(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕಥೆಗಾರರು)ಈ ಬಾರಿಯ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2014ರ ನಂತರ ದೇಶ ಅತ್ಯಂತ ನೋವಿನಿಂದ, ಭಯದಿಂದ, ಆಶಾವಾದದಿಂದ ನೋಡಿದ ರಾಜ್ಯ ಚುನಾವಣೆಯಾಗಿದೆ. ಹದಿನೈದು ವರ್ಷಗಳ ಹಿಂದೆ ಎಡಪಕ್ಷಗಳ ಹಿಂಸಾಪೂರ್ಣ ದುರಾಡಳಿತದಿಂದ ರಾಜ್ಯವನ್ನು ಮುಕ್ತಗೊಳಿಸಿದ ಶ್ರೇಯಸ್ಸಿಗೆ ಪಾತ್ರರಾದ ಮಮತಾ ಬ್ಯಾನರ್ಜಿ ಮುಂದಿನ ಕೆಲವೇ ವರ್ಷಗಳಲ್ಲಿ ಅದೇ ಕಮ್ಯೂನಿಸ್ಟರನ್ನು ನಾಚಿಸುವಂತಹ ಅಭಿವೃದ್ಧಿ-ವಿರೋಧಿ, ಹಿಂಸಾತ್ಮಕ, ಕೋಮುವಾದಿ ಸರ್ಕಾರದ ನೇತಾರೆಯಾದದ್ದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಖೇದಕರ ಹಾಗೂ ಭ್ರಮನಿರಸನಕರ ಬೆಳವಣಿಗೆ.
ಶಕ್ತಿ ಆರಾಧನೆಯ ನೆಲದಲ್ಲಿ, ಮಹಿಳಾ ಮುಖ್ಯಮಂತ್ರಿಯ ಆಡಳಿತದಲ್ಲಿ ಬಂಗಾಳಿ ಹಿಂದೂ ಮಹಿಳೆಯರು ಅನುಭವಿಸಿದ ಅಸುರಕ್ಷತೆ, ಯಾತನೆ, ಮಾನಹಾನಿ ಹಾಗೂ ಪ್ರಾಣಹಾನಿಗೆ ಸರಿಸಮವಾದುದು 1947ರ ದೇಶವಿಭಜನೆಯ ಹಿಂಸಾಚಾರ ಹಾಗೂ 1971ರಲ್ಲಿ ಪಾಕಿಸ್ತಾನಿ ಸೇನೆ ಬಾಂಗ್ಲಾದೇಶದಲ್ಲಿ ಎಸಗಿದ ಪಾಶವಿ ಕೃತ್ಯಗಳ ಹೊರತಾಗಿ ಬಹುಶಃ ಆಧುನಿಕ ಜಗತ್ತಿನಲ್ಲಿ ಮತ್ತೆಲ್ಲೂ ನಡೆದಿರಲಾರದು. ಆ ದುರಂತ ಇಂದು ಕೊನೆಯಾಗಿರುವುದಕ್ಕೆ ಪ್ರಮುಖ ಕಾರಣ ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆಯನ್ನು ಸಾಗಿಸಿದ ಬಗೆ ಹಾಗೂ ಅದರಲ್ಲಿ ಕೇಂದ್ರೀಯ ಸಶಸ್ತ್ರ ಪಡೆಗಳು ನೀಡಿದ ಸಹಕಾರ. ಅವೆರಡೂ 2021ರಲ್ಲೂ ಇದೇ ಬಗೆಯಲ್ಲಿ ಚುನಾವಣೆ ನಡೆಸಿದ್ದಿದ್ದರೆ ಇಂದು ನಾವು ಕಾಣುತ್ತಿರುವ ಫಲಿತಾಂಶಗಳು ಅಂದೇ ಕಾಣಿಸುತ್ತಿದ್ದವು. ಇರಲಿ, ಎಲ್ಲದಕ್ಕೂ ಅದರದೇ ಆದ ಸಮಯ ಕೂಡಿಬರಬೇಕೇನೋ.
ಮೊಟ್ಟಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಮೂರನೆಯ ಎರಡರಷ್ಟು ಬಹುಮತದಿಂದ ಸರ್ಕಾರ ಸ್ಥಾಪಿಸಹೊರಟಿದೆ ಹಾಗೂ 49 ವರ್ಷಗಳ ನಂತರ ಕೇಂದ್ರ ಹಾಗೂ ರಾಜ್ಯಗಳೆರಡರಲ್ಲೂ ಒಂದೇ ಪಕ್ಷದ ಸರ್ಕಾರಗಳಿರಲಿವೆ. ಪರಿಣಾಮವಾಗಿ ಮಮತಾ ಬ್ಯಾನರ್ಜಿ ಸರ್ಕಾರ ತಡೆಹಿಡಿದಿದ್ದ ಆಯುಷ್ಮಾನ್ ಭಾರತ್ ಯೋಜನೆಯೂ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳು ಪಶ್ಚಿಮ ಬಂಗಾಳದ ಜನತೆಗೂ ಲಭ್ಯವಾಗುತ್ತವೆ, ಕಮ್ಯೂನಿಸ್ಟರ ಕಾಲದಲ್ಲೇ ಅವರ ಪ್ರಗತಿ-ವಿರೋಧಿ ನೀತಿಗಳಿಂದಾಗಿ ರಾಜ್ಯವನ್ನು ತೊರೆದುಹೋಗಿದ್ದ 65 ಸಾವಿರದಷ್ಟು ಕೈಗಾರಿಕೆಗಳಲ್ಲಿ ಬಹಳಷ್ಟು ಹಿಂತಿರುಗಬಹುದು, ಇತರ ರಾಜ್ಯಗಳು ಕಾಣುತ್ತಿರುವ ಹೊಸಹೊಸ ಪ್ರಗತಿ ಕಾರ್ಯಯೋಜನೆಗಳು ರಾಜ್ಯಕ್ಕೆ ಬರಬಹುದು, ಕಳೆದ ಐದು ದಶಕಗಳಲ್ಲಿ ತಳಕಂಡಿರುವ ಜನರ ಜೀವನಮಟ್ಟ ಸುಧಾರಿಸಬಹುದು, ಮುಖ್ಯವಾಗಿ ಮಹಿಳೆಯರ ಮಾನ ಮತ್ತು ಪ್ರಾಣ ಸುರಕ್ಷಿತವಾಗುವುದಂತೂ ನಿಶ್ಚಿತ.
ಇದೆಲ್ಲದರ ಜತೆಗೆ ಮಮತಾ ಬ್ಯಾನರ್ಜಿ ಸರ್ಕಾರ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಪ್ರೋತ್ಸಾಹಿಸಿಕೊಂಡು ಬಂದ ಅಕ್ರಮ ಬಾಂಗ್ಲಾದೇಶಿ ಹಾಗೂ ರೋಹಿಂಗ್ಯಾಗಳ ವಲಸೆಯ ಪ್ರಕ್ರಿಯೆಗೆ ಕಡಿವಾಣ ಬೀಳುತ್ತದೆ! ಈ ಸಾಧ್ಯತೆ ದೇಶದಲ್ಲಿ ನೆಮ್ಮದಿ ಉಂಟುಮಾಡುತ್ತಿದ್ದರೆ ನೆರೆಯ ಬಾಂಗ್ಲಾದೇಶದಲ್ಲಿ ಕಳವಳ ಹಾಗೂ ವ್ಯಗ್ರತೆಯನ್ನುಂಟುಮಾಡುತ್ತಿದೆ.
