ಹಾಸನ:ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ನೀಡಿದ ಬಸವಣ್ಣನವರು ಸಮಾಜದ ಅಂಕುಡೊಂಕುಗಳನ್ನು ಎತ್ತಿ ಹಿಡಿದ ಶರಣರು ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಿಂಗ ತಾರತಮ್ಯ ಬಗ್ಗೆ ಮೊದಲು ಧ್ವನಿ ಎತ್ತಿದ ಮಹನೀಯರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಿಂಗ ತಾರತಮ್ಯ ಬಗ್ಗೆ ಮೊದಲು ಧ್ವನಿ ಎತ್ತಿದ ಮಹನೀಯರು.
ಬಸವಣ್ಣ ಜ್ಞಾನಿ ಮಾತ್ರವಲ್ಲ ದಕ್ಷ ಆಡಳಿತಗಾರ ಹಾಗೂ ಸಮಾಜ ಸುಧಾರಕರೂ ಆಗಿದ್ದರು ಎಂದರು.
ಸಾಂಪ್ರಾದಾಯಿಕ ದಂತಕಥೆಗಳು ಮತ್ತು ಜೀವನ ಚರಿತ್ರೆಯ ಗ್ರಂಥಗಳು ಇಂದಿಗೂ ಸಹ ಬಸವಣ್ಣನವರನ್ನು ಲಿಂಗಾಯತ ಸ್ಥಾಪಕ ಎಂದು ಹೇಳುತ್ತವೆ. ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ನೀಡಿದ ಮಹಾನ್ ವ್ಯಕ್ತಿ ಬಸವಣ್ಣನವರು, ಜೀವನದ ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಅನುಭವ ಮಂಟಪವನ್ನು ಸ್ಥಾಪನೆ ಮಾಡಿದವರು ಎಂದರು.
ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಒಂದು ವಿಚಾರಧಾರೆ. ಜಾತಿ-ಮತಗಳ ಬೇಧವಿಲ್ಲದ, ಸಮಾನತೆಯ ಸಮಾಜವನ್ನು ನಿರ್ಮಿಸುವ ಅವರ ಕನಸು ಇಂದಿಗೂ ಪ್ರಸ್ತುತವಾಗಿದೆ. ಇವರ ವಿಚಾರಗಳು ಮಾನವಕುಲಕ್ಕೆ ಸದಾ ದಾರಿದೀಪವಾಗಿವೆ. ಸಮಾಜದಲ್ಲಿ ಇರುವ ಜಾತಿ ಧರ್ಮ ವರ್ಗಗಳ ನಡುವೆ ಕೂಡ ವಿಭಿನ್ನ ರೀತಿಯಲ್ಲಿ ಹೋರಾಟ ನಡೆಸಿದವರು ಭಕ್ತಿ ಭಂಡಾರಿ ಬಸವಣ್ಣನವರು ಎಂದರು.

ಪ್ರತಿಯೊಂದು ಕಾಯಕ ಮಾಡುವವರಿಗೂ ಸಹ ಸಮಾಜದಲ್ಲಿ ಗೌರವ ಇರಬೇಕೆಂದು ಪ್ರತಿಪಾದಿಸಿದರು. ಆತ್ಮವಿಶ್ವಾಸವಿದ್ದರೆ ಯಾವ ಕಾಯಕವೂ ಮೇಲಲ್ಲ, ಯಾವ ಕಾಯಕವೂ ಕೀಳಲ್ಲ ಎಂದು ಬಸವಣ್ಣನವರು ತೊರಿಸಿ ಕೊಟ್ಟಿದ್ದಾರೆ. ಬಸವಣ್ಣನವರ ವಚನಗಳು ಸಾಮಾಜಿಕ ಜಾಗೃತಿಯನ್ನು ಮೂಡಿಸುವಂತಹದ್ದಾಗಿದ್ದವು, ಇಂತಹ ಮಹನೀಯರು ಜನಿಸಿದ ನೆಲದಲ್ಲಿ ಜನಿಸಿರುವ ನಾವು ಧನ್ಯರು ಶರಣರ ತತ್ವ ಆದರ್ಶಗಳನ್ನು ಆಧಾರವಾಗಿಟ್ಟುಕೊಂಡು ಮಾದರಿಯಾಗಬೇಕು ಎಂದರು.