Thursday, 29 Oct, 7.20 pm ವಿಜಯವಾಣಿ

ಸಮಸ್ತ-ಕರ್ನಾಟಕ
ದೆಹಲಿ ಮಹಾರಾಣಿಗೆ ಖುಷಿ ತರುವ ಕೆಲಸ ಮಾಡಿದರೆ ಬಡ್ತಿ ನೀಡುವ ಪಕ್ಷದಂಥಲ್ಲ ನಮ್ಮ ಬಿಜೆಪಿ: ಸಿ.ಟಿ.ರವಿ

ಚಿಕ್ಕಮಗಳೂರು: ಕಪಾಲಿ ಬೆಟ್ಟವನ್ನು ಏನೇನೋ ಮಾಡಲು ಹೋಗಿ ನಿಮಗೆ ಕಾಂಗ್ರೆಸ್​ನಲ್ಲಿ ಬಡ್ತಿ ಸಿಕ್ಕಿದೆ..ಆದರೆ ಬಿಜೆಪಿಯಲ್ಲಿ ಹಾಗೆಲ್ಲ ಪ್ರಮೋಶನ್​ ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್​ ನೀಡಿದರು.

ನಗರದಲ್ಲಿ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದಿಂದ ಗುರುವಾರ ಆಯೋಜಿಸಲಾಗಿದ್ದ ಪಕ್ಷದ ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು. ಸಿ.ಟಿ.ರವಿ ಅವರನ್ನು ಟಾರ್ಗೆಟ್ ಮಾಡಿದರೆ ಪಕ್ಷದಲ್ಲಿ ಅವರಿಗೆ ಪ್ರಮೋಷನ್ ಸಿಗುತ್ತದೆ ಎಂದು ಶಿವಕುಮಾರ್ ಹೇಳಿದ್ದಾರೆ. ಹಾಗೆ ಹೊಗಳಿದರೆ, ತೆಗಳಿದರೆ, ದೆಹಲಿಯ ಮಹಾರಾಣಿಗೆ ಖುಷಿ ತರುವ ಕೆಲಸ ಮಾಡಿದರೆ ಬಡ್ತಿ ನೀಡುವ ಪಕ್ಷ ನಮ್ಮದಲ್ಲ. ಪೋಸ್ಟರ್ ಅಂಟಿಸಿ, ಮೈಕ್ ಹಿಡಿದು ಜನ ಸಂಘಟಿಸಿ ಪಕ್ಷ ಕಟ್ಟಿದರೆ ಮಾತ್ರ ಇಲ್ಲಿ ಬಡ್ತಿ ಎಂದು ತಿರುಗೇಟು ನೀಡಿದರು.

ಬಂದ ದಾರಿಗೆ ಸುಂಕವಿಲ್ಲದಿದ್ದರೂ ಬಡ್ತಿ ಕೊಡಬಹುದು ಎನ್ನುವುದು ಕಾಂಗ್ರೆಸ್‍ನಲ್ಲಿ ಮಾತ್ರ ಸಾಧ್ಯ. ಹಾಗೆಯೇ ಎರಡು ಬಾರಿ ಶಾಸಕರಾಗಿದ್ದ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿಯನ್ನು ಕ್ರಿಮಿನಲ್ ಎಂದು ಕರೆಯುವ ಇವರು ಎರಡು ಬಾರಿ ಅವರಿಗೆ ಟಿಕೆಟ್ ನೀಡಿದವರು ಇನ್ನೆಷ್ಟು ಕ್ರಿಮಿನಲ್ ಇರಬಹುದು ಎಂದು ಪ್ರಶ್ನಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top