ಪಶ್ಚಿಮ ಬಂಗಾಳದ ಚುನಾವಣೆಗಳನ್ನು ನಾವು ಗಮನಿಸುತ್ತಿದ್ದಷ್ಟೇ ಆಸಕ್ತಿ ಹಾಗೂ ಕುತೂಹಲದಿಂದ ಬಾಂಗ್ಲಾದೇಶೀಯರೂ ಗಮನಿಸುತ್ತಿದ್ದರು. 1951ರಿಂದಲೂ ಅಂದಿನ ಪೂರ್ವ ಪಾಕಿಸ್ತಾನದಿಂದ, 1971ರ ನಂತರ ಸ್ವತಂತ್ರ ಬಾಂಗ್ಲಾದೇಶದಿಂದ ಅವ್ಯಾಹತವಾಗಿ ಭಾರತಕ್ಕೆ ಹರಿದುಹೋಗುತ್ತಿರುವ ತಮ್ಮವರ ಅಕ್ರಮ ವಲಸೆ ಇನ್ನು ನಿಂತುಹೋಗಬಹುದೆನ್ನುವುದು ಅವರ ಆತಂಕಕ್ಕೆ ಕಾರಣ. ಮುಂದುವರಿದು, ತಮ್ಮ ಕಡೆಯ ಅಕ್ರಮ ವಲಸಿಗರು ಭಾರತದಿಂದ ಹೊರಗಟ್ಟಲ್ಪಡಬಹುದು ಮತ್ತವರು ತಮ್ಮ ದೇಶಕ್ಕೇ ಹಿಂತಿರುಗಿ ಬಂದು ತಮಗೇ ಹೊರೆಯಾಗಬಹುದು ಎನ್ನುವ ಬಗ್ಗೆ ಅವರು ವ್ಯಗ್ರಗೊಂಡೂ ಇದ್ದಾರೆ. ಇದು ತಿಳಿಯುವುದು ಬಾಂಗ್ಲಾದೇಶಿ ಸಂಸತ್ ಸದಸ್ಯ ಅಖ್ತರ್ ಹುಸೇನ್ ಇತ್ತೀಚೆಗೆ ಸಂಸತ್‌ನಲ್ಲೇ ಹೇಳಿದ ಒಂದು ಮಾತಿನಿಂದ. ಯಾರು ಈ ಅಖ್ತರ್ ಹುಸೇನ್?
2024ರ ಆಗಸ್ಟ್ 5ರಂದು ಪ್ರಧಾನಮಂತ್ರಿ ಶೇಖ್ ಹಸೀನಾ ಬಾಂಗ್ಲಾದೇಶವನ್ನು ತೊರೆದುಹೋದದ್ದು ತಾವು ನಡೆಸಿದ ಆಂದೋಲನಕ್ಕೆ ಹೆದರಿ ಎಂದು ಅಲ್ಲಿನ ವಿದ್ಯಾರ್ಥಿಗಳು ಹೇಳಿಕೊಳ್ಳುತ್ತಾರೆ. ಹಾಗೆ ಬಾಂಗ್ಲಾದೇಶದ ಇತಿಹಾಸವನ್ನು ಬದಲಿಸಿದವರು ತಾವು ಎಂಬ ಹೆಮ್ಮೆಯಿಂದ (ಅಥವಾ ಹಮ್ಮಿನಿಂದ) ಅವರು ತಮ್ಮದೇ ಆದ ನ್ಯಾಷನಲ್ ಸಿಟಿಜನ್ಸ್ ಪಾರ್ಟಿ (ಎನ್‌ಸಿಪಿ) ಎಂಬ ರಾಜಕೀಯ ಪಕ್ಷವನ್ನು ಕಟ್ಟಿಕೊಂಡು ಕೋಮುವಾದಿ ಜಮಾತ್-ಇ-ಇಸ್ಲಾಮಿ ಜತೆಗೂಡಿ ಇದೇ ಫೆಬ್ರವರಿ 12ರ ಸಂಸತ್ ಚುನಾವಣೆಗಳಲ್ಲಿ ಸ್ಪರ್ಧಿಸಿದರು.

