ಪಟ್ನಾ : ಬಿಹಾರದ ಕೈಗಾರಿಕಾ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಸಯೆದ್ ಶಹನವಾಜ್ ಹುಸೇನ್ ಅವರು ಸೆಲ್ಫ್ ಐಸೋಲೇಷನ್ಗೆ ಒಳಗಾಗಿದ್ದಾರೆ. ತಮ್ಮ ಸಿಬ್ಬಂದಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ.
'ನನ್ನ ಕಛೇರಿಯ ಸಿಬ್ಬಂದಿಗಳಲ್ಲೊಬ್ಬರಿಗೆ ನಿನ್ನೆ ಕರೊನಾ ಪಾಸಿಟೀವ್ ಬಂದಿದೆ. ಅವರು ನನ್ನ ನಿಕಟ ಸಂಪರ್ಕದಲ್ಲಿದ್ದರು. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಮತ್ತು ಕೋವಿಡ್ 19 ಪ್ರೊಟೋಕಾಲ್ಗೆ ಅನುಸಾರವಾಗಿ, ನಾನು ಐಸೋಲೇಟ್ ಮಾಡಿಕೊಂಡಿದ್ದೇನೆ' ಎಂದು ಹುಸೈನ್ ಅವರು ಟ್ವೀಟ್ ಮಾಡಿದ್ದಾರೆ. ತಮ್ಮ ಕೆಲಸಗಳನ್ನು ವರ್ಚುವಲ್ ಆಗಿ ಮತ್ತು ದೂರವಾಣಿ ಮೂಲಕ ನಿಭಾಯಿಸುತ್ತಿರುವುದಾಗಿ ತಿಳಿಸಿದ್ದಾರೆ.
ಹುಸೈನ್ ಅವರಿಗೆ ಈಗಾಗಲೇ ಒಮ್ಮೆ ಕರೊನಾ ಸೋಂಕು ತಗುಲಿ ಗುಣಮುಖರಾಗಿದ್ದರು.
ಡಿಸ್ಕೋ ಡ್ಯಾನ್ಸ್ ಸ್ಟೈಲಲ್ಲಿ ಮಾಸ್ಕ್ ! ವೈರಲ್ ಆಗ್ತಿದೆ ಈ ಫೋಟೋ
ಕರೊನಾ ರೋಗಿಗಾಗಿ ಮದುವೆ ಮಂಟಪವಾದ ಆಸ್ಪತ್ರೆ… ಪಿಪಿಇ ಕಿಟ್ನಲ್ಲಿ ವಧು !

