ಮುಂಬೈ: ಐಪಿಎಲ್ ಟೂರ್ನಿಯ ಬ್ಯಾಟಿಂಗ್ ಸ್ನೇಹಿ ಪಿಚ್ಗಳಲ್ಲಿ ಸಿಕ್ಸರ್-ಬೌಂಡರಿಗಳ ಮಳೆ ಹರಿಯುತ್ತಿರುವುದನ್ನು ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ (Muttiah Muralitharan) ಸಮರ್ಥಿಸಿಕೊಂಡಿದ್ದು, ಸ್ಪರ್ಧಾತ್ಮಕ ಪಿಚ್ ನಿರ್ಮಿಸಿದರೆ ಪ್ರೇಕ್ಷಕರು ಬೇಸರವಾಗಬಹುದು ಎಂದಿದ್ದಾರೆ.
"ಐಪಿಎಲ್ ಒಂದು ಮನರಂಜನೆಯ ಟೂರ್ನಿಯಾಗಿದೆ. ಇದೊಂದು ಉದ್ಯಮವಾಗಿದೆ. ಇಲ್ಲಿ ಕ್ರಿಕೆಟರ್ ಆಗಿ ಬೆಳವಣಿಗೆ ನಿರೀಸುವಂತಿಲ್ಲ. ಟಿ20 ಕ್ರಿಕೆಟ್ನ ಹಿಂಬಾಲಕರೂ ಸಿಕ್ಸರ್-ಬೌಂಡರಿಗಳ ಪ್ರವಾಹವನ್ನು ಬಯಸುತ್ತಾರೆ. ಇದರಿಂದಾಗಿಯೇ ಈ ಟೂರ್ನಿಯಲ್ಲಿ ಓರ್ವ ಹೆಚ್ಚುವರಿ ಆಟಗಾರನಿಗೂ (ಇಂಪ್ಯಾಕ್ಟ್ ಪ್ಲೇಯರ್) ಆಡುವ ಅವಕಾಶ ಕಲ್ಪಿಸಲಾಗಿದೆ. ಇದು ತಂಡಗಳು ಕನಿಷ್ಠ ಮೊತ್ತಗಳಿಗೆ ಕುಸಿಯದಂತೆ ನೋಡಿಕೊಳ್ಳುತ್ತದೆ' ಎಂದು ಮುರಳೀಧರನ್ ಹೇಳಿದ್ದಾರೆ.
ಅವರೊಬ್ಬ ಬೌಲರ್ ಆಗಿದ್ದು, ಐಪಿಎಲ್ನಲ್ಲಿ ಬ್ಯಾಟರ್ಗಳ ಅಬ್ಬರವನ್ನು ಸಮರ್ಥಿಸಿರುವುದು ಹೆಚ್ಚಿನವರಿಗೆ ಅಚ್ಚರಿ ಮೂಡಿಸಿದೆ. ಇದೇ ವೇಳೆ ಅವರು, "ಐಪಿಎಲ್ನಲ್ಲಿ ಸ್ಪಿನ್ನರ್ಗಳು ಚೆಂಡನ್ನು ತಿರುಗಿಸಲು ಪ್ರಯತ್ನಿಸುತ್ತಿಲ್ಲ. ಸಣ್ಣ ವಯಸ್ಸಿನಿಂದಲೇ ಇದರ ಅಭ್ಯಾಸವಿದ್ದರಷ್ಟೇ ಸಾಧ್ಯ. ಟೂರ್ನಿಯ ನಡುವೆ ಸ್ಪಿನ್ ಮಾಡಬೇಕೆಂದರೆ ಆಗದು. ಹೀಗಾಗಿ ಐಪಿಎಲ್ನಲ್ಲಿ ಸ್ಪಿನ್ನರ್ಗಳ ಎದುರು ಆಡುವುದೆಂದರೆ, ಥ್ರೋಡೌನ್ ಸ್ಪೆಷಲಿಸ್ಟ್ಗಳ ಎದುರು ಅಭ್ಯಾಸ ಮಾಡಿದಂತಾಗುತ್ತಿದೆ' ಎಂದಿದ್ದಾರೆ.
ಇನ್ನಷ್ಟು ಓದಿ

