Dailyhunt Logo
  • Light mode
    Follow system
    Dark mode
    • Play Story
    • App Story
ಬಟ್ಟೆ ಬ್ಯಾಗ್​ ವಿತರಣಾ ಕೇಂದ್ರ ಸ್ಥಾಪನೆ

ಬಟ್ಟೆ ಬ್ಯಾಗ್​ ವಿತರಣಾ ಕೇಂದ್ರ ಸ್ಥಾಪನೆ

ರಾಮನಗರ: ಪ್ಲಾಸ್ಟಿಕ್​ ಬಳಕೆಗೆ ಪರ್ಯಾಯವಾಗಿ ಬಟ್ಟೆ ಬ್ಯಾಗ್​ ಸುಲಭವಾಗಿ ಜನರಿಗೆ ಸಿಗುವ ರೀತಿಯಲ್ಲಿ ನಗರಸಭೆ ಕ್ರಮ ಕೈಗೊಂಡಿದೆ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ತಿಳಿಸಿದರು.
ರಾಮನಗರದ ರಾಯರದೊಡ್ಡಿ, ಕೆಂಪೇಗೌಡ ಸರ್ಕಲ್​ ಸೇರಿ ನಗರದ ವಿವಿಧೆಡೆ ಎಂಟು ಸ್ಥಳಗಳಲ್ಲಿ ಶುಕ್ರವಾರ ಬಟ್ಟೆ ಬ್ಯಾಗ್​ ವೆಂಡಿಂಗ್​ ಮೆಷಿನ್​ (ಎಟಿಎಂ) ವಿತರಣಾ ಯಂತ್ರಗಳಿಗೆ ಚಾಲನೆ ನೀಡಿ ಮಾತನಾಡಿದರು.
ರಾಮನಗರ ನಗರಸಭೆ ರಾಜ್ಯದಲ್ಲಿಯೇ ವಿಶೇಷವಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಾ ಅದರಲ್ಲಿ ಯಶಶ್ವಿಯಾಗಿಯೂ ಮುನ್ನಡೆಯುತ್ತಾ ಬರುತ್ತಿದೆ. ಜನಸ್ನೇಹಿ, ಪರಿಸರಸ್ನೇಹಿ ಆಡಳಿತ ನೀಡುವುದು ನಮ್ಮೆಲ್ಲರ ಧ್ಯೇಯ. ನಗರವನ್ನು ಪ್ಲಾಸ್ಟಿಕ್​ ಮುಕ್ತ ಮಾಡಲು ಅಭಿಯಾನ ನಡೆಸುತ್ತಿದ್ದೇವೆ. ನಾವು ಪ್ಲಾಸ್ಟಿಕ್​ ಬದಲು ಪರ್ಯಾಯವಾಗಿ ಬಟ್ಟೆ ಬ್ಯಾಗ್​ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಬಟ್ಟೆ ಬ್ಯಾಗ್​ 10 ರೂ. ನಲ್ಲಿ ಕಾಯಿನ್​ ಹಾಕಿದರೆ ಮೆಷಿನ್​ನಲ್ಲಿ ಸಿಗುವ ಹಾಗೇ ಮಾಡಲಾಗಿದೆ. ನಗರದ ಆಯ್ದ ಎಂಟು ಸ್ಥಳಗಳಲ್ಲಿ ಮೆಷಿನ್​ ಅಳವಡಿಸಲಾಗಿದೆ. ಹುಬ್ಬಳ್ಳಿಯ ಕಂಪನಿಯಿಂದ ಬಟ್ಟೆ ಬ್ಯಾಗ್​ ವಿತರಣಾ ಯಂತ್ರಗಳನ್ನು ತರಲಾಗಿದೆ. ಇಂದು ಜನರು ಹೆಚ್ಚಾಗಿ ಬಳಕೆ ಮಾಡುವ ವ್ಯಾಪಾರದ ಜಾಗಗಳಲ್ಲಿ ಬಟ್ಟೆ ಬ್ಯಾಗ್​ ವಿತರಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು. ಸಾರ್ವಜನಿಕರು ಮತ್ತು ವರ್ತಕರು ಪ್ಲಾಸ್ಟಿಕ್​ ಬಳಕೆಗೆ ಇತಿಶ್ರೀ ಹಾಡಬೇಕು. ನಗರಸಭೆ ಜತೆ ಸಾರ್ವಜನಿಕರು ಕೈ ಜೋಡಿಸಿ ಸ್ವಚ್ಛ ರಾಮನಗರದ ಕನಸು ನನಸು ಮಾಡಬೇಕಿದೆ ಎಂದರು.
ಆಯುಕ್ತ ಡಾ. ಜಯಣ್ಣ, ನಗರಸಭೆ ಉಪಾಧ್ಯೆ ಗಿರಿಜಮ್ಮ ಗುರುವೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್​, ಸದಸ್ಯರಾದ ಮಂಜುನಾಥ್​, ಪವಿತ್ರಾ, ಬಿ.ಸಿ. ಪಾರ್ವತಮ್ಮ, ವಿಜಯಕುಮಾರಿ, ಸೋಮಶೇಖರ್​, ರಮೇಶ್​, ನರಸಿಂಹ, ಮುತ್ತುರಾಜು, ಮಹಾಲ್ಮ, ಮಂಜುಳಾ, ಸಮದ್​, ನಾಗಮ್ಮ, ಜಯಲಕ್ಷ$್ಮಮ್ಮ, ಅಜ್ಮತ್​ ಎಇಇ ವಿಶ್ವನಾಥ್​, ಸುಬ್ರಹ್ಮಣಿ, ನಟರಾಜೇಗೌಡ, ಪವಿತ್ರ, ಮುಖಂಡರಾದ ಶಿವಕುಮಾರಸ್ವಾಮಿ, ಪ್ರವಿಣ್​, ಹರೀಶ್​, ವೆಂಕಟೇಶ್​, ಲ್ಮಕಾಂತ್​, ಪುಟ್ಟಣ್ಣ ಇದ್ದರು.
ಹೇಗಿದೆ ಬಟ್ಟೆ ಬ್ಯಾಗ್​
10 ರೂ. ನಾಣ್ಯ ಎಟಿಎಂನಂತೆ ಇರುವ ಮೆಷಿನ್​ನಲ್ಲಿ ಹಾಕಿದರೆ ಅದರಿಂದ ಒಂದು ಬಟ್ಟೆ ಬ್ಯಾಗ್​ ಬರುತ್ತದೆ. ನಗರಸಭೆ ಮೆಷಿನ್​ಗಳನ್ನು ನಗರದ ರಾಯರದೊಡ್ಡಿ, ಕೆಂಪೇಗೌಡ ಸರ್ಕಲ್​, ಎಪಿಎಂಸಿ ಆವರಣ, ಐಜೂರು ಸರ್ಕಲ್​, ಮಾಗಡಿ ರಸ್ತೆ, ಹಳೇ ಬಸ್​ ನಿಲ್ದಾಣ, ಕೋರ್ಟ್​ರಸ್ತೆ, ದೇವೇಗೌಡ ಕಾಂಪ್ಲೆಕ್ಸ್​ನಲ್ಲಿ ಅಳವಡಿಸಲಾಗಿದೆ. ಬಟ್ಟೆ ಬ್ಯಾಗ್​ ಬಳಸಲು ಸುಲಭವಾಗಿದ್ದು, ಜತೆಗೆ 10 ಕೆ.ಜಿ. ತೂಕ ಮನೆಗೆ ಒಯ್ಯಬಹುದು. ಒಂದು ಭಾರಿ ಬಳಕೆಗೆ ಬ್ಯಾಗ್​ ಪಡೆದರೆ ಸುಮಾರು 10 ರಿಂದ 15 ಭಾರಿ ಮರು ಬಳಕೆ ಮಾಡಬಹುದು. ಜೇಬಿನಲ್ಲಿ ಇಟ್ಟುಕೊಂಡು ಬರಬಹುದು ತೊಳೆದು ಮತ್ತೆ ಮತ್ತೆ ಬಳಸಬಹುದಾಗಿರುತ್ತದೆ ಎಂದು ಹೇಳುತ್ತಾರೆ ನಗರಸಭೆ ಆಯುಕ್ತ ಡಾ. ಜಯಣ್ಣ. "

