Dailyhunt
ಐಪಿಎಲ್​ ಟೂರ್ನಿ ನಡುವೆಯೇ ಫ್ರಾಂಚೈಸಿ ಮಾಲೀಕರ ಸಭೆ ಕರೆದ ಬಿಸಿಸಿಐ

ಐಪಿಎಲ್​ ಟೂರ್ನಿ ನಡುವೆಯೇ ಫ್ರಾಂಚೈಸಿ ಮಾಲೀಕರ ಸಭೆ ಕರೆದ ಬಿಸಿಸಿಐ

ವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ ಆರಂಭಗೊಂಡು 13 ಪಂದ್ಯಗಳು ಮುಕ್ತಾಯಗೊಂಡಿದ್ದು, ಟೂರ್ನಿ ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಇದರ ನಡುವೆಯೇ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಐಪಿಎಲ್‌ನಲ್ಲಿ ಆಡುವ ಎಲ್ಲ ತಂಡಗಳ ಮಾಲೀಕರ ಸಭೆ ಕರೆದಿದೆ.

ಏಪ್ರಿಲ್​ 16ರಂದು ಸಭೆ ಕರೆಯಲಾಗಿದ್ದು, ಅಂದಿನ ದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್​ ಟೈಟಾನ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಸೆಣಸಾಡಲಿದೆ.

ಇನ್ನು ಮುಂದೆ ಹಾರ್ದಿಕ್​ ಪಾಂಡ್ಯರನ್ನು ಟೀಕಿಸುವಂತಿಲ್ಲ; ಇಲ್ಲವಾದಲ್ಲಿ ಜಾರಿಯಾಗುತ್ತೆ ಕಠಿಣ ಕ್ರಮ

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ಐಪಿಎಲ್‌ ತಂಡಗಳ ಮಾಲೀಕರನ್ನು ಅನೌಪಚಾರಿಕ ಸಭೆಗೆ ಆಹ್ವಾನಿಸಲಾಗಿದೆ. ನಿರ್ದಿಷ್ಟ ಕಾರ್ಯಸೂಚಿ ಏನಿಲ್ಲ. ಈ ಬಾರಿಯ ಐಪಿಎಲ್‌ ಟೂರ್ನಿಯು ಎರಡನೇ ತಿಂಗಳಿಗೆ ಕಾಲಿಡುತ್ತಿರುವುದರಿಂದ, ಮಾಲೀಕರೆಲ್ಲ ಒಂದೆಡೆ ಸೇರಲು ಅದು ಉತ್ತಮ ಸಮಯವಾಗಲಿದೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

IPL 2025 ಮೆಗಾ ಹರಾಜು ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಯುವ ನಿರೀಕ್ಷೆಯಿದೆ. ಸಭೆಯಲ್ಲಿ ಐಪಿಎಲ್​ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ವರದಿಯಾಗಿದೆ. ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಕಾರ್ಯದರ್ಶಿ ಜಯ್‌ ಶಾ ಹಾಗೂ ಐಪಿಎಲ್‌ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಟವಾಡುತ್ತಿದ್ದ ವೇಳೆ ನೆಲಬಾಂಬ್ ಸ್ಫೋಟ; 9 ಮಕ್ಕಳು ಸಾವು

ಅವಕಾಶ ಕೊಡದೇ ಇದ್ದರೂ ಬೇಸರ ಇಲ್ಲ… ಆದರೆ ಹೆಸರು ಬದಲಿಸುವುದಿಲ್ಲ: ನಟ ದರ್ಶನ್

ಆಟವಾಡುತ್ತಿದ್ದ ವೇಳೆ ನೆಲಬಾಂಬ್ ಸ್ಫೋಟ; 9 ಮಕ್ಕಳು ಸಾವು
Dailyhunt
Disclaimer: This content has not been generated, created or edited by Dailyhunt. Publisher: Vijayvani