Wednesday, 28 Oct, 5.00 pm ವಿಜಯವಾಣಿ

ಮುಖಪುಟ
ಚಿನ್ನದ ಸ್ಮಗ್ಲಿಂಗ್​ ಕೇಸ್​: ಜಾಮೀನು ತಿರಸ್ಕೃತ- ಐಎಎಸ್​ ಅಧಿಕಾರಿ ಅರೆಸ್ಟ್​

ತಿರುವನಂತಪುರ : ದೇಶಾದ್ಯಂತ ಸಂಚನ ಸೃಷ್ಟಿಸಿದ್ದ ಕೇರಳದ ಚಿನ್ನ ಸಾಗಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಐಎಎಸ್ ಅಧಿಕಾರಿ ಎಂ. ಶಿವಶಂಕರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್​ ನಿರಾಕರಿಸಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮುಖ್ಯ ಕಾರ್ಯದರ್ಶಿಯಾಗಿದ್ದ (ಈಗ ಅಮಾನತು ಮಾಡಲಾಗಿದೆ) ಶಿವಶಂಕರ್ ಅವರನ್ನು ಸದ್ಯ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇವರ ವಿರುದ್ಧ ಕೇಸ್​ ದಾಖಲಾಗಿದ್ದ ಹಿನ್ನೆಲೆಯಲ್ಲಿ ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಕೋರ್ಟ್​ ಅರ್ಜಿಯನ್ನು ವಜಾ ಮಾಡಿರುವ ಕಾರಣ, ಅವರನ್ನು ಇದೀಗ ವಶಕ್ಕೆ ಪಡೆದುಕೊಳ್ಳಲಾಗಿದೆ.

ಶಿವಶಂಕರ್ ಅವರನ್ನು ಅಕ್ಟೋಬರ್ 28ರ ತನಕ ಬಂಧಿಸದಂತೆ ಈ ಹಿಂದೆ ನಿರ್ದೇಶನಾಲಯಕ್ಕೆ ಹೈಕೋರ್ಟ್​ ಹೇಳಿತ್ತು. ಇಂದು ಈ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಬಂಧಿಸದಂತೆ ಇ.ಡಿ.ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಪುನಃ ಅವರು ಕೋರ್ಟ್​ ಮೊರೆ ಹೋಗಿದ್ದರು. ಆದರೆ ನ್ಯಾಯಮೂರ್ತಿ ಅಶೋಕ್ ಮೆನನ್ ನೇತೃತ್ವದ ಪೀಠ ಅರ್ಜಿಯನ್ನು ತಿರಸ್ಕರಿಸಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಂಡಿರುವ ಶಿವಶಂಕರ್ ಬೆನ್ನು ನೋವಿನ ಚಿಕಿತ್ಸೆಗೆಂದು ದಾಖಲಾಗಿದ್ದ ನಗರದ ವಂಚಿಯೂರ್ ಎಂಬಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದಲೇ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕೇರಳ ಚಿನ್ನದ ಸ್ಮಗ್ಲಿಂಗ್​ ಕೇಸ್​ಗೆ ದಾವೂದ್​ ನಂಟು!​ ಕೋರ್ಟ್​ಗೆ ಎನ್​ಐಎ ಮಾಹಿತಿ.

ಅವರ ವೈದ್ಯಕೀಯ ತಪಾಸಣೆ ನಂತರ ಅವರಿಗೆ ಬೆನ್ನು ನೋವು ಹೊರತುಪಡಿಸಿ ಇತರ ಯಾವುದೇ ತೀವ್ರ ಆರೋಗ್ಯ ಸಮಸ್ಯೆಯಿಲ್ಲ ಎಂದು ವೈದ್ಯರು ಹೇಳಿರುವ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಅವರನ್ನು ಹೆಚ್ಚಿನ ವಿಚಾರಣೆಗಾಗಿ ಕೊಚ್ಚಿಗೆ ಕರೆದೊಯ್ಯಲಾಗುವುದು ಎಂದು ಮೂಲಗಳು ಹೇಳಿವೆ.

ನ್ಯಾಯಮೂರ್ತಿ ಅಶೋಕ್ ಮೆನನ್ ನೇತೃತ್ವದ ಪೀಠ ನಿರೀಕ್ಷಣಾ ಶಿವಶಂಕರ್​ಗೆ ಜಾಮೀನು ನೀಡಲು ನಿರಾಕರಿಸಿದ್ದು, ಜಾರಿ ನಿರ್ದೇಶನಾಲಯ ಹಾಗೂ ತೆರಿಗೆ ಇಲಾಖೆ ಆರೋಪಿಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಿದೆ. ಜಾಮೀನು ಅರ್ಜಿ ತಿರಸ್ಕಾರವಾದ ಹಿನ್ನೆಲೆಯಲ್ಲಿ ಶಿವಶಂಕರ್ ಅವರನ್ನು ಜಾರಿ ಅಧಿಕಾರಿಗಳು ವಶಕ್ಕೆ
ಪಡೆದುಕೊಂಡಿದ್ದು, ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.

ಕಳೆದ ಜೂನ್​ ತಿಂಗಳಿನಲ್ಲಿ ಕೇರಳದ ತಿರುವನಂತಪುರದಲ್ಲಿ ಸಿಕ್ಕಿದ್ದ ಚಿನ್ನದ ಪ್ರಕರಣ ಇದಾಗಿದೆ. ಇದರ ಆಳಕ್ಕೆ ಹೋದಾಗ ಅಕ್ರಮ ಚಿನ್ನ ಸಾಗಣೆಯ ಬೃಹತ್​ ಜಾಲವನ್ನೇ ತನಿಖಾಧಿಕಾರಿಗಳು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಘಟಾನುಘಟಿಗಳು ಶಾಮೀಲಾಗಿರುವುದು ತಿಳಿದುಬಂದಿದೆ. ಮಾತ್ರಲವಲ್ಲದೇ ಈ ಪ್ರಕರಣ ಮುಖ್ಯಮಂತ್ರಿಯ ಬುಡಕ್ಕೂ ಬಂದಿದೆ.

ಅಯ್ಯೋ… ವಿಡಿಯೋದಲ್ಲಿ ಇರುವುದು ನಾನಲ್ಲ: ಕೊಡಗು ಜಿಲ್ಲಾಧಿಕಾರಿ ಅನೀಸ್​

ಭ್ರಷ್ಟಾಚಾರ ಆರೋಪ: ಮುಖ್ಯಮಂತ್ರಿ ರಾವತ್​ ವಿರುದ್ಧದ ಪ್ರಕರಣ ಸಿಬಿಐಗೆ

ಮನುಷ್ಯರ ವೃಷಣ ಕತ್ತರಿಸಿ ಹಸಿಹಸಿ ತಿನ್ನುವ 'ವೈದ್ಯರು' ಇವರು! ಫ್ರಿಜ್​ನಲ್ಲಿತ್ತು ಭಯಾನಕ ಸತ್ಯ…

ಬಿಜೆಪಿ ನಾಯಕಿ ಖುಷ್ಬೂ ಅರೆಸ್ಟ್​… ನಾನು ಹೆದರಲ್ಲ, ಮಹಿಳೆಯರಿಗಾಗಿ ಕೊನೆವರೆಗೂ ಹೋರಾಟ ಎಂದ ನಟಿ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top