ವಿಜಯವಾಣಿ

475k Followers

ಅಮಾನತು ಆಗ್ತಾರಾ ಸರ್ಕಾರಿ ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಈ ಶಿಕ್ಷಕಿ?

23 Nov 2022.7:02 PM

ಚಿಕ್ಕೋಡಿ: ಸರ್ಕಾರಿ ಶಾಲೆಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಶಿಕ್ಷಕಿಯೊಬ್ಬರು ಇದೀಗ ಅಮಾನತು ಆಗುವ ಭೀತಿಯಲ್ಲಿ ಇದ್ದಾರೆ. ಹಾಗಾದರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಹುಟ್ಟುಹಬ್ಬ ಆಚರಿಸಿಕೊಳ್ಳುವುದೇ ತಪ್ಪಾ? ಹೌದು ಎನ್ನುತ್ತೆ ಸರ್ಕಾರಿ ನಿಯಮಗಳು!

ನವೆಂಬರ್ 5ನೇ ತಾರೀಕಿನಂದು ಜಲಾಲಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಡಿ.ಡಿ.ಕಾಂಬಳೆ ಎನ್ನುವ ಶಿಕ್ಷಕಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಶಾಲಾ ಅವಧಿ ಮುಗಿದ ಮೇಲೆ ಶಿಕ್ಷಕಿ ಕಾಂಬಳೆ ತಮ್ಮ ಹುಟ್ಟುಹಬ್ಬವನ್ನ ಮಕ್ಕಳೊಡನೆ ಸೇರಿಕೊಂಡು ಆಚರಿಸಿದ್ದರು. ಆದರೆ ನಿಯಮದ ಪ್ರಕಾರಸರ್ಕಾರಿ, ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಸಿಬ್ಬಂದಿಗಳು ಹುಟ್ಟುಹಬ್ಬ ಆಚರಿಸಿಕೊಳ್ಳುವಂತಿಲ್ಲ.

ಶಾಲಾ ಶಿಕ್ಷಕಿಯರೇ ಈ ರೀತಿ ಮಾಡಿದ್ರೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಎಂದು ಸರ್ಕಾರ ಈ ನಿಯಮ ರೂಪಿಸಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನು ಅಮಾನತು ಮಾಡಬೇಕು ಎಂದು ಶಾಲಾ ಎಸ್‌ಡಿಎಂಸಿ ಸದಸ್ಯರು ಒತ್ತಾಯಿಸುತ್ತಿದ್ದಾರೆ. ಈಗ ಶಿಕ್ಷಕಿ ಕಾಂಬಳೆಗೆ ಅಮಾನತುಗೊಳ್ಳುವ ಭೀತಿ ಎದುರಾಗಿದೆ. ಈಗ ಶಾಲೆಯ ಎಸ್​ಡಿಎಂಸಿ ಸದಸ್ಯರು ರಾಯಬಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಕಿಯನ್ನು ಅಮಾನತು ಮಾಡಬೇಕು ಎಂದು ಮನವಿ ಕೂಡ ಸಲ್ಲಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags