ಬೆಂಗಳೂರು :ತ್ಯಾಗರಾಜ ನಗರದ ಶ್ರೀದತ್ತಾತ್ರೇಯ ಮಂದಿರದಲ್ಲಿ ಇತ್ತೀಚೆಗೆ ಗುರುಗಳ ಮಹಿಮೆ ಸಾರುವ ತ್ರೈಮೂರ್ತಿ ಅವತಾರ ಸಂಗೀತ ರೂಪಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸ್ವರ ಭಾರತಿ ಅಕಾಡೆಮಿ ಹಾಗೂ ದತ್ತಾತ್ರೇಯ ದೇವಸ್ಥಾನ ಟ್ರಸ್ಟ್ ಜಂಟಿ ಸಹಯೋಗ, ಕರ್ನಾಟಕ ಕಲಾಶ್ರೀ ಜಯಲಕ್ಷ್ಮೀ ಇನಾಮದಾರ್ ನಿರ್ದೇಶನ ಮತ್ತು ಕಥಾ ನಿರೂಪಣೆಯಲ್ಲಿ ಶ್ರೀಗುರು ಚರಿತ್ರೆ ಆಧರಿತ ಸಂಗೀತ ರೂಪಕ ನಡೆಯಿತು .
ಸಂಗೀತ ರೂಪಕದಲ್ಲಿ ಜಯಲಕ್ಷ್ಮೀ ಇನಾಮದಾರ್ ಶಿಷ್ಯರಾದ ಅನ್ನಪೂರ್ಣಾ ನಾಗರಾಜ್, ಗೀತಾ ನರೇಂದ್ರ, ವಾರುಣಿ ನಾಗರಾಜ್, ಮಹಿಮಾ ಇನಾಮದಾರ್ ಗಾಯನ ನಡೆಸಿಕೊಟ್ಟರು. ಡಾ. ಗೋಪಾಲ್ ರಾಯಚೂರ್ ಹಾರ್ಮೋನಿಯಂ, ಮಂಜುನಾಥ್ ಸಾಗರ್ ತಬಲಾ ಸಾಥ್ ನೀಡಿದರು.
ಇನ್ನಷ್ಟು ಓದಿ