ಜಮಾತ್ ಅವರಿಗೆ ನೀಡಿದ್ದು ಮೂವತ್ತು ಸ್ಥಾನಗಳು. ಆಗ ನಡೆದ ಚುನಾವಣೆಗಳ ಫಲಿತಾಂಶ ಈಗ ನಮ್ಮ ಪಶ್ಚಿಮ ಬಂಗಾಳದಲ್ಲಿ ಹೊರಬಂದಿರುವ ಚುನಾವಣಾ ಫಲಿತಾಂಶಗಳಿಗೆ ಅಚ್ಚರಿ ಹುಟ್ಟಿಸುವಷ್ಟು ಮಟ್ಟಿಗೆ ಹೋಲಿಕೆಯಾಗುತ್ತದೆ. ಚುನಾವಣೆಗಳು ನಡೆದ 297 ಸ್ಥಾನಗಳಲ್ಲಿ ತಾರಿಖ್ ರಹಮಾನ್‌ರ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮತ್ತದರ ಸಹಯೋಗಿಗಳು 213 ಸ್ಥಾನಗಳನ್ನು ಗಳಿಸಿದವು. ಜಮಾತ್ ಮತ್ತದರ ಸಹಯೋಗಿಗಳಿಗೆ ಸಿಕ್ಕಿದ್ದು ಕೇವಲ 87 ಸ್ಥಾನಗಳು. ತಥಾಕಥಿತ ವಿದ್ಯಾರ್ಥಿಗಳ ಎನ್‌ಸಿಪಿಗೆ ಸಿಕ್ಕಿದ್ದು ಕೇವಲ ಆರು ಸ್ಥಾನಗಳು! (ಸ್ಪರ್ಧಿಸಿದ 30 ಸ್ಥಾನಗಳಲ್ಲಿ ಗೆದ್ದದ್ದು 6 ಮಾತ್ರ, ಅಂದರೆ ಎನ್‌ಸಿಪಿಯ ಸಕ್ಸೆಸ್ ರೇಟ್ 20% ಅಷ್ಟೇ). ಆಯ್ಕೆಯಾದ ಆರು ಎನ್‌ಸಿಪಿ ಅಭ್ಯರ್ಥಿಗಳಲ್ಲಿ ಒಬ್ಬರು ಈ ಅಖ್ತರ್ ಹುಸೇನ್.
ಇತ್ತೀಚೆಗೆ ಹುಸೇನ್ ಸಂಸತ್‌ನಲ್ಲಿ ಮಾತನಾಡುತ್ತಾ 'ನಮ್ಮ ನೆರೆಯ ದೇಶವೊಂದರಿಂದ ನಿರಾಶ್ರಿತರ ಪ್ರವಾಹದ ಹೊಸ ಅಲೆಯೊಂದು ನಮ್ಮ ದೇಶದ ಮೇಲೆರಗಬಹುದು' ಎಂದು ಆತಂಕ ವ್ಯಕ್ತಪಡಿಸಿದರು ಮತ್ತು ಅದು ಬಾಂಗ್ಲಾದೇಶಕ್ಕೆ ಹೊರೆಯಾಗಿ ಪರಿಣಾಮಿಸಬಹುದು ಎಂದೂ ಹೇಳಿದರು.
ಅಖ್ತರ್ ಹುಸೇನ್‌ರ ಮಾತಿಗೆ ಸಮರ್ಥನೆಯಾಗಿ ಬಾಂಗ್ಲಾದೇಶ ಸರ್ಕಾರ ಭಾರತದ ವಿರುದ್ಧ ಕಿಡಿಕಾರಿದ್ದೂ ನಡೆದಿದೆ. ಅದರ ದಾಳಿಯ ಗುರಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ. ಬಾಂಗ್ಲಾದೇಶಿಗರ ಅಕ್ರಮ ವಲಸೆ ಅಸ್ಸಾಂ ರಾಜ್ಯಕ್ಕೆ ತಂದೊಡ್ಡಿರುವ ಜನಾಂಗೀಯ, ಭಾಷಿಕ, ಧಾರ್ಮಿಕ, ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಜನಜನಿತ. ಗಡಿ ಜಿಲ್ಲೆಗಳಲ್ಲೆಲ್ಲಾ ಅಕ್ರಮ ವಲಸಿಗರದೇ ಕಾರುಬಾರು. ಬಂಗಾಳಿಗಳಾದ ಅವರಿಂದ ತಮ್ಮ ಅಸ್ಸಾಮಿ ಅಸ್ಮಿತೆಗೆ ಧಕ್ಕೆ ಎಂಬ ಅಸ್ಸಾಮೀಯರ ಅಳಲು ಇಂದು ನಿನ್ನೆಯದಲ್ಲ.
ಅಕ್ರಮ ವಲಸಿಗರ ವಿರುದ್ಧ ಅಸ್ಸಾಮಿ ವಿದ್ಯಾರ್ಥಿಗಳು 1980-85ರ ಅವಧಿಯಲ್ಲಿ ರಾಜ್ಯವ್ಯಾಪಿ ಆಂದೋಲನಗೈದದ್ದೀಗ ಇತಿಹಾಸ. ತಮ್ಮ ಅಸ್ಸಾಂ ಅನ್ನು ಅಸ್ಸಾಮೀಯರಿಗಾಗಿ ಉಳಿಸಿಕೊಳ್ಳುವ ನ್ಯಾಯಸಮ್ಮತ ಬೇಡಿಕೆಯನ್ನಿಟ್ಟುಕೊಂಡು ಹೋರಾಟಕ್ಕಿಳಿಯದೇ ತಮಗೆ ಅನ್ಯಮಾರ್ಗವೇ ಇರಲಿಲ್ಲ ಎಂದು ವಿದ್ಯಾರ್ಥಿಗಳು ಸತತ ಐದು ವರ್ಷಗಳ ಕಾಲ ಇಡೀ ದೇಶಕ್ಕೆ ಹೇಳಿದ್ದರು. 'ಆಶೋಂ ಮೊರಿಲೊ ಥೊಕೆನೊ ಕೋನ್? ಆಶೋಂ ಥೊಕೆ ಮೊರೇ ಕೋನ್?' ಎನ್ನುವುದು ಆ ಹೋರಾಟದ ಘೋಷವಾಕ್ಯ. ಅದರರ್ಥ 'ಅಸ್ಸಾಂ ಸತ್ತರೆ ಉಳಿಯುವವರಾರು? ಅಸ್ಸಾಂ ಉಳಿದರೆ ಸಾಯುವವರಾರು?' ಎಂದಂತೆ. 1951ರಿಂದ ಅಸ್ಸಾಂಗೆ ಬಂದ ಪೂರ್ವ ಪಾಕಿಸ್ತಾನೀಯರು/ಬಾಂಗ್ಲಾದೇಶೀಯರನ್ನು ಹೊರಗೆ ಹಾಕುವುದು ವಿದ್ಯಾರ್ಥಿಗಳ ಆಗ್ರಹ. ಆದರೆ ಅದೇ ವಲಸಿಗರನ್ನು ವೋಟ್ ಬ್ಯಾಂಕ್ ಆಗಿ ಸಾಕಿಕೊಂಡಿದ್ದ, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ ಆ ಬೇಡಿಕೆಯನ್ನು ಒಪ್ಪುವ ಮನಸ್ಸಿರಲಿಲ್ಲ. ಕೊನೆಗೆ 1971ರ ನಂತರ ಬಂದ ವಲಸಿಗರನ್ನು ಗುರುತಿಸಿ ಹೊರಗೆ ಕಳುಹಿಸುವ ಬಗ್ಗೆ ರಾಜೀವ್ ಗಾಂಧಿ ಅಸ್ಸಾಮಿ ವಿದ್ಯಾರ್ಥಿ ನಾಯಕರೊಂದಿಗೆ 1985ರಲ್ಲಿ ಒಪ್ಪಂದ ಮಾಡಿಕೊಂಡರು.
