು ಶುಭಮನ್ ಗಿಲ್​ ಪಡೆ ಕಡಿಮೆ ಓವರ್​ನೊಳಗೆ ಚೇಸ್​ ಮಾಡಲಿದ್ಯಾ ಅಥವಾ ಬಹುಬೇಗನೇ ವಿಕೆಟ್​ಗಳನ್ನು ಕಳೆದುಕೊಂಡು ಪಂದ್ಯ ಸೋಲಲಿದ್ಯಾ? ಎಂಬುದನ್ನು ದ್ವಿತೀಯ ಇನ್ನಿಂಗ್ಸ್​ನಲ್ಲಿ ನೋಡಿ ತಿಳಿಯಬೇಕಿದೆ.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani