Dailyhunt
ಚಿತ್ರೀಕರಣಕ್ಕೆ ಮರಳಿದ ಶಿವಪ್ಪ: ಜುಲೈ 12ರಂದು ಹೊಸ ಹೆಸರು, ಪೋಸ್ಟರ್ ಬಿಡುಗಡೆ

ಚಿತ್ರೀಕರಣಕ್ಕೆ ಮರಳಿದ ಶಿವಪ್ಪ: ಜುಲೈ 12ರಂದು ಹೊಸ ಹೆಸರು, ಪೋಸ್ಟರ್ ಬಿಡುಗಡೆ

ಬೆಂಗಳೂರು: ಲಾಕ್​ಡೌನ್ ಮುಗಿದು ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಡುತ್ತಿದ್ದಂತೆಯೇ, ಸ್ಟಾರ್ ನಟರೆಲ್ಲ ಚಿತ್ರೀಕರಣಕ್ಕೆ ವಾಪಸ್ಸಾಗುತ್ತಿದ್ದಾರೆ. ಲಾಕ್​ಡೌನ್​ಗೂ ಮುನ್ನ, 'ಶಿವಪ್ಪ' ಚಿತ್ರದ ಚಿತ್ರೀಕರಣದಲ್ಲಿ ಶಿವರಾಜಕುಮಾರ್ ತೊಡಗಿಸಿಕೊಂಡಿದ್ದರು. ಆಗಲೇ ಶೇ. 80ರಷ್ಟು ಚಿತ್ರೀಕರಣ ಸಹ ಮುಗಿದಿತ್ತು. ಇದೀಗ ಬಾಕಿ ಇರುವ ಚಿತ್ರೀಕರಣ ಪುನಃ ಸೋಮವಾರದಿಂದ ಪ್ರಾರಂಭವಾಗಿದ್ದು, ಶಿವರಾಜಕುಮಾರ್ ಮತ್ತು ಧನಂಜಯ್ ಅಭಿನಯದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ನವೆಂಬರ್​ನಲ್ಲಿ ಪ್ರಾರಂಭವಾದ 'ಶಿವಪ್ಪ' ಚಿತ್ರವು ಇಷ್ಟರಲ್ಲಿ ಬಿಡುಗಡೆಯಾಗಿರಬೇಕಿತ್ತು. ಮುಹೂರ್ತದ ಸಂದರ್ಭದಲ್ಲಿ ಛಾಯಾಗ್ರಾಹಕ ಕಂ ನಿರ್ದೇಶಕ ವಿಜಯ್ ಮಿಲ್ಟನ್ ಸಹ ಈ ಮಾತು ಹೇಳಿದ್ದರು. ಮಾರ್ಚ್ ಹೊತ್ತಿಗೆ ಚಿತ್ರೀಕರಣ ಮುಗಿಸಿ, ಆದಷ್ಟು ಬೇಗ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದರು.

ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ಸ್ವಲ್ಪ ತಡವಾಗಿದ್ದು, ಇದೀಗ ಹೆಸರಘಟ್ಟ ಸುತ್ತಮುತ್ತ ಪ್ರಾರಂಭವಾಗಿದೆ. ಬಾಕಿ ಇರುವ ಚಿತ್ರೀಕರಣ ಮುಗಿಸಿ, ಕೆಲವೇ ದಿನಗಳಲ್ಲಿ ಕುಂಬಳಕಾಯಿ ಒಡೆಯಲಾಗುತ್ತದೆ.

ಹೆಸರು ಬದಲಾಗಲಿದೆ: ತಮಿಳಿನ 'ಕಡುಗು' ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿರುವ, ಈ ಚಿತ್ರದಲ್ಲಿ ಶಿವರಾಜಕುಮಾರ್ ಜತೆಗೆ ಧನಂಜಯ್, ಪೃಥ್ವಿ ಅಂಬರ್, ಯಶಾ ಶಿವಕುಮಾರ್, ಶಶಿಕುಮಾರ್ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರದ ಹೆಸರನ್ನು ಬದಲಾಯಿಸುವುದಕ್ಕೆ ಚಿತ್ರತಂಡ ತೀರ್ವನಿಸಿದ್ದು, ಶಿವರಾಜಕುಮಾರ್ ಅವರ ಹುಟ್ಟುಹಬ್ಬದಂದು (ಜುಲೈ 12) ಹೊಸ ಹೆಸರು ಮತ್ತು ಫಸ್ಟ್​ಲುಕ್ ಪೋಸ್ಟರ್ ಅನಾವರಣ ಮಾಡುತ್ತಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರವನ್ನು ಕೃಷ್ಣ ಸಾರ್ಥಕ್ ನಿರ್ವಿುಸುತ್ತಿದ್ದಾರೆ.

18 ತಿಂಗಳ ಮಗುವಿಗಾಗಿ ಏಳೇ ದಿನಗಳಲ್ಲಿ ಸಂಗ್ರಹವಾಯ್ತು 18 ಕೋಟಿ ರೂ.; ಬೇಡ ಎಂಬಷ್ಟು ಬಂತು ಹಣ!

ಬೆರಳೆರಡನ್ನು ಕತ್ತರಿಸಿಕೊಂಡ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡ!; ಮೈಮೇಲಿದೆಂಥ ಆಟ ಈ ಮೈಖೇಲ್​ನದ್ದು!?

ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

Dailyhunt
Disclaimer: This content has not been generated, created or edited by Dailyhunt. Publisher: Vijayvani