Dailyhunt
ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ದೀಪಿಕಾ ಪಡುಕೋಣೆ

ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ದೀಪಿಕಾ ಪಡುಕೋಣೆ

ಬೆಂಗಳೂರು: ಬಾಲಿವುಡ್ ಸ್ಟಾರ್ ದಂಪತಿ ರಣ್‌ವೀರ್ ಸಿಂಗ್- ದೀಪಿಕಾ ಪಡುಕೋಣೆ ದಂಪತಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ದೀಪಿಕಾ ಪಡುಕೋಣೆಗೆ ಬೆಂಗಳೂರಿನಲ್ಲಿಯೇ ಹೆರಿಗೆ ಆಗಲಿದೆ ಎನ್ನುವ ಗುಡ್ ನ್ಯೂಸನ್ನು ಅಭಿಮಾನಿಗಳಿಗೆ ಕೊಟ್ಟಿದ್ದಾರೆ.

ದೀಪಿಕಾ ಕರ್ನಾಟಕ ಮೂಲದವರು ಎನ್ನುವುದು ಬಹುತೇಕರಿಗೆ ತಿಳಿದಿರುವ ವಿಷಯ. ಮಂಗಳೂರು ಮೂಲದವರಾಗಿರುವ ಪಡುಕೋಣೆಯವರ ಮಾತೃಭಾಷೆ ಕೊಂಕಣಿ ಆಗಿದೆ. ಆದರೆ ದೀಪಿಕಾ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಜನಿಸಿದರು. ನಂತರ ಅವನು ತನ್ನ ಹೆತ್ತವರೊಂದಿಗೆ ಭಾರತಕ್ಕೆ ಬಂದರು. ಆದರೆ ಮೂಲ ಮಾತ್ರ ಕರ್ನಾಟಕ. ಇದೇ ಹಿನ್ನೆಲೆಯಲ್ಲಿ, ದೀಪಿಕಾ ಮಗು ಕೂಡ ಕರ್ನಾಟದಲ್ಲಿಯೇ ಜನಿಸಲಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿದೆ. ಇಲ್ಲಿನ ಪ್ರತಿಷ್ಠಿತ ಆಸ್ಪತ್ರೆ ಹಾಗೂ ವೈದ್ಯರುಗಳ ನೆರವನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

ಬೆಂಗಳೂರಿನ ಇಂದಿರಾ ನಗರದಲ್ಲಿ ದೀಪಿಕಾ ಪಡುಕೋಣೆ ಮನೆಯಿದೆ. ಆದ್ದರಿಂದ ಬೆಂಗಳೂರಿನಲ್ಲಿಯೇ ಸ್ವಲ್ಪ ಸಮಯ ನೆಲೆಸಲಿದ್ದಾರೆ ಎನ್ನಲಾಗಿದೆ. 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿತ್ತು. ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ನೀರಿಕ್ಷೆಯಲ್ಲಿದೆ.

ಬೆಂಗಳೂರಿನ ಇಷ್ಟದ ಜಾಗಗಳು ಹಾಗೂ ಹೋಟೆಲ್​ಗಳ ಬಗ್ಗೆ ವಿವರಿಸಿದ್ದರು. ಗೀತಾ ಸ್ಟೋರ್ಸ್, ಮೇಘನಾ, ವಿದ್ಯಾರ್ಥಿ ಭವನ್, ಸಿಟಿಆರ್ ಇನ್ನಿತರೆ ಹೋಟೆಲ್​ಗಳಿಗೆ ಭೇಟಿ ನೀಡಿರುವ ಬಗ್ಗೆ ಹಾಗೂ ಬೆಂಗಳೂರಿನ ಅನ್ನ ಹಾಗೂ ರಸಂ ತಮಗೆ ಬಹಳ ಇಷ್ಟವೆಂದ ಬಗ್ಗೆ ತಿಳಿಸಿದ್ದರು.

ಸೆಲೆಬ್ರೆಟಿಗಳ ಬಳಿ ಒಂದು ಮನವಿ ಇಟ್ಟ ದರ್ಶನ್​; ಬಾಸ್ ಹೇಳವ್ರೆ ಅಂದ್ರೆ ಮಾಡಲೇಬೇಕು ಎಂದ್ರು ಫ್ಯಾನ್ಸ್

ಫ್ರಿಡ್ಜ್‌ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನಲೇಬೇಡಿ; ಅನಾರೋಗ್ಯ ಖಂಡಿತಾ…

ಫ್ರಿಡ್ಜ್‌ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನಲೇಬೇಡಿ; ಅನಾರೋಗ್ಯ ಖಂಡಿತಾ…

Dailyhunt
Disclaimer: This content has not been generated, created or edited by Dailyhunt. Publisher: Vijayvani