ನಿವೃತ್ತ ಪ್ರಾಂಶುಪಾಲ ಟಿ.ಎಂ. ಶಿವಶಂಕರಪ್ಪ ಮಾತನಾಡಿ, ಬಸವಣ್ಣನವರು 12ನೇ ಶತಮಾನದ ಮಹಾನ್ ಸಮಾಜ ಸುಧಾರಕ, ತತ್ವಜ್ಞಾನಿ ಮತ್ತು ವಚನಕಾರರಾಗಿದ್ದರು. ಕಲ್ಯಾಣದ ಚಾಲುಕ್ಯ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಇವರು, ಜಾತಿ ಪದ್ಧತಿ, ಮೂಢನಂಬಿಕೆ ಮತ್ತು ಲಿಂಗ ತಾರತಮ್ಯದ ವಿರುದ್ಧ ಹೋರಾಡಿ, 'ಕಾಯಕವೇ ಕೈಲಾಸ' ಎಂಬ ತತ್ವದಡಿ ಸಮಾನತೆಯ ಸಮಾಜ ನಿರ್ಮಿಸಲು ಶ್ರಮಿಸಿದ್ದಾರೆ ಎಂದರು.
ವಿಶ್ವದ ಮೊದಲ ಸಂಸತ್ತು ಎಂದೆ ಕರೆಯಲ್ಪಡುವ 'ಅನುಭವ ಮಂಟಪ'ವನ್ನು ಸ್ಥಾಪಿಸಿ, ಎಲ್ಲ ಜಾತಿ ಮತ್ತು ಲಿಂಗದವರಿಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟವರು ಎಂದು ತಿಳಿಸಿದರು.
12ನೇ ಶತಮಾನದಲ್ಲಿಯೇ ಜಾತಿ, ಲಿಂಗ, ವರ್ಣ ತಾರತಮ್ಯಗಳನ್ನು ಖಂಡಿಸಿದ ಮಹಾನ್ ಭಕ್ತಿ ಭಂಡಾರಿ, ಬಸವಣ್ಣನವರ ಒಂದೊಂದು ವಚನ ಸಹ ಪ್ರತಿಯೊಬ್ಬ ಮನುಷ್ಯನು ಸಮಾಜದಲ್ಲಿ ಯಾವ ರೀತಿ ಜೀವಿಸಬೇಕು ಜೀವನ ನಡೆಸಬೇಕು ಎಂಬ ಸೂಚನೆ ನೀಡುತ್ತವೆ ಎಂದರಲ್ಲದೆ, ಸಮಾಜದಲ್ಲಿನ ತಪ್ಪುಗಳನ್ನು ಅರಿತುಕೊಂಡು ಸರಳ ವಾಗಿಬದುಕು ನಡೆಸಿದವರು, ಬಸವಣ್ಣನವರು ಆಡಂಬರದ ಜೀವನ ನಡೆಸಿದವರಲ್ಲ ಸರಳ ಜೀವನ ಅರ್ಥೈಸಿಕೊಂಡವರು ಬಸವಣ್ಣನವರ ತತ್ವ ಸಮಾಜದಲ್ಲಿ ಪ್ರತಿಯೊಂದು ಮಹಿಳೆಯರಿಗೂ ಸಮಾನತೆ ದೊರಕಬೇಕು ಎಂಬುದಾಗಿತ್ತು. ಇವರ ವಚನಗಳು ಮೂಢನಂಬಿಕೆಗಳನ್ನು ಖಂಡಿಸಿ, ಭಕ್ತಿ, ನೈತಿಕತೆಯನ್ನು ಎತ್ತಿಹಿಡಿಯುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ವಿಜಯಕುಮಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮುದಾಯದ ಮುಖಂಡರಾದ ಬಿ.ಪಿ. ಐಸಾಮಿಗೌಡ, ನವಿಲೇ ಪರಮೇಶ್, ಕಟ್ಟಾಯ ಶಿವಕುಮಾರ್, ಯು.ಎಸ್.ಬಸವರಾಜ್ ಇತರರಿದ್ದರು.
ಇನ್ನಷ್ಟು ಓದಿ