Sunday, 22 Nov, 2.31 pm ವಿಜಯವಾಣಿ

ಮುಖಪುಟ
ಆನ್​ಲೈನ್​ನಲ್ಲಿ ಲೈಟ್​ ಆರ್ಡರ್​ ಮಾಡಿದವರಿಗೆ ಬಂತು ಜೇಡ! ಆನ್​ಲೈನ್​ ಗ್ರಾಹಕರೇ ಎಚ್ಚರ

ಲಂಡನ್​: ಆನ್​ಲೈನ್​ನಲ್ಲಿ ಖರೀದಿ ಮಾಡುವುದು ಎಷ್ಟು ಸುಲಭವೋ ಅಷ್ಟು ನಂಬಿಕೆಯಿಂದ ಹೊರಗುಳಿದ ವಿಚಾರ ಕೂಡ. ಕೇವಲ ಫೋಟೋ ನೋಡಿ ತರಿಸಿಕೊಳ್ಳುವ ಎಷ್ಟೋ ವಸ್ತುಗಳು ನಮ್ಮ ನಿರೀಕ್ಷೆಗಿಂತ ಕಳಪೆಯಾಗಿಬಿಡುತ್ತವೆ. ಇನ್ನು ಕೆಲವರಿಗಂತು ಮೊಬೈಲ್​ ಬುಕ್​ ಮಾಡಿದರೆ, ಕಲ್ಲು ಬಂದಿರುವ ಘಟನೆಗಳನ್ನೂ ನಾವು ನೋಡಿದ್ದೇವೆ. ಅದರೆ ಇಲ್ಲೊಬ್ಬ ದಂಪತಿ ಅಲಂಕಾರಕ್ಕೆಂದು ಲೈಟ್​ ಬುಕ್​ ಮಾಡಿದರೆ ದೊಡ್ಡ ಗಾತ್ರದ ಜೇಡವೇ ಪಾರ್ಸೆಲ್​ನಲ್ಲಿ ಬಂದುಬಿಟ್ಟಿದೆ.

VIDEO| ಬಾವಿಯಲ್ಲಿ ಬಿದ್ದ ಬೆಕ್ಕಿನ ಜೀವ ಉಳಿಸಿದ ರೈತ! ಸಾಹಸಕ್ಕೆ ಮೆಚ್ಚುಗೆಯ ಮಹಾಪೂರ

ಬ್ರಿಟನ್​ನ ಮಾರ್ಕ್​ ಮತ್ತು ಗೆಮ್ಮಾ ಸ್ಮಿತ್​ ಕ್ರಿಸ್​ಮಸ್​ ಹಬ್ಬವನ್ನು ವಿಜೃಂಭಣೆಯಿಂದ ತಯಾರಿಸಲು ಸಿದ್ಧರಾಗುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರಸಿದ್ಧ ಆನ್​ಲೈನ್​ ಮಾರ್ಕೆಟ್​ ಒಂದರಲ್ಲಿ ಲೈಟ್​ಗಳನ್ನು ಬುಕ್​ ಮಾಡಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆ ಅದರ ಪಾರ್ಸೆಲ್​ ಮನೆಗೆ ಬಂದಿದೆ. ಯಾವುದೋ ಕೆಲಸದಲ್ಲಿ ನಿರತರಾಗಿದ್ದ ದಂಪತಿ ಎರಡು ದಿನ ಪಾರ್ಸೆಲ್​ನ್ನು ತೆಗೆದು ನೋಡಿಲ್ಲ. ಪಾರ್ಸೆಲ್​ ಬಂದು ಎರಡು ದಿನಗಳ ನಂತರ ಪತಿ ಕೆಲಸಕ್ಕೆ ಹೋದ ಸಮಯದಲ್ಲಿ ಪತ್ನಿ ಪಾರ್ಸೆಲ್​ ತೆರೆದಿದ್ದಾರೆ. ಪಾರ್ಸೆಲ್​ ತೆರೆಯುತ್ತಿದ್ದಂತೆ ಬೆಚ್ಚಿ ಬಿಚ್ಚಿದ್ದಾರೆ.

ಪಾರ್ಸೆಲ್​ನಲ್ಲಿ ಇರಬೇಕಿದ್ದ ಲೈಟ್​ಗಳ ಬದಲಾಗಿ ಸುಮಾರು 10 ಸೆಂ.ಮೀ ಉದ್ದದ ಜೇಡವಿತ್ತಂತೆ. ಅದನ್ನು ಕಂಡ ಪತ್ನಿ ಗಾಬರಿಗೊಂಡಿದ್ದಾರೆ. ಕೂಡಲೇ ಗಂಡನಿಗೆ ಕರೆ ಮಾಡಿ ಮನೆಗೆ ಬರಲು ಹೇಳಿದ್ದಾರೆ. ಮನೆಗೆ ಬಂದ ಗಂಡನಿಗೆ ಪತ್ನಿ ಹೆದರಿದ ಬಗೆ ಕಂಡು ನಗು ಬಂದಿದ್ದರೆ, ಆನ್​ಲೈನ್​ನಲ್ಲಿ ಮೋಸ ಹೋದೆವಲ್ಲ ಎಂದು ಸಿಟ್ಟು ಬಂದಿದೆ.

ಕೇರಳದ ಮುಸ್ಲಿಂ ಬಾಹುಳ್ಯದ ಜಿಲ್ಲೆಯಲ್ಲಿ ಬಿಜೆಪಿಯಿಂದ ಹೀಗೊಂದು ದಾಖಲೆ!

ಈ ವಿಚಾರವನ್ನು ಮಾರ್ಕ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ಹೆಂಡತಿ ಚಿಕ್ಕ ಮಗುವಿನಂತೆ ಹೆದರಿಕೊಂಡಿದ್ದು ನೋಡಿ ನನಗೆ ನಗು ಬಂದಿತು ಎಂದು ಹೇಳಿದ್ದಾರೆ. ಜೇಡದ ಫೋಟೋ ಹಂಚಿಕೊಂಡಿರುವ ಅವರು, ಈ ಜೇಡ ಯಾವ ತಳಿಗೆ ಸೇರಿರುವುದು ಎನ್ನುವುದು ಗೊತ್ತಿದ್ದರೆ ತಿಳಿಸಿ ಎಂದೂ ಹೇಳಿದ್ದಾರೆ. (ಏಜೆನ್ಸೀಸ್​)

ಬೆದರಿಕೆ, ನಿಂದನೆ, ಅವಮಾನಕರ ಪೋಸ್ಟ್​ ಮಾಡಿದರೆ 5 ವರ್ಷ ಜೈಲು, 10 ಸಾವಿರ ರೂ ದಂಡ!

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top