Dailyhunt
ಬಯೋಪಿಕ್ ಆಗ್ತಿದೆ ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಜೀವನ; ಹೀರೋ ಯಾರಿರಬಹುದು ಹೇಳಿ?

ಬಯೋಪಿಕ್ ಆಗ್ತಿದೆ ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಜೀವನ; ಹೀರೋ ಯಾರಿರಬಹುದು ಹೇಳಿ?

ಚೆನ್ನೈ: ಸಿನಿಮಾಕ್ಕೂ ಕ್ರಿಕೆಟಿಗರಿಗೂ ಅವಿನಾಭಾವ ನಂಟು. ಈಗಾಗಲೇ ಹಲವರು ಕ್ರಿಕೆಟರ್​ಗಳ ಜೀವನ ಸಿನಿಮಾ ರೂಪದಲ್ಲಿ ಹೊರಬಂದಿರುವುದು ಗೊತ್ತಿರುವ ವಿಚಾರ. ಇದೀಗ ಆ ಸಾಲಿಗೆ ಮತ್ತೊಬ್ಬ ಕ್ರಿಕೆಟರ್​ ಸೇರ್ಪಡೆಯಾಗಲಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರ ಬಯೋಪಿಕ್​ಗೆ ತೆರೆಮರೆಯಲ್ಲಿ ಕೆಲಸಗಳು ಶುರುವಾಗಿವೆ.

ಮೂಲತಃ ತಮಿಳುನಾಡಿನವರಾದ ಅಶ್ವಿನ್ ಈಗಾಗಲೇ ತಮ್ಮ ಬೌಲಿಂಗ್​ ಮೂಲಕವೇ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಸ್ಪಿನ್ ಮಾಂತ್ರಿಕ ಪಟ್ಟ ಅಲಂಕರಿಸಿದ್ದಾರೆ. ಹೀಗಿರುವಾಗಲೇ ಅಶ್ವಿನ್ ಅವರ ಕ್ರಿಕೆಟ್ ಜೀವನದ ಏರಿಳಿತಗಳನ್ನು ತೆರೆಮೇಲೆ ತರಲು ಕಾಲಿವುಡ್ ಮಂದಿ ಪ್ಲಾನ್ ಮಾಡಿದ್ದಾರೆ.

ಹಾಗಾದರೆ, ಅಶ್ವಿನ್ ಪಾತ್ರ ತೆರೆಮೇಲೆ ನಿಭಾಯಿಸುವುದು ಯಾರು? ಸದ್ಯಕ್ಕೆ ಆ ಪ್ರಶ್ನೆಗೆ ಉತ್ತರ ಅಶೋಕ್ ಸೆಲ್ವನ್ ಎನ್ನಲಾಗುತ್ತಿದೆ. ಆದರೆ, ನಿರ್ದೇಶಕರು ಯಾರು ಎಂಬ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಹೊರಬಿದ್ದಿಲ್ಲ. ನಿರ್ಮಾಪಕರ್ಯಾರು ಎಂಬುದೂ ಅಧಿಕೃತವಾಗಿಲ್ಲ. ಹಾಗಾಗಿ ಎಲ್ಲ ಮಾಹಿತಿ ಹೊರಬರಲು ಇನ್ನು ಕೆಲ ತಿಂಗಳ ಕಾಲ ಕಾಯಲೇಬೇಕು.

ಎರಡನೇ ಮಗುವಾದ ಮೇಲೂ ಕರೀನಾ ಹೀಗಿದ್ದಾರೆ ನೋಡಿ- ಫೋಟೋ ಹಂಚಿಕೊಂಡ ಬಾಲಿವುಡ್‌ ತಾರೆ…

Dailyhunt
Disclaimer: This content has not been generated, created or edited by Dailyhunt. Publisher: Vijayvani