Sunday, 22 Nov, 9.42 am ವಿಜಯವಾಣಿ

ಮುಖಪುಟ
ಬಿಹಾರದ ಬಾರಾಚಟ್ಟಿಯಲ್ಲಿ ಎನ್​ಕೌಂಟರ್ - ಮೂವರು ನಕ್ಸಲರು ಬಲಿ

ಪಟನಾ : ಬಿಹಾರದ ಗಯಾ ಜಿಲ್ಲೆಯ ಬಾರಾಚಟ್ಟಿ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಭಾನುವಾರ ನಸುಕಿನಲ್ಲಿ ಎನ್​ಕೌಂಟರ್ ಸಂಭವಿಸಿದ್ದು, ಭದ್ರತಾಪಡೆಗಳ ಗುಂಡಿಗೆ ಮೂವರು ನಕ್ಸಲರು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಟನಾದಿಂದ 100 ಕಿ.ಮೀ. ಅಂತರದಲ್ಲಿರುವ ಗಯಾ ಜಿಲ್ಲೆ ನಕ್ಸಲ್ ಪೀಡಿತವಾಗಿದ್ದು, ನಕ್ಸಲ್ ನಿಗ್ರಹ ಕಾರ್ಯಾಚರಣೆ ಚಾಲ್ತಿಯಲ್ಲಿದೆ. ನಕ್ಸಲರ ಇರುವಿಕೆಯ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗೆ ನಕ್ಸಲರು ಅರಣ್ಯ ಪ್ರದೇಶದಲ್ಲಿ ಮುಖಾಮುಖಿಯಾಗಿದ್ದು, ಗುಂಡಿನ ದಾಳಿ ಆರಂಭಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಸ್ಥಳ ತಪಾಸಣೆ ನಡೆಸಿದಾಗ ಮೂವರು ನಕ್ಸಲರ ಶವ ಪತ್ತೆಯಾಗಿದೆ.

ಘಟನಾ ಸ್ಥಳದಿಂದ ಎಕೆ ಸೀರೀಸ್​ ನ ಅಸಾಲ್ಟ್ ರೈಫಲ್​, ಇನ್​ಸಾಸ್ ರೈಫಲ್​ ಪತ್ತೆಯಾಗಿದ್ದು, ಭದ್ರತಾಪಡೆ ಅವುಗಳನ್ನು ವಶಪಡಿಸಿಕೊಂಡಿದೆ. ಕೋಬ್ರಾ ಬೆಟಾಲಿಯನ್ ಈ ಕಾರ್ಯಾಚರಣೆ ನಡೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top