Thursday, 04 Mar, 7.04 am ವಿಜಯವಾಣಿ

ಸಮಸ್ತ-ಕರ್ನಾಟಕ
ಬಾಗಲಕೋಟೆ ಬಳಿ ಭೀಕರ ಅಪಘಾತ: ಮದುವೆಗೆ ಹೋದವರು ಬೆಂಕಿಯಲ್ಲಿ ದಹನವಾದರು

ಬಾಗಲಕೋಟೆ: ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ವೇಳೆ ನಡೆದ ಅಪಘಾತವೊಂದರಲ್ಲಿ ಇಬ್ಬರು ಸಜೀವವಾಗಿ ದಹನಗೊಂಡಿರುವ ಭಯಾನಕ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಮುಧೋಳ ತಾಲ್ಲೂಕಿನ ಜಾಲಿಬೇರ ಬಳಿ ಈ ಘಟನೆ ಸಂಭವಿಸಿದೆ.

ಬೇರೊಂದು ವಾಹನ ಹಿಂದಕ್ಕೆ ಹಾಕುವ ಭರದಲ್ಲಿ ಮ್ಯಾಕ್ಸಿಕ್ಯಾಬ್ ವಿದ್ಯುತ್ ಕಂಬಕ್ಕೆ ಢಿಕ್ಕಿಹೊಡೆದಿದ್ದರಿಂದ ಈ ಘಟನೆ ಸಂಭವಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಮ್ಯಾಕ್ಸಿಕ್ಯಾಬ್‌ ಕಂಬಕ್ಕೆ ಢಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಈ ಸಂದರ್ಭದಲ್ಲಿ ಇಬ್ಬರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಘಟನೆಯಲ್ಲಿ 11 ಜನರು ಗಾಯಗೊಂಡಿದ್ದು, ಅವರನ್ನು ಮುಧೋಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸುಟ್ಟುಹೋದವರನ್ನು ಈರವ್ವ ಗಾಣಿಗೇರ (70) ಹಾಗೂ ಅನ್ನಕ್ಕ ಗಾಣಿಗೇರ (58) ಎಂದು ಗುರುತಿಸಲಾಗಿದೆ. ಚಾಲಕ ಸೇರಿದಂತೆ ವಾಹನದ ಒಳಗೆ ಇದ್ದವರು ಹೊರಗೆ ಜಿಗಿದು ಪ್ರಾಣ ಕಾಪಾಡಿಕೊಂಡಿದ್ದಾರೆ. ಹೊರ ಬರಲು ಸಾಧ್ಯವಾಗದೇ ಇವರು ಬೆಂದುಹೋಗಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇವರೆಲ್ಲರೂ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಚಮಕೇರಿಯಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿ ವಾಪಸಾಗುತ್ತಿದ್ದರು. ಇವರು ಮುಧೋಳದ ಗಾಣಿಗೇರ ಕುಟುಂಬದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಕ್ಯಾಬ್ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ತಂತಿಯಿಂದ ಹಾರಿದ ಕಿಡಿ ಕ್ಯಾಬ್‌ಗೆ ತಗುಲಿ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ.

10 ಸೆಕೆಂಡ್​ ಈ ವಿಡಿಯೋ ಬೆಲೆ ₹48 ಕೋಟಿ! ಇದರಲ್ಲಿರೋದು ಮಲಗಿರುವ ಟ್ರಂಪ್- ನೀವೂ ನೋಡಿ…

ಪುಸ್ತಕದ ಹಿಂಭಾಗ ತೋರಿಸಿ ಎಂದ್ರೆ ತಮ್ಮದೇ ಹಿಂಭಾಗ ತೋರಿಸಿದ್ರಾ ರಾಹುಲ್? ಟ್ರೋಲ್​ ಪುಟದಲ್ಲಿ ಸಂಸದ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top