ನಗರಸಭೆಯಿಂದ ಈಗಾಗಲೇ ಜನರಿಗೆ ಸುಮಾರು 10 ರಿಂದ 15 ಸಾವಿರ ಬಟ್ಟೆ ಬ್ಯಾಗ್​ಗಳನ್ನ ವಿತರಿಸಿದ್ದೇವೆ. ಆದರೂ ಪ್ಲಾಸ್ಟಿಕ್​ ಬಳಕೆ ನಿಂತಿಲ್ಲ. ಕಡಿಮೆ ದರದಲ್ಲಿ ಉತ್ತಮ ಬ್ಯಾಗ್​ ಸಿಗುವ ವ್ಯವಸ್ಥೆ ಮಾಡಲಾಗಿದೆ. ಜನರು ಪ್ಲಾಸ್ಟಿಕ್​ ಮೊರೆ ಹೋಗದೆ ಬಟ್ಟೆ ಬ್ಯಾಗ್​ ಬಳಸಿದರೆ, ನಗರಸಭೆ ಶ್ರಮಕ್ಕೆ ಪ್ರತಿಫಲ ಸಿಗಲಿದ್ದು, ನಮ್ಮ ಹಸಿರು ರಾಮನಗರದ ಕನಸು ನನಸಾಗಲಿದೆ.

- > ಕೆ. ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ.

Dailyhunt
Disclaimer: This content has not been generated, created or edited by Dailyhunt. Publisher: Vijayvani