ಆಂದೋಲನವೇನೋ ನಿಂತಿತು, ವಿದ್ಯಾರ್ಥಿಗಳು ಕಟ್ಟಿದ ರಾಜಕೀಯ ಪಕ್ಷ ಅಸೋಮ ಗಣ ಪರಿಷತ್ (ಎಜಿಪಿ) ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂತು. ಆದರೆ 1985ರ ಒಪ್ಪಂದ ಕಾರ್ಯರೂಪಕ್ಕಿಳಿಯಲೇ ಇಲ್ಲ. ಈಗಿನ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಈ ಬಗ್ಗೆ ಗಂಭೀರ ನಿಲುವು ತಳೆದಿದ್ದಾರೆ. ಅಕ್ರಮ ವಲಸಿಗರನ್ನು ಹೊರಗೆ ಕಳುಹಿಸುವುದು ತನ್ನ ಗುರಿ ಎಂದು ಅಸ್ಸಾಂ ಬಿಜೆಪಿ ಈ ಬಾರಿಯ ಚುನಾವಣಾ ಘೋಷಣಾಪತ್ರದಲ್ಲೇ ಹೇಳಿಕೊಂಡಿದೆ. ಹಿಮಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕಟ್ ಆಫ್ ಇಯರ್ 1971ರ ಬದಲು 1951 ಆಗಬೇಕು, ಆ ವರ್ಷದ ನಂತರ ರಾಜ್ಯಕ್ಕೆ ಬಂದ ಅಕ್ರಮ ವಲಸಿಗರನ್ನು ಹಿಂದಕ್ಕಟ್ಟಲೇಬೇಕು ಎಂದು ಹೇಳಿಯೂ ಇದ್ದಾರೆ. ವಲಸಿಗರು ಮುಸ್ಲಿಮರು, ಅವರು ಬಿಜೆಪಿಯ ವಿರೋಧಿಗಳು ಎನ್ನುವುದನ್ನು ಅವರು ಬಿಂಬಿಸಿದ ಬಗೆಯೂ ಆಸಕ್ತಿಕರ. ರಾಜ್ಯದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ರಮ ವಲಸಿಗ ಬಂಗಾಳಿ ಮುಸ್ಲಿಮರೇ ಬಹುಸಂಖ್ಯಾತರು, ಅವರೆಂದೂ ಬಿಜೆಪಿಗೆ ಮತ ನೀಡುವುದಿಲ್ಲ, ಹಾಗಾಗಿ ಆ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುವುದೇ ವ್ಯರ್ಥ ಎಂದು ಬಿಸ್ವಾ ಶರ್ಮಾ ಅವರ ಅಭಿಮತ.
ಹಿಮಂತ ಇತ್ತೀಚೆಗೆ ಗಡಿಯಿಂದ ಹಿಂದಕ್ಕಟ್ಟಲ್ಪಟ್ಟ ಇಪ್ಪತ್ತು ಬಾಂಗ್ಲಾದೇಶಿ ಅಕ್ರಮ ವಲಸಿಗರ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, 'ಇವರಿಗೆ ಇದೇ ನೀತಿ ಸರಿ, ಉದ್ಧಟ ಜನ ಮೃದು ಮಾತುಗಳಿಗೆ ಬಗ್ಗುವವರಲ್ಲ' ಎಂದು ಬರೆದರು. ಇದರಲ್ಲಿ ಬಾಂಗ್ಲಾದೇಶದ ಬಗ್ಗೆ, ಆ ದೇಶದಲ್ಲೇ ಇರುವವರ ಬಗ್ಗೆ ಯಾವ ಅಪಶಬ್ದವೂ ಇಲ್ಲ. ಆದರೆ ಈ ಮಾತನ್ನು ಬಾಂಗ್ಲಾದೇಶಕ್ಕೆ ಅವಮಾನಕರ ಕೃತ್ಯವೆಂದು ಪರಿಗಣಿಸಿದ ಅಲ್ಲಿನ ಸರ್ಕಾರ ಢಾಕಾದಲ್ಲಿರುವ ಭಾರತದ ಹಂಗಾಮಿ ಹೈಕಮಿಷನರ್ (ರಾಯಭಾರಿ) ಅವರನ್ನು ಕರೆದು ಭಾರತ ಸರ್ಕಾರಕ್ಕೆ ಅಧಿಕೃತವಾಗಿ ಅಸಮಾಧಾನ ವ್ಯಕ್ತಪಡಿಸಿತು.
