Dailyhunt Logo
  • Light mode
    Follow system
    Dark mode
    • Play Story
    • App Story
ಭಾರತ ವಿರುದ್ಧದ ಟೆಸ್ಟ್​ ಸರಣಿಗೆ ಮುನ್ನ ಶ್ರೀಲಂಕಾಕ್ಕೆ ಗಾಯದ ಹೊಡೆತ!

ಭಾರತ ವಿರುದ್ಧದ ಟೆಸ್ಟ್​ ಸರಣಿಗೆ ಮುನ್ನ ಶ್ರೀಲಂಕಾಕ್ಕೆ ಗಾಯದ ಹೊಡೆತ!

ಕೊಲಂಬೊ: ಶನಿವಾರದಿಂದ ನಡೆಯಲಿರುವ ಭಾರತ ವಿರುದ್ಧದ ಟೆಸ್ಟ್​ ಸರಣಿಗೆ (Test Series) ಮುನ್ನ ಆತಿಥೇಯ ಶ್ರೀಲಂಕಾ ತಂಡಕ್ಕೆ ಗಾಯದ ಹೊಡೆತ ಎದುರಾಗಿದೆ. ಪ್ರಮುಖ ಬ್ಯಾಟರ್​ಗಳಾದ ಕುಸಲ್​ ಮೆಂಡಿಸ್​ ಮತ್ತು ಪಥುಮ್​ ನಿಸ್ಸಂಕ ಗಾಯದಿಂದಾಗಿ ಭಾರತ ವಿರುದ್ಧದ ಟೆಸ್ಟ್​ ಸರಣಿಗೆ ಅಲಭ್ಯರಾಗಿದ್ದಾರೆ.
ಸರಣಿಗೆ ಶ್ರೀಲಂಕಾ ತಂಡವನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ. ಗಾಯದ ಸಮಸ್ಯೆಯಿಂದ ಆಟಗಾರರ ಲಭ್ಯತೆಯ ಗೊಂದಲ ಇದಕ್ಕೆ ಪ್ರಮುಖ ಕಾರಣವೆನಿಸಿದೆ.
ಕುಸಲ್​ ಮೆಂಡಿಸ್​ ಮತ್ತು ಪಥುಮ್​ ನಿಸ್ಸಂಕ ಇಬ್ಬರೂ ಟೆಸ್ಟ್​ ಕ್ರಿಕೆಟ್​ನ ಕಾರ್ಯದೊತ್ತಡ ಎದುರಿಸಲು ಇನ್ನೂ ಫಿಟ್​ ಆಗಿಲ್ಲ ಎನ್ನಲಾಗಿದೆ. ಅವರಿಬ್ಬರ ಗೈರಿನಲ್ಲಿ ಲಂಕಾ ಆಯ್ಕೆಗಾರರು, ಅನುಭವಿ ವಿಕೆಟ್​ ಕೀಪರ್​-ಬ್ಯಾಟರ್​ ನಿರೋಶನ್​ ಡಿಕ್​ವೆಲ್ಲಾಗೆ ಅವಕಾಶ ಕಲ್ಪಿಸಲು ಬಯಸಿದ್ದಾರೆ. ತಾನಾಡಿರುವ 54 ಟೆಸ್ಟ್​ಗಳ ಪೈಕಿ 2023ರಲ್ಲಿ ಕೊನೇ ಪಂದ್ಯ ಆಡಿರುವ ಡಿಕ್​ವೆಲ್ಲಾ 3 ವರ್ಷಗಳ ಬಳಿಕ ಲಂಕಾ ತಂಡಕ್ಕೆ ಮರಳುವ ನಿರೀೆಯಲ್ಲಿದ್ದಾರೆ. ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಕೂಡ ಆಗಿದ್ದ ಕುಸಲ್​ ಮೆಂಡಿಸ್​ ಗೈರಿನಲ್ಲಿ ಆಯ್ಕೆಗಾರರು, 22 ವರ್ಷದ ಅಂಜಲ ಬಂಡಾರಗಿಂತ ಡಿಕ್​ವೆಲ್ಲಾಗೆ ಆದ್ಯತೆ ನೀಡಲಿದ್ದಾರೆ ಎನ್ನಲಾಗಿದೆ.

ಅಸಿತ ಫೆರ್ನಾಂಡೊ ವೇಗದ ಬೌಲಿಂಗ್​ ಮತ್ತು ಪ್ರಭಾತ್​ ಜಯಸೂರ್ಯ ಸ್ಪಿನ್​ ಬೌಲಿಂಗ್​ ವಿಭಾಗವನ್ನು ಮುನ್ನಡೆಸಲಿದ್ದಾರೆ. ನಾಯಕ ಧನಂಜಯ ಡಿಸಿಲ್ವ, ಕಮಿಂಡು ಮೆಂಡಿಸ್​, ದಿನೇಶ್​ ಚಾಂಡಿಮಲ್​, ಲಹಿರು ಉದರ ಲಂಕಾ ಬ್ಯಾಟಿಂಗ್​ ವಿಭಾಗದ ಪ್ರಮುಖರು. ನಿಸ್ಸಂಕ ಗೈರಿನಲ್ಲಿ ನಿಶಾನ್​ ಮಧುಷ್ಕ ಅಗ್ರ ಕ್ರಮಾಂಕದಲ್ಲಿ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಮಧುಷ್ಕ ಭಾರತ ತಂಡದ ಅಭ್ಯಾಸ ಪಂದ್ಯದಲ್ಲಿ ಲಂಕಾ ಇಲೆವೆನ್​ ಪರ ಅವಳಿ ಅರ್ಧಶತಕ ಸಿಡಿಸಿ ಮಿಂಚಿದ್ದರು.
ಗಾಲೆಗೆ ತೆರಳಿದ ಭಾರತ ತಂಡಮೊದಲ ಟೆಸ್ಟ್​ ಪಂದ್ಯ ನಡೆಯಲಿರುವ ಗಾಲೆಗೆ ಭಾರತ ತಂಡದ ಆಟಗಾರರು ಮಂಗಳವಾರ ತೆರಳಿದರು. ಕೊಲಂಬೊದಲ್ಲಿ ಅಭ್ಯಾಸ ಪಂದ್ಯ ಆಡಿದ ಬಳಿಕ ನೆಟ್ಸ್​ನಲ್ಲೂ ಅಭ್ಯಾಸ ನಡೆಸಿದ್ದ ಆಟಗಾರರು, ಬುಧವಾರ ಗಾಲೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಗುರುವಾರದಿಂದ ಟೆಸ್ಟ್​ ಸರಣಿಗೆ ಮತ್ತೆ ಅಭ್ಯಾಸ ನಡೆಸಲಿದ್ದಾರೆ ಎನ್ನಲಾಗಿದೆ. ಈ ನಡುವೆ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್​ ಅಗರ್ಕರ್​ ಮಂಗಳವಾರ ಗಾಲೆಯಲ್ಲಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vijayvani