Thursday, 29 Oct, 6.10 pm ವಿಜಯವಾಣಿ

ಮುಖಪುಟ
ಬರೀ 'ಲಕ್ಷ್ಮೀ', 'ಬಾಂಬ್​' ಇಲ್ಲ; ಬದಲಾಯಿತು ಅಕ್ಷಯ್​ ಕುಮಾರ್ ಹೊಸ ಸಿನಿಮಾ ಟೈಟಲ್!

ಮುಂಬೈ: ಈಗಾಗಲೇ ಭಾರಿ ಕುತೂಹಲ ಸೃಷ್ಟಿಸಿರುವ, ಅದ್ದೂರಿಯಾಗಿ ನಿರ್ಮಾಣ ಆಗಿರುವ ಬಹುನಿರೀಕ್ಷಿತ ಸಿನಿಮಾ, ಅಕ್ಷಯ್​ ಕುಮಾರ್ ಅಭಿನಯದ 'ಲಕ್ಷ್ಮೀ ಬಾಂಬ್​'ನ ಟೈಟಲ್ ಬದಲಾಗಿದೆ.

ರಾಘವ ಲಾರೆನ್ಸ್​ ನಿರ್ದೇಶನ, ಅಕ್ಷಯ್​ ಕುಮಾರ್ ಹಾಗೂ ಕಿಯಾರಾ ಆಡ್ವಾಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಸಿನಿಮಾ ಟೈಟಲ್​ ಕಾರಣಕ್ಕೇ ಈಗಾಗಲೇ ಒಂದಷ್ಟು ಸದ್ದು ಮಾಡಿತ್ತು. ಇದೀಗ ಅದೇ ಟೈಟಲ್​ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿ ಆಗಲಾರಂಭಿಸಿದೆ.

ಹೊಸ ಬದಲಾವಣೆಯೊಂದರಲ್ಲಿ ಸಿನಿಮಾದ ಪರಿಷ್ಕೃತ ಶೀರ್ಷಿಕೆ ಬಹಿರಂಗವಾಗಿದ್ದು, ಚಿತ್ರಕ್ಕೆ 'ಲಕ್ಷ್ಮೀ ಬಾಂಬ್' ಬದಲು 'ಲಕ್ಷ್ಮೀ' ಎಂದಷ್ಟೇ ಟೈಟಲ್​ ಇಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

'ಲಕ್ಷ್ಮೀ ಬಾಂಬ್' ಎಂದಿರುವುದರಿಂದ ಲಕ್ಷ್ಮೀ ದೇವರಿಗೆ ಅವಮಾನ ಮಾಡಿದಂತೆ, ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆಗುತ್ತದೆ ಎಂದು ಶ್ರೀ ರಜಪೂತ್ ಕರ್ಣಿ ಸೇನಾ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿತ್ತು. ಮಾತ್ರವಲ್ಲ ಈ ಸಂಬಂಧ ಲೀಗಲ್ ನೋಟಿಸ್ ಕೂಡ ರವಾನೆ ಮಾಡಿದ್ದರಿಂದ ಚಿತ್ರತಂಡ ಈ ಬದಲಾವಣೆ ಮಾಡಿಕೊಂಡಿದೆ. (ಏಜೆನ್ಸೀಸ್​)

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top