Dailyhunt
ಆನ್​ಲೈನ್​ ಖರೀದಿ ಆಯಪ್‌ಗಳು ಹೆಲ್ತ್​, ವೆಲ್ತ್​ಗೆ ಮಾರಕ; ಹೇಗೆ ಗೊತ್ತಾ?..Quit Quick Commerce App

ಆನ್​ಲೈನ್​ ಖರೀದಿ ಆಯಪ್‌ಗಳು ಹೆಲ್ತ್​, ವೆಲ್ತ್​ಗೆ ಮಾರಕ; ಹೇಗೆ ಗೊತ್ತಾ?..Quit Quick Commerce App

Quit Quick Commerce App:ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆನ್​ಲೈನ್​ ಮೂಲಕವೇ ನಡೆಯುತ್ತದೆ. ಹಣ ಪಾವತಿ, ಬಟ್ಟೆ ಖರೀದಿ, ತರಕಾರಿ, ಹಣ್ಣು ಎಲ್ಲದಕ್ಕು ಬ್ಲಿಂಕಿಟ್, ಇನ್​ಸ್ಟಾ ಮಾರ್ಟ್​, ಫ್ಲಿಪ್​ಕಾರ್ಟ್​ ಸೇರಿದಂತೆ ಹಲವು ಡಿಜಿಟಲ್​ ಫ್ಲ್ಯಾಟ್​ಫಾರ್ಮ್​ಗಳಿವೆ.
ಬೆಳೆಗೆದ್ದು ಹಾಲು, ಸೊಪ್ಪು, ಬ್ರೆಡ್, ಎಣ್ಣೆ, ತಿಂಡಿ ಏನೇ ಬೇಕಿದ್ದರೂ ಕುಳಿತಲ್ಲೇ ಬುಕ್​ ಮಾಡಿಬಿಡುತ್ತೇವೆ. ಹತ್ತು ನಿಮಿಷದಲ್ಲಿ ಇದು ನಿಮ್ಮ ಮನೆ ಬಾಗಿಲಿನಲ್ಲಿ ಬಂದು ನಿಲ್ಲುತ್ತದೆ. ಆದರೆ, ನಮಗೆ ಕ್ವಿಕ್ ಕಾಮರ್ಸ್ ಆಯಪ್‌ಗಳು ನಮ್ಮ ಆರೋಗ್ಯವನ್ನು ಕಸಿದುಕೊಳ್ಳುತ್ತವೆ ಎನ್ನುವ ಅರಿವೇ ಇಲ್ಲ. ಡೆಲಿವರಿ ಚಾರ್ಜಸ್​ ಉಳಿಸುವ ಭರದಲ್ಲಿ ತಿಂಗಳಿಗೆ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವ ಬಗ್ಗೆಯೂ ಗೊತ್ತಿರೋದಿಲ್ಲ.
ಕ್ವಿಕ್ ಕಾಮರ್ಸ್ ಆಯಪ್‌ಗಳಿಂದ ನಮ್ಮ ದೇಹದ ಮೇಲಾಗುತ್ತಿರುವ ಪರಿಣಾಮ ಹಾಗೂ ನಮ್ಮಿಂದ ಲೆಕ್ಕವಿಲ್ಲದಷ್ಟು ಹಣ ಹೇಗೆ ಖರ್ಚಾಗುತ್ತಿದೆ, ನಾವು ಕಳೆದುಕೊಳ್ಳುತ್ತಿರುವುದು ಏನನ್ನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಏನಿದು ಫ್ರಿಕ್ಷನ್​ಲೆಸ್ ಸ್ಪೆಂಡಿಂಗ್​?

