Dailyhunt
ಅಖಂಡ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ನಾದೆಂಡ್ಲ ಭಾಸ್ಕರ್ ರಾವ್(90) ನಿಧನ | Nadendla Bhaskar Rao

ಅಖಂಡ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ನಾದೆಂಡ್ಲ ಭಾಸ್ಕರ್ ರಾವ್(90) ನಿಧನ | Nadendla Bhaskar Rao

ಹೈದರಾಬಾದ್: ಅಖಂಡ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕರಾದ ನಾದೆಂಡ್ಲ ಭಾಸ್ಕರ್ ರಾವ್(90) ಅವರು ಬುಧವಾರ(ಏ. 22) ನಿಧನಾರಾಗಿದ್ದಾರೆ. ಕೇವಲ 31 ದಿನಗಳ ಕಾಲ ಆಂಧ್ರ ಪ್ರದೇಶದ ಸಿಎಂ ಆಗಿದೆ ಸೇವೆ ಸಲ್ಲಿಸಿದ್ದರು.
ಕಳೆದ ಆರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಪ್ರಸ್ತುತ ಅವರ ಪುತ್ರ ನಾದೆಂಡ್ಲ ಮನೋಹರ ರಾವ್ ಆಂಧ್ರ ಪ್ರದೇಶದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

1935ರಲ್ಲಿ ಗುಂಟೂರಿನಲ್ಲಿ ಜನಿಸಿದ್ದ ನಾದೆಂಡ್ಲ ಭಾಸ್ಕರ್ ರಾವ್ ಅವರು, 1978ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್​​ನಿಂದ ವಿಜಯವಾಡದಿಂದ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ 1983ರಲ್ಲಿ ಟಿಡಿಪಿಯಿಂದ ಗುಂಟೂರು ಜಿಲ್ಲೆಯ ವೇಮುರು ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಚೆನ್ನಾ ರೆಡ್ಡಿ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು.
1984 ಆಗಸ್ಟ್ 16ರಿಂದ ಸೆಪ್ಟೆಂಬರ್ 16ರವರೆಗೆ ಅಖಂಡ ಆಂಧ್ರ ಪ್ರದೇಶದ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಅವರು, ರಾಜ್ಯದ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯ ಮುಖ್ಯಮಂತ್ರಿ ಎಂದು ಖ್ಯಾತಿಗಳಿಸಿದ್ದರು. ಬಳಿಕ ಮತ್ತೆ ಕಾಂಗ್ರೆಸ್ ಸೇರಿದ ಅವರು, 1989 ರಲ್ಲಿ ತೆನಾಲಿಯಿಂದ ಸ್ಪರ್ಧಿಸಿ ಗೆದ್ದರು. ಬಳಿಕ 1998ರಲ್ಲಿ ಖಮ್ಮಂನಿಂದ ಸಂಸದರಾಗಿ ಆಯ್ಕೆಯಾಗಿದ್ದರು. ನಾಳೆ ಸಂಜೆ 4 ಗಂಟೆಗೆ ಪಂಜಗುಟ್ಟದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ (ಏಜೆನ್ಸೀಸ್).

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani