ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ದಾಂಡೇಲಿಯಲ್ಲಿ 2016 ರಲ್ಲಿ ಜಿ ಪ್ಲಸ್ 2 ಮನೆಗಳ ಯೋಜನೆ ರೂಪಿಸಿ, 1106 ಮನೆಗಳ ನಿರ್ಮಾಣ ಕಾಮಗಾರಿಯನ್ನು 2018 ರಲ್ಲಿ ಆರ್‌ಎಸ್‌ಪಿ ಇನ್‌ಫ್ರಾ ಕನ್ಸ್‌ಸ್ಟ್ರಕ್ಷನ್. ಕಂಪನಿ ಕಾಮಗಾರಿ ಆರಂಭಿಸಿತ್ತು. ಒಂದು ವರ್ಷದಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಎರಡು ವರ್ಷಗಳಲ್ಲಿ 108 ಮನೆಗಳನ್ನು ಮಾತ್ರ ಮುಗಿಸಿ ಹಸ್ತಾಂತರಿಸಲಾಗಿದೆ. ಆದರೆ, 108 ಮನೆಗಳ ಗ್ರಾಹಕರು ಬ್ಯಾಂಕ್ ಸಾಲಕ್ಕಾಗಿ ಓಡಾಡುತ್ತಿದ್ದಾರೆ. 108 ಮನೆ ನೀರಿರುವಲ್ಲಿ ಸಮರ್ಪಕ ರಸ್ತೆ, ಬೀದಿ ದೀಪದ ಸೌಕರ್ಯವನ್ನು ನಗರಸಭೆ ನೀಡಿಲ್ಲ. ಅದಕ್ಕಾಗಿ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಳೆದ 8 ತಿಂಗಳ ಹಿಂದೆ 84 ಮನೆಗಳ ಕಾಮಗಾರಿ ಮುಕ್ತಾಯವಾಗಿದೆ. ಆದರೆ, ಅದಕ್ಕೆ ಇದುವರೆಗೂ ವಿದ್ಯುತ್, ನೀರಿನ ಸಂಪರ್ಕ ಒದಗಿಸಿಲ್ಲ. ಇನ್ನು 912 ಮನೆಗಳ ಕಾಮಗಾರಿಯನ್ನು ಮಾಡದೇ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ. ಈಗಾಗಲೇ ಹಲವು ಫಲಾನುಭವಿಗಳಿಂದ 50 ರಿಂದ 70 ಸಾವಿರ ರೂ.ಗಳನ್ನು ಸಂಗ್ರಹಿಸಲಾಗಿದೆ. ಒಟ್ಟಾರೆ 9 ಕೋಟಿ ರೂ.ಗಳನ್ನು ಫಲಾನುಭವಿಗಳಿಂದ ಸಂಗ್ರಹಿಸಿ ಅವರಿಗೆ ಮೋಸ ಮಾಡಲಾಗುತ್ತಿದೆ. ಸಂಪೂರ್ಣ ಕಾಮಗಾರಿ ಪೂರ್ಣವಾಗದೇ ಇದ್ದರೂ ಈಗಾಗಲೇ ಸರ್ಕಾರದಿಂದ ಗೃಹ ಮಂಡಳಿಗೆ 34 ಕೋಟಿ ರೂ.ಗಳ ಬಿಲ್ ಪಾವತಿ ಮಾಡಲಾಗಿದೆ. ಈ ಎಲ್ಲ ಅಕ್ರಮಗಳನ್ನು ವಿರೋಽಸಿ ಪ್ರತಿಭಟನೆ ನಡೆಸಲಾಗುವುದು ಎಂದರು. ದಾಂಡೇಲಿ ಸಮಗ್ರ ಹೋರಾಟ ಸಮಿತಿಯ ಮಧುಕರ ಸಾಂಗೇಕರ್, ನಾಮದೇವ ಶಿಕಾರಿಪುರ, ಅಶೋಕ ಗೋಪಾಲ ಇತರರು ಸುದ್ದಿಗೋಷ್ಠಿಯಲ್ಲಿದ್ದರು. ನಿವೇಶನ ನೀಡದ ಕೆಎಚ್‌ಬಿ
ದಾಂಡೇಲಿ ಸಮಗ್ರ ಹೋರಾಟ ಸಮಿತಿಯ ಉಪಾಧ್ಯಕ್ಷ ಅಶೋಕ ಪಾಟೀಲ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಎಚ್‌ಬಿ 2000 ದಿಂದ 2015 ರವರೆಗೂ ವಿವಿಧೆಡೆ ನಿವೇಶನಗಳ ಬೇಡಿಕೆ ಸಮೀಕ್ಷೆ ಮಾಡಿತ್ತು. ಜನರಿಂದ ಅರ್ಜಿ ಸ್ವೀಕರಿಸಲಾಗಿತ್ತು. ಕಾರವಾರ ಹಣಕೋಣದಲ್ಲಿ ಕಾಲನಿ ನಿರ್ಮಾಣಕ್ಕಾಗಿ 3126, ಸದಾಶಿವಗಡದಲ್ಲಿ 2075 ಅರ್ಜಿಗಳು ಬಂದಿದ್ದವು. ಅಂಕೋಲಾ 794, ಜೊಯಿಡಾ ಹಳಿಯಾಳ 1527, ಹೊನ್ನಾವರ 2438, ಹಳಿಯಾಳ 1769, ಶಿರಸಿ 4560, ಸಿದ್ದಾಪುರ 947, ದಾಂಡೇಲಿ 3353, ಭಟ್ಕಳ 446, ಯಲ್ಲಾಪುರ 182, ಮುರ್ಡೇಶ್ವರ-1328 ಸೇರಿ ಒಟ್ಟು 22545 ನಿವೇಶನಗಳಿಗಾಗಿ ಅರ್ಜಿ ಸ್ವೀಕರಿಸಲಾಗಿತ್ತು. ಆದರೆ ಯಾವುದೇ ಹೊಸ ಕಾಲನಿಗಳನ್ನು ಇದುವರೆಗೂ ನಿರ್ಮಿಸಿಲ್ಲ. ಮೇಲಾಗಿ ಅರ್ಜಿ ಸಲ್ಲಿಸುವ ವೇಳೆ 2.22 ಕೋಟಿ ರೂ. ಹಾಣ ಸಂಗ್ರಹಿಸಿದ್ದು, ಅದನ್ನೂ ಜನರಿಗೆ ವಾಪಸ್ ನೀಡಿಲ್ಲ ಎಂದರು. ........
ಇನ್ನಷ್ಟು ಓದಿ