Dailyhunt
ಚುನಾವಣೆ ಬಂದರೆ ಸಾಕು ಎಚ್​​ಡಿಕೆಗೆ ಹಾರ್ಟ್​ ಸಮಸ್ಯೆ ಬರುತ್ತೆ: ವ್ಯಂಗ್ಯವಾಡಿದ ಕಾಂಗ್ರೆಸ್ ಶಾಸಕ

ಚುನಾವಣೆ ಬಂದರೆ ಸಾಕು ಎಚ್​​ಡಿಕೆಗೆ ಹಾರ್ಟ್​ ಸಮಸ್ಯೆ ಬರುತ್ತೆ: ವ್ಯಂಗ್ಯವಾಡಿದ ಕಾಂಗ್ರೆಸ್ ಶಾಸಕ

ಮಂಡ್ಯ: ಚುನಾವಣೆ ಬಂದರೆ ಸಾಕು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಹೃದಯ ಸಂಬಂಧಿ ಖಾಯಿಲೆ ಇದೆ ಅಂತ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ರಮೇಶ್​ ಬಂಡಿಸಿದ್ದೇಗೌಡ ವ್ಯಂಗ್ಯವಾಡಿದ್ದಾರೆ.

ಲೋಕಸಭೆ ಚುನಾವಣೆ ನಿಮಿತ್ತ ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್​ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ರಮೇಶ್​, ಮೂರೇ ದಿನದಲ್ಲಿ ಹೃದಯ ಶಸ್ತ್ರಚಿಕಿತ್ಸೆ ಆಗುತ್ತದೆ. ನಾಲ್ಕನೇ ದಿನಕ್ಕೆ ರಾಜ್ಯ ಸುತ್ತುತ್ತಾರೆ, ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಸಚಿವ ಚಲುವರಾಯಸ್ವಾಮಿ ಅವರಿಗೆ ಇರುವ ಕಾಯಿಲೆ ಹೆಚ್​ಡಿ ಕುಮಾರಸ್ವಾಮಿಯವರಿಗೂ ಇದೆ. ಚಲುವರಾಯಸ್ವಾಮಿ ಆಸ್ಪತ್ರೆಗೆ ದಾಖಲಾದರೆ ಒಂದು ತಿಂಗಳು ಆಚೆ ಬರಲ್ಲ. ಆದರೆ, ಹೆಚ್​ಡಿ ಕುಮಾರಸ್ವಾಮಿ ಹೇಗೆ ಶಸ್ತ್ರಚಿಕಿತ್ಸೆಯಾದ ಎರಡೇ ದಿನಕ್ಕೆ ರಾಜ್ಯ ಸುತ್ತುತ್ತಾರೆ. ಈ ಹೊಸ ಟೆಕ್ನಿಕ್​ ಹೇಗೆ ಎಂದು ನನಗೆ ತಿಳಿಯುತ್ತಿಲ್ಲ ಎಂದು ಟೀಕಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vijayvani