ಯಾದಗಿರಿ : ವಿವಿಧ ಇಲಾಖೆಗಳಿಂದ ನಡೆಯುವ ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರದ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿಗಾಗಿ ಅರ್ಜಿ ಸಲ್ಲಿಸಿ, ಕ್ರಮಕ್ಕೆ ಒತ್ತಾಯಿಸುವ ಪತ್ರಕರ್ತರು ಸೇರಿ ವಿವಿಧ ಸಂಟನೆಗಳ ಮುಖಂಡರನ್ನು ಹತ್ತಿಕ್ಕಿವ ಕೆಲಸ ಜಿಪಂ ಸಿಇಒ ಅವರಿಂದ ನಡೆಯುತ್ತಿದೆ ಎಂದು ಹಿರಿಯ ಪತ್ರಕರ್ತ ಈರಣ್ಣ ಹಾದಿಮನಿ ಆರೋಪಿಸಿದ್ದಾರೆ.ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 24 ಜನರಿಗೆ ದೂರು ವಸೂಲಾತಿ ದಂಡ ಕಟ್ಟುವ ನಿಟ್ಟಿನಲ್ಲಿ ನೋಟಿಸ್ ಜಾರಿ ಮಾಡುವ ಕಾನೂನಿಯ ಭಯವೊಡ್ಡಿ, ಅತ್ತ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ಜಿಪಂ ಸಿಇಒ ಅವರು ಮುಂದಾಗಿದ್ದಾರೆ.
ಇಲಾಖೆಗಳಲ್ಲಿ ನಡೆಯುವ ಅನ್ಯಾಯ, ಅಕ್ರಮ, ಭ್ರಷ್ಟಾಚಾರದ ಬಗ್ಗೆ ಯಾರು ಪ್ರಶ್ನೆ ಮಾಡಬಾರದೇ? ಅದರಲ್ಲೂ ಪತ್ರಕರ್ತರು, ಹೋರಾಟಗಾರರು ಜನಪರವಾಗಿ ಕೆಲಸ ಮಾಡುತ್ತಿರಬೇಕಾದರೆ ಇಲಾಖೆಗಳಿಗೆ ಅರ್ಜಿ ಹಾಕಿ ನಂತರ ವಾಪಸ್ ಪಡೆಯುವ ಮೂಲಕ ನೀವುಗಳೇಲ್ಲ ಅನೇಕ ರೀತಿಯಲ್ಲಿ ಇಲಾಖೆಗಳಿಗೆ ನಷ್ಟ ಮಾಡಿದ್ದಿರಿ ಎಂದು ಹೇಳಿ ಏಕಾಏಕಿ ದಂಡ ವಸೂಲಾತಿ ನೋಟಿಸ್ ನೀಡಿದ್ದು ಖಂಡನೀಯ ಎಂದು ಅವರು ಹೇಳಿದ್ದಾರೆ.ಇಷ್ಟೇ ಅಲ್ಲದೆ ಆಯಾ ತಾಲೂಕುಗಳ ಪೊಲೀಸ್ರಿಂದ ನಮಗೆ ದೂರವಾಣಿ ಕರೆ ಮಾಡಿಸಿ ದಂಡ ಕಟ್ಟಿದ್ದಿರಾ, ಇಲ್ಲವೇ ಎಂದು ಕೇಳುವ ಮೂಲಕ ಭಯದ ವಾತಾವರಣವನ್ನು ಜಿಪಂ ಸಿಇಒ ಅವರು ಮಾಡಿದ್ದಾರೆಂದು ಅವರು ಆರೋಪಿಸಿದರು. ತಪ್ಪು ಮಾಡಿದರೆ ಪರಿಶೀಲನೆ, ತನಿಖೆ ನಡೆಸಿ, ಆಗ ಸಂಬಂಧಪಟ್ಟವರಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಜರುಗಿಸಿದರೇ ನಮ್ಮ ಅಭ್ಯಂತರವಿಲ್ಲ. ಆದರೆ ಏಕಾಏಕಿ ದಂಡ ಕಟ್ಟುವ ಕುರಿತು ನೋಟಿಸ್ ನೀಡಿ, ಇದನ್ನು ರ್ನಿಲಕ್ಷ ಮಾಡಿದರೇ ಸಂಟನೆ ಮತ್ತು ಪತ್ರಿಕೆ ಬ್ಲಾಕ್ ಲಿಸ್ಟ್ನಲ್ಲಿ ಹಾಕುವುದಾಗಿ ಹೇಳಿದ್ದಾರೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಯ ವಿರುದ್ಧದ ಕೆಲಸ, ಕಾರಣ ಕೂಡಲೇ ಇಲ್ಲಿಗೆ ನಿಲ್ಲಿಸಬೇಕು ಇಲ್ಲವಾದರೆ ಮುಂದೆ ಜಿಪಂ ಕಚೇರಿ ಎದುರು ದಲಿತ, ಕನ್ನಡಪರ ಸಂಟನೆಗಳೊಂದಿಗೆ ಹೋರಾಟ ಮಾಡುವುದಾಗಿ ಈರಣ್ಣ ಎಚ್ಚರಿಕೆ ನೀಡಿದ್ದಾರೆ.ವಿವಿಧ ಸಂಟನೆಗಳ ಮುಖಂಡರಾದ ಹಣಮಂತರಾಯ, ಭೀಮಾಶಂಕರ ನಾಟೇಕಾರ, ಬಸವರಾಜ ಹಾದಿಮನಿ, ಹುಸೇನ್ ದೊಡ್ಡಮನಿ, ವಿಶ್ವಾರಾಧ್ಯ ಬಿರನೂರ, ಮರೆಪ್ಪ ಕ್ರಾಂತಿ, ಪ್ರಭುಗೌಡ ಪೊತರೆಡ್ಡಿ, ಲಕ್ಷ$್ಮಣ ಹಳಿಸಗರ, ಬಲಭೀಮಪ್ಪ ದೊಡ್ಡಮನಿ, ಯಂಕಪ್ಪ ಮಕಾಶಿ, ಲಕ್ಷ್ಮೀಕಾಂತ ನಾಯಕ, ವಿಶ್ವರಾಜ ಛಲವಾದಿ ಇತರರಿದ್ದರು.
ಇನ್ನಷ್ಟು ಓದಿ
ಇನ್ನಷ್ಟು ಓದಿ

