Dailyhunt Logo
  • Light mode
    Follow system
    Dark mode
    • Play Story
    • App Story
ಬಪ್ಪೂರು ಗ್ರಾಪಂನಿಂದ ಬೇಸಿಗೆ ಶಿಬಿರ

ಬಪ್ಪೂರು ಗ್ರಾಪಂನಿಂದ ಬೇಸಿಗೆ ಶಿಬಿರ

ಬಪ್ಪೂರು ಗ್ರಾಪಂನಿಂದ ಬೇಸಿಗೆ ಶಿಬಿರ

ಸಿಂಧನೂರು: ತಾಲೂಕಿನ ಬಪ್ಪೂರು ಗ್ರಾಮದಲ್ಲಿ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಸಹಯೋಗದಲ್ಲಿ ಏ.27ರಿಂದ ಮೇ 11ರವರೆಗೆ 15 ದಿನಗಳ ಕಾಲ ಅರಿವು ನಲಿವು ಬೇಸಿಗೆ ಉಚಿತ ಶಿಬಿರ ಆಯೋಜಿಸಲಾಗಿದ್ದು, ಪ್ರತಿದಿನ 3 ಗಂಟೆಗಳ ಕಾಲ ತರಗತಿ ನಡೆಸಲಾಗುತ್ತದೆ.
ಓದು, ಬರಹ, ಒಳಾಂಗಣ ಆಟ, ಪಕ್ಷಿ ವೀಕ್ಷಣೆ, ಕಂಪ್ಯೂಟರ್, ಕರೋಕೆ ಸಾಂಗ್ಸ್ ಕಲಿಕೆ, ಪಝಲ್ ರಚನೆ, ಸ್ವರಚಿತ ಕವನವಾಚನ, ಸರ್ಕಾರಿ ಕಚೇರಿಗಳ ಭೇಟಿ, ಮಕ್ಕಳ ಚಲನಚಿತ್ರ ವೀಕ್ಷಣೆ ಸೇರಿದಂತೆ ಮಕ್ಕಳಿಂದ ಸೃಜನಾತ್ಮಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಗ್ರಂಥಾಲಯ ಮೇಲ್ವಿಚಾರಕ ವೆಂಕಟೇಶ ಎಸ್.ಬಪ್ಪೂರು ಹಾಗೂ ಪಿಡಿಒ ನಾಗೇಶ್ ತಿಳಿಸಿದ್ದಾರೆ.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani