Dailyhunt
ಐಸೋಲೇಷನ್​​ನಲ್ಲಿ ಬಿಜೆಪಿ ಸಚಿವ ಶಹನವಾಜ್​ ಹುಸೇನ್

ಐಸೋಲೇಷನ್​​ನಲ್ಲಿ ಬಿಜೆಪಿ ಸಚಿವ ಶಹನವಾಜ್​ ಹುಸೇನ್

ಪಟ್ನಾ : ಬಿಹಾರದ ಕೈಗಾರಿಕಾ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಸಯೆದ್ ಶಹನವಾಜ್ ಹುಸೇನ್ ಅವರು ಸೆಲ್ಫ್​ ಐಸೋಲೇಷನ್​ಗೆ ಒಳಗಾಗಿದ್ದಾರೆ. ತಮ್ಮ ಸಿಬ್ಬಂದಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ.

'ನನ್ನ ಕಛೇರಿಯ ಸಿಬ್ಬಂದಿಗಳಲ್ಲೊಬ್ಬರಿಗೆ ನಿನ್ನೆ ಕರೊನಾ ಪಾಸಿಟೀವ್ ಬಂದಿದೆ. ಅವರು ನನ್ನ ನಿಕಟ ಸಂಪರ್ಕದಲ್ಲಿದ್ದರು. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಮತ್ತು ಕೋವಿಡ್ 19 ಪ್ರೊಟೋಕಾಲ್​​ಗೆ ಅನುಸಾರವಾಗಿ, ನಾನು ಐಸೋಲೇಟ್​ ಮಾಡಿಕೊಂಡಿದ್ದೇನೆ' ಎಂದು ಹುಸೈನ್ ಅವರು ಟ್ವೀಟ್ ಮಾಡಿದ್ದಾರೆ. ತಮ್ಮ ಕೆಲಸಗಳನ್ನು ವರ್ಚುವಲ್​ ಆಗಿ ಮತ್ತು ದೂರವಾಣಿ ಮೂಲಕ ನಿಭಾಯಿಸುತ್ತಿರುವುದಾಗಿ ತಿಳಿಸಿದ್ದಾರೆ.

ಹುಸೈನ್​ ಅವರಿಗೆ ಈಗಾಗಲೇ ಒಮ್ಮೆ ಕರೊನಾ ಸೋಂಕು ತಗುಲಿ ಗುಣಮುಖರಾಗಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vijayvani