Dailyhunt Logo
  • Light mode
    Follow system
    Dark mode
    • Play Story
    • App Story
ಭವಿಷ್ಯ ರೂಪಿಸುವ ಪ್ರಮುಖ ಹಂತ ಪದವಿ ಶಿಕ್ಷಣ

ಭವಿಷ್ಯ ರೂಪಿಸುವ ಪ್ರಮುಖ ಹಂತ ಪದವಿ ಶಿಕ್ಷಣ

* ಪ್ರಾಂಶುಪಾಲ ನಿತ್ಯಾನಂದ್​ ವಿ. ಗಾಂವ್ಕರ್​ ಅನಿಸಿಕೆ

* ತೆಂಕನಿಡಿಯೂರು ಕಾಲೇಜಿನಲ್ಲಿ 'ಹೊಸ ದಿಗಂತ' ದಿಕ್ಸೂಚಿ ಕಾರ್ಯಕ್ರಮ


ಉಡುಪಿ: ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನದ ಜತೆಗೆ ತಾರ್ಕಿಕ ಮನೋಭಾವ, ಸಂವಹನ ಕಲೆ, ತಂತ್ರಜ್ಞಾನಗಳ ಸಿದ್ಧತೆ, ವೃತ್ತಿ ಆಯ್ಕೆಯೂ ಅಗತ್ಯ.
ಜೀವನಕ್ಕೆ ಬೇಕಾದ ಕೌಶಲ ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಬದುಕು ಎದುರಿಸಬೇಕು. ಪದವಿ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪ್ರಮುಖ ಹಂತವಾಗಿದೆ ಎಂದು ಪ್ರಾಂಶುಪಾಲ ಪ್ರೊ. ನಿತ್ಯಾನಂದ್​ ವಿ. ಗಾಂವ್ಕರ್​ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎವಿ ಸಭಾಂಗಣದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೋಶದ ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 'ಹೊಸ ದಿಗಂತ; ಪದವಿ ಶಿಕ್ಷಣಕ್ಕೆ ಆತ್ಮವಿಶ್ವಾಸದ ಆರಂಭ' ಎಂಬ ದಿಕ್ಸೂಚಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಐಕ್ಯೂಎಸಿ ಸಂಯೋಜಕ ಡಾ. ವಿಷ್ಣುಮೂರ್ತಿ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಘು ನಾಯ್ಕ್​, ಯೂಥ್​ ರೆಡ್​ ಕ್ರಾಸ್​ ಘಟಕದ ಸಂಯೋಜನಾಧಿಕಾರಿ ಪ್ರಶಾಂತ್​ ನೀಲಾವರ, ಸಂಖ್ಯಾಶಾಸ್ತ್ರ ಸಹ ಪ್ರಾಧ್ಯಾಪಕ ಉಮೇಶ್​ ಪೈ ಉಪಸ್ಥಿತರಿದ್ದರು.
ಉದ್ಯೋಗ ಮಾಹಿತಿ ಅಧಿಕಾರಿ ಮರ್ವಿನ್​ ಡಿಸೋಜ ಕಾರ್ಯಕ್ರಮ ನಡೆಸಿಕೊಟ್ಟರು. ಕಾಲೇಜಿಗೆ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳ ಮುಖ್ಯಸ್ಥರು ಮಾರ್ಗದರ್ಶನ ನೀಡಿದರು. ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vijayvani