ಬಾಂಗ್ಲಾ ಸರ್ಕಾರ ಈ ಬಗೆಯಾಗಿ ಪ್ರತಿಕ್ರಿಯಿಸುವುದು ಅನುಚಿತವಾಗಿತ್ತು. ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ ಬಾಂಗ್ಲಾದೇಶೀಯರು ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದಾರೆ ಎನ್ನುವುದನ್ನೇ ಅಲ್ಲಿನ ಸರ್ಕಾರಗಳು ಒಪ್ಪುವುದಿಲ್ಲ. ನಾಲ್ಕು ದಶಕಗಳ ಹಿಂದೆ ಅಸ್ಸಾಂನಲ್ಲಿ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಆಂದೋಲನ ನಡೆಯುತ್ತಿದ್ದಾಗ ಆಗಿನ ಬಾಂಗ್ಲಾದೇಶಿ ಸೇನಾ ಸರ್ವಾಧಿಕಾರಿ ಜ. ಮಹಮದ್ ಇರ್ಷಾದ್ ಹೇಳಿದ್ದು 'ಸಂಪದ್ಭರಿತ ಬಾಂಗ್ಲಾದೇಶದಲ್ಲಿನ ನೆಮ್ಮದಿಯ ಬದುಕನ್ನು ಬಿಟ್ಟು ಯಾವ ಬಾಂಗ್ಲಾದೇಶೀಯ ಬಡ ಭಾರತಕ್ಕೆ ಹೋಗುತ್ತಾನೆ?' ಎಂದು! ಢಾಕಾದ ಪ್ರತಿಯೊಂದು ಸರ್ಕಾರವೂ ಹೇಳುವುದು ಹೀಗೆಯೇ. ಇದಕ್ಕೆ ಈಗಿನ ಬಿಎನ್‌ಪಿ ಸರ್ಕಾರವೂ ಹೊರತಲ್ಲ. ಅದರ ತಲೆನೋವನ್ನು ಹೆಚ್ಚಿಸಿದ್ದು ಅಸ್ಸಾಂನಲ್ಲಿ ಬಿಜೆಪಿ ಸತತ ಮೂರನೆಯ ಬಾರಿ ಸರ್ಕಾರ ರಚಿಸುವ ಹಾಗೂ ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಕಂಡುಬಂದಾಗ.
ಆ ಸಾಧ್ಯತೆಗಳ ಬಗ್ಗೆ ನಮ್ಮಲ್ಲಿ ಯಾರಾದರೂ ಖಚಿತವಾಗಿ ಹೇಳುವ ಮೊದಲೇ ಅದು ಬಾಂಗ್ಲಾ ಸರ್ಕಾರಕ್ಕೆ ಹಾಗೂ ರಾಜಕಾರಣಿಗಳಿಗೆ ಸ್ಪಷ್ಟವಾಗಿ ಅರ್ಥವಾಗಿದೆ. ಬಾಂಗ್ಲಾದೇಶಕ್ಕೆ ಹೊಂದಿಕೊಂಡ ತ್ರಿಪುರಾ ಮತ್ತು ಅಸ್ಸಾಂನಲ್ಲಿ ಈಗಾಗಲೇ ಬಿಜೆಪಿ ಸರ್ಕಾರಗಳಿವೆ ಮತ್ತು ಅಕ್ರಮ ವಲಸೆಯನ್ನು ತಡೆಯುವ ಕೇಂದ್ರದ ಕ್ರಮಗಳಿಗೆ ಅವು ಪೂರ್ಣವಾಗಿ ಸಹಕರಿಸುತ್ತಿವೆ. ಆದರೆ ಅಂತಹ ಸಹಕಾರ ಮಮತಾ ಬ್ಯಾನರ್ಜಿ ಸರ್ಕಾರದಿಂದ ಕೇಂದ್ರಕ್ಕೆ ದೊರೆತಿರಲಿಲ್ಲ. 500-600 ಕಿಲೋಮೀಟರ್‌ಗಳಷ್ಟು ದೀರ್ಘ ಗಡಿಯಲ್ಲಿ ತಂತಿಬೇಲಿ ನಿರ್ಮಿಸಲು ಟಿಎಂಸಿ ಸರ್ಕಾರ ಅವಕಾಶ ನೀಡಿರಲೇ ಇಲ್ಲ. ಅಲ್ಲಿ ಹಾಗೂ ನದಿ ಗಡಿಗಳಲ್ಲಿ ಅಕ್ರಮ ವಲಸೆ; ದನಕರುಗಳ, ಮಾದಕ ವಸ್ತುಗಳ, ನಕಲಿ ನೋಟುಗಳ ಕಳ್ಳಸಾಗಾಣಿಕೆ ಟಿಎಂಸಿ ಸರ್ಕಾರದ ಅನುಗ್ರಹದಿಂದಲೇ ನಿರಾತಂಕವಾಗಿ ನಡೆಯುತ್ತಿತ್ತು. ತಂತಿಬೇಲಿಗಳ ಕೆಳಗೆ ಕಳ್ಳ ಸುರಂಗಗಳೂ ನಿರ್ಮಾಣಗೊಂಡಿವೆಯಂತೆ ಮತ್ತವು ಕುಕೃತ್ಯಗಳಿಗಾಗಿ ಬಳಕೆಯಾಗುತ್ತಿವೆಯಂತೆ. ಆದರೀಗ ತ್ರಿಪುರಾ ಮತ್ತು ಅಸ್ಸಾಂಗಳ ಜತೆ ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಸರ್ಕಾರ ಬರಲಿರುವುದರಿಂದ ಅಂದರೆ ಉಭಯ ದೇಶಗಳ ನಡುವಿನ ಗಡಿಯ 95%ರಷ್ಟು ಭಾಗದಲ್ಲಿ ಬಿಜೆಪಿ ಸರ್ಕಾರಗಳು ರಚನೆಯಾಗಿ, ಅವುಗಳು ಮತ್ತು ಕೇಂದ್ರದ ನಡುವೆ ತಾಳಮೇಳ ಹೆಚ್ಚಾಗುವುದರಿಂದಾಗಿ ದಶಕಗಳಿಂದ ನಿರಾತಂಕವಾಗಿ ಸಾಗಿಬಂದ ಅಕ್ರಮ ಚಟುವಟಿಕೆಗಳು ನಿಂತುಹೋಗಬಹುದು ಎನ್ನುವುದು ಬಾಂಗ್ಲಾದೇಶೀಯರ ಹಾಗೂ ಗಡಿಯೀಚೆಗಿನ ಅವರ ಸಹಯೋಗಿಗಳ ಕಳವಳಕ್ಕೆ ಕಾರಣ.
ಆದರೆ ಈ ಕುರಿತಾಗಿ ತಾರಿಖ್ ರಹಮಾನ್ ಸರ್ಕಾರ ಭಾರತದೊಂದಿಗೆ ಪೂರ್ಣ ವೈಮನಸ್ಯದ ಮಾರ್ಗಕ್ಕಿಳಿಯುವುದು ಅನುಮಾನ. ಹಿಂದಿನ ಮುಹಮ್ಮದ್ ಯೂನುಸ್ ಸರ್ಕಾರ ಅನುಸರಿಸಿದ ತೀವ್ರತರಹದ ಭಾರತ-ವಿರೋಧಿ ನೀತಿಗಳಿಂದಾಗಿ ಬಾಂಗ್ಲಾದೇಶದ ಅರ್ಥವ್ಯವಸ್ಥೆಗೆ ತಟ್ಟಿದ ಭಾರಿ ಹೊಡೆತದ ಅರಿವು ಪ್ರಸಕ್ತ ಸರ್ಕಾರಕ್ಕಿದ್ದೇ ಇದೆ. ಈಗಂತೂ ಪಶ್ಚಿಮ ಏಷ್ಯಾ ಸಮರದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್‌ಗಾಗಿಯೂ ತಮ್ಮ ದೇಶ ಭಾರತದ ಮೇಲೆ ಅವಲಂಬಿತವಾಗಿರುವುದನ್ನು ಪ್ರಧಾನಿ ರಹಮಾನ್ ನಿರ್ಲಕ್ಷಿಸುವಂತೆಯೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಅವರ ಸರ್ಕಾರ ಭಾರತದ ಕುರಿತಾಗಿ ಯಾವ ನೀತಿ ಅನುಸರಿಸುತ್ತದೆನ್ನುವುದು ಕುತೂಹಲದ ವಿಷಯ.
ದೇಶದ ಒಳಗಿನ ವಿದ್ಯಮಾನಗಳ ಬಗ್ಗೆ ಹೇಳುವುದಾದರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರವಿರುವುದು ರಾಷ್ಟ್ರೀಯ ಸುರಕ್ಷೆಗೂ ಒಳ್ಳೆಯದೇ.
ಇನ್ನಷ್ಟು ಓದಿ