ದಿನದಿಂದ ದಿನಕ್ಕೆ ನಾವು ಆನ್​ಲೈನ್​​ ಮಾರ್ಟ್​ಗಳ ದಾಸರಾಗಿದ್ದೇವೆ. ಕ್ಯಾಶ್ ಕ್ಯಾರಿ ಮಾಡುವ ಅಭ್ಯಾಸವನ್ನು ಬಿಟ್ಟು, ಆನ್​ಲೈನ್​ ಪಾವತಿ ಮಾಡಿ ನಮ್ಮಿಂದ ಹಣ ಎಷ್ಟು ಖರ್ಚಾಗುತ್ತಿದೆ ಎನ್ನುವುದು ಗೊತ್ತೆ ಆಗೋದಿಲ್ಲ. ಕ್ವಿಕ್​ ಕಾಮರ್ಸ್​​ ಆಯಪ್‌ ಬಳಕೆ ಮಾಡುವಾಗ ನಮಗೆ ಒಂದಷ್ಟು ತರಕಾರಿ ಮಾತ್ರ ಬೇಕಾಗಿರುತ್ತದೆ. ಇದಕ್ಕೆ 50 ರೂ. ಆಗಿರುತ್ತದೆ. ಆದರೆ, ಡೆಲಿವರಿ ಚಾರ್ಜಸ್​​ ಉಳಿಸುವ ಭರದಲ್ಲಿ 150 ರೂ.ಗೆ ಬೇಕಾದನ್ನು ಖರೀದಿ ಮಾಡಿಬಿಡುತ್ತೇವೆ. ಇದು ಒಮ್ಮೆ ಮಾತ್ರವಲ್ಲ ಇಡೀ ತಿಂಗಳು ದಿನಕ್ಕೆ ನೂರರಂತೆ ಖರ್ಚು ಮಾಡುತ್ತಾ ಹೋಗುತ್ತೇವೆ. ಇದನ್ನು Frictionless spending ಎಂದು ಅರ್ಥಶಾಸ್ತ್ರದಲ್ಲಿ ಕರೆಯಲಾಗುತ್ತದೆ.

ದೇಹಕ್ಕೆ ವ್ಯಾಯಾಮವೇ ಇಲ್ಲ

ಮುಂಚೆಯೆಲ್ಲ ನಮಗೆ ಯಾವುದೇ ವಸ್ತು ಬೇಕಿದ್ದರೂ ಅಂಗಡಿಗೆ ನಡೆದುಕೊಂಡು ಹೋಗಿ ತರುತ್ತಿದ್ದೆವು. ಇದು ಒಂದು ಕಡೆಯಿಂದ ವ್ಯಾಯಾಮವೂ ಹೌದು. ಆದರೆ, ಈಗ ತುರ್ತು ಸ್ಥಿತಿಯಲ್ಲೇ ಎಲ್ಲವನ್ನು ಆನ್​ಲೈನ್​ನಲ್ಲಿ ಖರೀದಿ ಮಾಡಿ, ಅಗತ್ಯವಿಲ್ಲದ ವಸ್ತು ಖರೀದಿ ಮಾಡುತ್ತಿದ್ದೇವೆ. ದೇಹಕ್ಕೆ ಸಿಗುತ್ತಿದ್ದ ಸಣ್ಣ ವ್ಯಾಯಮದ ಕೊರತೆ ಉಂಟಾಗುತ್ತಿದೆ.

ಚೌಕಾಸಿ ಮಾಡುವುದನ್ನೇ ಮರೆಯುತ್ತಿದ್ದೇವೆ

ಮನೆಯಲ್ಲಿ ಏನಿದೆ ಏನಿಲ್ಲ ಎನ್ನುವುದನ್ನು ಪಟ್ಟಿ ಮಾಡುವುದು, ಮಾರುಕಟ್ಟೆಯಲ್ಲಿ ದುಬಾರಿ ವಸ್ತುಗೆ ಚೌಕಾಸಿ ಮಾಡುವ ಹಳೆಯ ಅಭ್ಯಾಸಗಳು ಸ್ಥಗಿತಗೊಂಡಿದೆ. ಆನ್​​ಲೈನ್​ನಲ್ಲಿ ತೋರಿಸಿದ ಹಣವನ್ನು ಪಾವತಿ ಮಾಡಿ ಸುಮ್ಮನಾಗುತ್ತಿದ್ದೇವೆ. ರಾತ್ರಿ ಫುಡ್​ಆರ್ಡರ್​ ಮಾಡಿ ತಿನ್ನುವ ಅಭ್ಯಾಸವೂ ಈ ಕ್ವಿಕ್​ ಕಾಮರ್ಸ್​​ ಆಯಪ್‌ ಬಳಕೆ ನಂತರ ಬಂದಿದೆ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ, (ಏಜೆನ್ಸೀಸ್​).

ಮೇಲಿನ ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಮಾಹಿತಿಯನ್ನು ಕ್ರೋಢಿಕರಿಸಿ ಬರೆಯಲಾಗಿದೆ.



ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani