ಚೆನ್ನೈ: ಆಸ್ಟ್ರೆಲಿಯಾದ ಬಿಗ್ ಬ್ಯಾಷ್ ಲೀಗ್ (Big Bash League) ಟಿ20 ಟೂರ್ನಿಯ 2026-27ರ ಸಾಲಿನ ಆರಂಭಿಕ ಪಂದ್ಯಕ್ಕೆ ಡಿಸೆಂಬರ್ನಲ್ಲಿ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಭಾರತೀಯ ವೀಕ್ಷಕರನ್ನೂ ಸೆಳೆಯುವ ಉದ್ದೇಶದ ಈ ಯೋಜನೆಯನ್ನು ಹಾಲಿ ವರ್ಷ ಫೆ ಬ್ರವರಿಯಲ್ಲೇ ಬಹಿರಂಗಪಡಿಸಿದ್ದ ಕ್ರಿಕೆಟ್ ಆಸ್ಟ್ರೆಲಿಯಾ (ಸಿಎ), ಇದೀಗ ತಮಿಳುನಾಡು ಕ್ರಿಕೆಟ್ ಸಂಸ್ಥೆ ಮತ್ತು ಬಿಸಿಸಿಐನಿಂದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ.
ಸಿಎಸ್ಕೆ-ಸನ್ರೈಸರ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ಸಿಎಯ ಐವರು ಅಧಿಕಾರಿಗಳ ತಂಡ ಯಶಸ್ವಿ ಮಾತುಕತೆ ನಡೆಸಿದೆ. ಆದರೆ ಪಂದ್ಯ ಆಯೋಜನೆಗೆ ಸರ್ಕಾರದ ಕಡೆಯಿಂದ ಅಂತಿಮ ಅನುಮತಿ ಇನ್ನೂ ಬಾಕಿ ಇದೆ. ಅಲ್ಲದೆ ಆಸ್ಟ್ರೇಲಿಯಾದಿಂದ ಚೆನ್ನೈಗೆ ನೇರ ವಿಮಾನ ಇಲ್ಲದೆ ಇರುವುದು ಕೂಡ ಹಿನ್ನಡೆ ಎನಿಸಿದೆ. ಇನ್ನು ಆಸ್ಟ್ರೇಲಿಯಾದ ಸಮಯಕ್ಕೆ ಹೊಂದಿಕೆಯಾಗುವಂತೆ ಪಂದ್ಯವನ್ನು ಆಯೋಜಿಸುವುದು ಕೂಡ ಸವಾಲೆನಿಸಿದೆ.
ಇನ್ನಷ್ಟು ಓದಿ
ಇನ್ನಷ್ಟು ಓದಿ

