ವಿಜಯವಾಣಿ

482k Followers

52ರ ಶಿಕ್ಷಕನಿಗೆ ಲವ್​ ಪ್ರಪೋಸ್​ ಮಾಡಿ ಮದ್ವೆಯಾದ 20ರ ವಿದ್ಯಾರ್ಥಿನಿ: ಈಕೆ ಕೊಟ್ಟ ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ!

30 Oct 2022.2:12 PM

ಸ್ಲಮಾಬಾದ್​: ಪಾಕಿಸ್ತಾನ ಮೂಲದ 20 ವರ್ಷದ ವಿದ್ಯಾರ್ಥಿನಿಯೊಬ್ಬಳು 52 ವರ್ಷದ ತನ್ನ ಶಿಕ್ಷಕರೊಬ್ಬರನ್ನು ಪ್ರೀತಿಸಿ ಮದುವೆಯಾಗಿರುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುವುದರ ಜೊತೆಗೆ ಸಂಚಲನ ಸೃಷ್ಟಿಸಿದೆ. ಇಬ್ಬರ ಲವ್​ ಸ್ಟೋರಿಯೇ ತುಂಬಾ ರೋಚಕವಾಗಿದೆ.

ವಿದ್ಯಾರ್ಥಿನಿಯ ಹೆಸರು ಜೊಯಾ ನೂರ್​ ಮತ್ತು ಶಿಕ್ಷಕನ ಹೆಸರು ಸಾಜಿದ್​ ಆಲಿ. ಇಬ್ಬರ ನಡುವೆ 32 ವರ್ಷ ವಯಸ್ಸಿನ ಅಂತರವಿದೆ. ಬಿ.ಕಾಂ ವಿದ್ಯಾರ್ಥಿನಿಯಾಗಿರುವ ಜೊಯಾ, ಸಾಜಿದ್​ ಪ್ರೀತಿಯ ಬಲೆಯಲ್ಲಿ ಬಿದ್ದು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾಳೆ. ಪಾಲಕರು ಸೇರಿದಂತೆ ಸಾಕಷ್ಟು ವಿರೋಧದ ನಡುವೆಯೂ ಇಬ್ಬರು ಮದುವೆ ಆಗಿದ್ದಾರೆ. ಇಬ್ಬರು ಯೂಟ್ಯೂಬ್​ ಚಾನೆಲ್​ ಒಂದಕ್ಕೆ ಸಂದರ್ಶನ ನೀಡಿ, ತಮ್ಮ ಲವ್​ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಇದೀಗ ಸಂದರ್ಶನದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಸಂದರ್ಶನದಲ್ಲಿ ಮಾತನಾಡಿರುವ ಜೊಯಾ, ಸಾಜಿದ್​ ಅವರ ವಿಭಿನ್ನ ವ್ಯಕ್ತಿತ್ವವೇ ಅವರ ಪ್ರೀತಿಯ ಬಲೆಯಲ್ಲಿ ಬೀಳಲು ಕಾರಣ. ಮದುವೆ ಆಗುವ ಬಯಕೆಯನ್ನು ಅವರ ಮುಂದೆ ಪ್ರಸ್ತಾಪ ಮಾಡಿದೆ. ಆದರೆ, ಆರಂಭದಲ್ಲಿ ಅದನ್ನು ನಿರಾಕರಿಸಿದರು. ನಮ್ಮಿಬ್ಬರ ನಡುವೆ 32 ವರ್ಷ ವಯಸ್ಸಿನ ಅಂತರವಿದೆ. ಹೀಗಾಗಿ ಮದುವೆ ಆಗಲು ಸಾಧ್ಯವಿಲ್ಲ ಎಂದು ಹೇಳಿದರು. ಇದಾದ ಬಳಿಕ ಒಂದು ವಾರ ಸಮಯ ಕೇಳಿದರು. ಆ ಸಮಯದಲ್ಲಿ ನನ್ನ ಮೇಲೆ ಪ್ರೀತಿಯಾಗಿ ಒಪ್ಪಿಕೊಂಡರು. ಆದರೆ, ಇಬ್ಬರ ಪ್ರೀತಿಗೆ ಎರಡು ಮನೆಯಿಂದ ವಿರೋಧ ಇತ್ತು. ಅಂತಿಮವಾಗಿ ಎಲ್ಲ ವಿರೋಧಗಳನ್ನು ಪಕ್ಕಕ್ಕಿಟ್ಟು ಇಬ್ಬರು ಮದುವೆ ಆದೆವು ಎಂದು ಜೊಯಾ ಹೇಳಿದ್ದಾರೆ.

ಮದುವೆಯ ಬಳಿಕ ಇಬ್ಬರು ಅಮೇಜಾನ್​ ಎಫ್​ಬಿಎ ತರಬೇತಿಯನ್ನು ಪಡೆದುಕೊಂಡೆವು. ಇದೀಗ ಇಬ್ಬರು ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದೇವೆ. ಬಿ.ಕಾಂ ಅಧ್ಯಯನದಿಂದ ಪಡೆದ ಜ್ಞಾನ ಮತ್ತು ತನ್ನ ಶಿಕ್ಷಕರ ಅನುಭವವನ್ನು ಒಟ್ಟುಗೂಡಿಸಿ ಉತ್ತಮ ಆದಾಯವನ್ನು ಗಳಿಸಲು ಪ್ರಾರಂಭಿಸಿರುವುದಾಗಿ ಜೊಯಾ ತಿಳಿಸಿದರು. ಪ್ರತಿ ತಿಂಗಳು ಲಕ್ಷಾಂತರ ಸಂಪಾದನೆ ಮಾಡುತ್ತಾ ಇಬ್ಬರು ಸುಖಮಯ ಜೀವನವನ್ನು ಸಾಗಿಸುತ್ತಿದ್ದಾರೆ. (ಏಜೆನ್ಸೀಸ್​)

ಬಸ್​ ನಿಲ್ದಾಣ ನಿರ್ಮಿಸಿ ಕನ್ನಡದ ಕಂಪು ಪಸರಿಸುತ್ತಿರುವ ಸುರೇಶ್​ ಕುಮಾರ್​ರನ್ನು ಶ್ಲಾಫಿಸಿದ ಪ್ರಧಾನಿ ಮೋದಿ

ತಂದೆಯಿಂದಲೇ ಕಿಡ್ನಾಪ್​ ಆಗಿದ್ದ 12 ದಿನದ ಹಸುಗೂಸಿಗೆ ಸೂಕ್ತ ಸಮಯದಲ್ಲಿ ಹಾಲುಣಿಸಿ ಜೀವ ಉಳಿಸಿದ ಪೊಲೀಸ್​ ಅಧಿಕಾರಿ

ಸೌಂದರ್ಯ ಕಾಳಜಿಯೇ ಸಮಂತಾಗೆ ಮುಳುವಾಯ್ತಾ? ಮಯೋಸಿಟಿಸ್​ ಕಾಯಿಲೆಗೆ ಕಾರಣ ಬಹಿರಂಗ

ಸೌಂದರ್ಯ ಕಾಳಜಿಯೇ ಸಮಂತಾಗೆ ಮುಳುವಾಯ್ತಾ? ಮಯೋಸಿಟಿಸ್​ ಕಾಯಿಲೆಗೆ ಕಾರಣ ಬಹಿರಂಗ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags