Dailyhunt
ಆ 'ಜ್ಯೋತಿ' ಇದೆ ಎಂದು ಗೃಹಜ್ಯೋತಿ ನೋಂದಣಿ ಕಡೆಗಣಿಸಬೇಡಿ!; ಇಲ್ಲಿದೆ ವಿವರ ಗಮನಿಸಿ..

ಆ 'ಜ್ಯೋತಿ' ಇದೆ ಎಂದು ಗೃಹಜ್ಯೋತಿ ನೋಂದಣಿ ಕಡೆಗಣಿಸಬೇಡಿ!; ಇಲ್ಲಿದೆ ವಿವರ ಗಮನಿಸಿ..

ಬೆಂಗಳೂರು: ಕಾಂಗ್ರೆಸ್​ನ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ, ಪ್ರತಿ ಮನೆಗೂ ಮಾಸಿಕ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಗೆ ಈಗಾಗಲೇ 51 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಿಕೊಂಡಿದ್ದು, ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ.

ಜುಲೈ ತಿಂಗಳ ಬಿಲ್​ಗೆ ಅನ್ವಯಿಸುವಂತೆ ಅಂದರೆ ಆಗಸ್ಟ್​ನಲ್ಲಿ ಬರುವ ಬಿಲ್​ನಲ್ಲಿ ನೋಂದಾಯಿತ ಗ್ರಾಹಕರು 200 ಯುನಿಟ್ ಒಳಗಿನ ವಿದ್ಯುತ್ ಬಳಸಿದ್ದರೆ ಅವರಿಗೆ ಶೂನ್ಯ ಬಿಲ್ ಬರಲಿದೆ. ಅಂದರೆ ಗೃಹಜ್ಯೋತಿ ಯೋಜನೆಗಾಗಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಭೀಕರ ಅಪಘಾತ: ಮಿನಿ ಬಸ್​ಗೆ ಮತ್ತೊಂದು ವಾಹನ ಡಿಕ್ಕಿ, ಒಬ್ಬ ಸ್ಥಳದಲ್ಲೇ ಸಾವು

3 ಕೋಟಿ ಪ್ಯಾಕೇಜ್ ಗಿಟ್ಟಿಸಿದ ಎಲ್‌ಪಿಯು ಪದವೀಧರ!

ಕೆಲವರು ತಾವು ಭಾಗ್ಯಜ್ಯೋತಿ, ಕುಟೀರಜ್ಯೋತಿ ಅಥವಾ ಅಮೃತಜ್ಯೋತಿ ಯೋಜನೆಯ ಫಲಾನುಭವಿಗಳು ಎಂದು ಗೃಹಜ್ಯೋತಿಗೆ ಯೋಜನೆಗೆ ನೋಂದಣಿ ಮಾಡಿಸಿಕೊಂಡಿಲ್ಲ ಎಂಬುದು ವಿದ್ಯುತ್ ಸರಬರಾಜು ಕಂಪನಿಗಳ ಗಮನಕ್ಕೆ ಬಂದಿದ್ದು, ಆ ಕುರಿತು ಕಿವಿಮಾತನ್ನು ಹೇಳಿದೆ.

ನೀವು ಈಗಾಗಲೇ ಭಾಗ್ಯಜ್ಯೋತಿ, ಕುಟೀರಜ್ಯೋತಿ, ಅಮೃತಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದರೂ ಗೃಹಜ್ಯೋತಿಯ ಪ್ರಯೋಜನ ಪಡೆಯಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ವಿದ್ಯುತ್ ಸರಬರಾಜು ಕಂಪನಿಗಳು ತಿಳಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: Vijayvani