Dailyhunt Logo
  • Light mode
    Follow system
    Dark mode
    • Play Story
    • App Story
ಅಪಘಾತದಲ್ಲಿ ಪಾದಾಚಾರಿ ಸಾವು

ಅಪಘಾತದಲ್ಲಿ ಪಾದಾಚಾರಿ ಸಾವು

ಬಿಡದಿ: ಬೆಂಗಳೂರು& ಮೈಸೂರು ಹೆದ್ದಾರಿಯ ಹೆಜ್ಜಾಲ್​ ಬಳಿ ರಸ್ತೆ ದಾಟುತ್ತಿದ್ದಾಗ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೂಲತ@ ಉತ್ತರಪ್ರದೇಶದ ಹನ್ಸಾ ರಾಜ್​( 45) ಮೃತ. ಈತ ಸೆಂಟ್ರಿಂಗ್​ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಬಿಡದಿ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.
ಇದರಿಂದ ತಲೆ ಹಾಗೂ ಇತರೆ ಭಾಗಗಳಿಗೆ ಗಂಭೀರಗಾಯವಾಗಿ ಮೃಪಟ್ಟಿದ್ದಾನೆ. ಬಿಡದಿ ಪೊಲೀಸ್​ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Vijayvani