Dailyhunt Logo
  • Light mode
    Follow system
    Dark mode
    • Play Story
    • App Story
Basil Seeds VS Chia Seeds; ಹೆಚ್ಚು ಪೌಷ್ಠಿಕಾಂಶವಿರುವುದು ಯಾವುದರಲ್ಲಿ, ಆರೋಗ್ಯಕ್ಕೆ ಯಾವುದು ಬೆಸ್ಟ್​?

Basil Seeds VS Chia Seeds; ಹೆಚ್ಚು ಪೌಷ್ಠಿಕಾಂಶವಿರುವುದು ಯಾವುದರಲ್ಲಿ, ಆರೋಗ್ಯಕ್ಕೆ ಯಾವುದು ಬೆಸ್ಟ್​?

ಬೇಸಿಗೆ ಬಂದರೆ ಸಾಕು ಹೊಟ್ಟೆ ತಣ್ಣಗೆ ಮಾಡಿಕೊಳ್ಳಲು ಏನೆಲ್ಲ ಸಾಧ್ಯನೋ ಅದನ್ನೆಲ್ಲ ಪಾಲನೆ ಮಾಡೋದು ಪ್ರತಿಯೊಬ್ಬರು ರೂಢಿಸಿಕೊಂಡಿರುವ ಅಭ್ಯಾಸ. ಈ ಹೊತ್ತಲ್ಲೇ ಹೆಚ್ಚು ಜನರು ಚಿಯಾ ಅಥವಾ ಸಬ್ಜಾ ಬೀಜಗಳನ್ನು ನೀರಿನಲ್ಲಿ ನೆನಸಿ ಕುಡಿಯುತ್ತಾರೆ. ಎರಡು ಬೀಜಗಳು ನೋಡಲು ಒಂದೇ ರೀತಿ ಇವೆ.
ಆದರೆ, ಅಚ್ಚರಿ ಎಂದರೆ ಆರೋಗ್ಯಕ್ಕೆ ಇವು ನೀಡುವ ಪ್ರಯೋಜನ ಮಾತ್ರ ಪ್ರತ್ಯೇಕವಾದದ್ದು. ವಿಭಿನ್ನವಾದದ್ದು.
ಕಾಮಕಸ್ತೂರಿ ಬೀಜ ಅಂದರೆ ಸಬ್ಜಾ ಬೀಜ ಹಾಗೂ ತುಳಸಿ ಬೀಜ ಅಂದರೆ ಚಿಯಾ ಸೀಡ್ಸ್​ ಎರಡರಲ್ಲೂ ಇರುವ ವ್ಯತ್ಯಾಸವೇನು? ಇದರಲ್ಲಿ ಯಾವುದು ಬೆಸ್ಟ್​. ಯಾವುದು ಸೇವನೆ ಮಾಡಿದರೆ ಏನಾಗುತ್ತದೆ ಎನ್ನುವುದು ಎಲ್ಲರಿಗೂ ಇರುವ ಪ್ರಶ್ನೆ. ಇದಕ್ಕೆ ಉತ್ತರ ಈ ಲೇಖನದಲ್ಲಿ ಇದೆ.

ಎರಡರಲ್ಲೂ ಇರುವ ವ್ಯತ್ಯಾಸವೇನು?

  • ಚಿಯಾ ಸೀಡ್ಸ್​ ಅಂಡಾಕಾರದಲ್ಲಿರುತ್ತದೆ. ಅದರ ಬಣ್ಣ ಬೂದು, ಕಪ್ಪು ಹಾಗೂ ಬಿಳಿ.
  • ಸಬ್ಜಾ ಬೀಜಗಳು ದುಂಡಾಕಾರದಲ್ಲಿರುತ್ತದೆ. ಇದರ ಬಣ್ಣ ಕಪ್ಪು ಮಾತ್ರ.
  • ತುಳಸಿ ಬೀಜ ಅಂದರೆ ಚಿಯಾ ಸೀಡ್ಸ್​ ನೆನೆಸಲು 6 ರಿಂದ 8 ಗಂಟೆಯಾದರೂ ಬೇಕಾಗುತ್ತದೆ.
  • ಸಬ್ಜಾ ಬೀಜಗಳನ್ನು ನೆನಸಿ ಸೇವಿಸಲು 15ರಿಂದ30 ನಿಮಿಷ ಬೇಕಾಗುತ್ತದೆ.
  • ಚಿಯಾ ಬೀಜಗಳು ನಟ್ಟಿ ಫ್ಲೇವರ್​ ಹೊಂದಿರುತ್ತದೆ.
  • ಸಬ್ಜಾಗೆ ಯಾವುದೇ ರುಚಿಯಿಲ್ಲ.
  • ಸಬ್ಜಾ ಬೀಜಗಳು ಶೀಘ್ರವಾಗಿ ಉಬ್ಬುವ ಕಾರಣ ಅವು ಜ್ಯೂಸ್ ಅಥವಾ ಪಾನೀಯಗಳಿಗೆ ಸೂಕ್ತ.
  • ಚಿಯಾ ಜೆಲ್ ರೂಪಕ್ಕೆ ತಿರುಗಲು ಸಮಯ ತೆಗೆದುಕೊಳ್ಳುವುದರಿಂದ ಪುಡಿಂಗ್‌ಗಳಿಗೆ ಹೆಚ್ಚು ಬಳಸಲಾಗುತ್ತದೆ.
ಎರಡು ಬೀಜಗಳನ್ನು ಹಾಗೆಯೇ ತಿನ್ನುವಂತಿಲ್ಲ ಅವು ಬಳಕೆಗೆ ಎಷ್ಟು ಸುರಕ್ಷಿತ ಎಂದು ತಿಳಿಯಲು ನೆನಸಿಯೇ ತಿನ್ನುವುದು ಸರಿಯಾದ ವಿಧಾನ ಎನ್ನುತ್ತಾರೆ ವೈದ್ಯರು.

ಪ್ರೋಟಿನ್ ಎಷ್ಟಿದೆ?

ಚಿಯಾದಲ್ಲಿ ಒಮೆಗಾ-3, ಕೊಬ್ಬಿನಾಮ್ಲ, ನಾರಿನಾಂಶ, ಪ್ರೋಟಿನ್, ಫೈಬರ್​ ಅಂಶ ಇವೆ. ಚಿಯಾ ಸ್ಮೂತಿ ಓಟ್ಸ್​ ಸೇರಿದಂತೆ ಬೇಯಿಸದೆ ತಿನ್ನುವ ಆಹಾರದಲ್ಲಿ ಸೇವನೆ ಮಾಡಬಹುದು. ತೂಕ ಇಳಿಕೆಗೆ, ರಕ್ತದಲ್ಲಿನ ಸಕ್ಕರೆ ಮಟ್ಟ ಇಳಿಕೆಗೆ ಹಾಗೂ ಶಕ್ತಿ ಸಾಂದ್ರತೆ ಹೆಚ್ಚಿಸಲು ಚಿಯಾ ಬೆಸ್ಟ್. ಇದು ಮಧ್ಯ ಮತ್ತು ದಕ್ಷಿಣ ಮೆಕ್ಸಿಕೋದಲ್ಲಿ ಹೇರಳವಾಗಿ ಕಂಡುಬರುತ್ತದೆ.
ಇದನ್ನು ಓದಿ: ನಾನ್​ಸ್ಟಿಕ್​ ಪ್ಯಾನ್​ ಮೇಲೆ ಗೆರೆ ಬಿದ್ದಿದ್ರೆ ಬಳಸಲೇ ಬೇಡಿ; ಡೇಂಜರ್​ ಕಣ ದೇಹ ಸೇರೋ ಮುನ್ನ ಎಚ್ಚೆತ್ತುಕೊಳ್ಳಿ..NonStick Pan
ಸಬ್ಜಾ ಬೀಜಗಳು ಮೆಡಿಟರೇನಿಯನ್​ನ ಸ್ಥಳೀಯ ಬೀಜ. ಇದರಲ್ಲಿ ಕ್ಯಾಲ್ಶಿಯಂ ಹೇರಳವಾಗಿದೆ. ಇದು ದೇಹದಲ್ಲಿ ಅಸಿಡಿಟಿ ಕಡಿಮೆ ಮಾಡಲು, ದೇಹವನ್ನು ತಂಪಾಗಿರಿಸಲು, ಉಷ್ಣತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೂದಲಿನ ಆರೋಗ್ಯ ಹಾಗೂ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಬೇಸಿಗೆ ಕಾಲದಲ್ಲಿ ಇದು ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ವೈದ್ಯರು.

ಯಾವುದು ಬೆಸ್ಟ್​?

ತುರ್ತು ಸ್ಥಿತಿಯಲ್ಲಿ ಬಳಕೆ ಮಾಡಲು ಸಬ್ಜಾ ಬೀಜಗಳು ಬೆಸ್ಟ್​. ಆದರೆ, ಆರೋಗ್ಯ, ಪ್ರೋಟಿನ್​ ವಿಚಾರಕ್ಕೆ, ನಾರಿನಾಂಶ ಬೇಕು. ಒಮೆಗಾ-3 ಫ್ಯಾಟಿ ಆಸಿಡ್‌ಗೆ ಚಿಯಾ ಬೀಜಗಳು ಹೆಚ್ಚು ಸ್ಥಿರ ಮತ್ತು ನಂಬಿಕಾರ್ಹ ಮೂಲವಾಗಿವೆ. ಚಿಯಾ ಬೀಜವನ್ನು ನೆನಸಿ ಅದು ಜೆಲ್​ ರೂಪಕ್ಕೆ ತಿರುಗಿದಾಗ ಸೇವನೆ ಮಾಡುವುದು ಹೆಚ್ಚು ಒಳ್ಳೆಯದರು. ಎರಡನ್ನು ಸಮತೋಲಿತವಾಗಿ ಬಳಕೆ ಮಾಡೋದು ಮುಖ್ಯ ಎನ್ನುತ್ತಾರೆ ಪೌಷ್ಟಿಕಾಂಶ ಸಂಶೋಧಕಿ ಡಾ. ಸೀಮಾ ಗುಲಾಟಿ, (ಏಜೆನ್ಸೀಸ್​).
ಈ ಮೇಲಿರುವ ಮಾಹಿತಿಯನ್ನು ಸಾಮಾಜಿಕ ಜಾಲಾತಾಣವನ್ನು ಆಧರಿಸಿ ಬರೆಯಲಾಗಿದೆ. ಇದನ್ನು "ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani