Dailyhunt
ಡಿಟೆಕ್ಟಿವ್ ಇನ್‌ಸ್ಪೆಕ್ಟರ್ ರಾಜೇಶ್‌ಗೆ ಮುಖ್ಯಮಂತ್ರಿ ಪದಕ

ಡಿಟೆಕ್ಟಿವ್ ಇನ್‌ಸ್ಪೆಕ್ಟರ್ ರಾಜೇಶ್‌ಗೆ ಮುಖ್ಯಮಂತ್ರಿ ಪದಕ

ನೂರು : ಬೆಂಗಳೂರು ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ ಡಿಟೆಕ್ಟಿವ್ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಪಟ್ಟಣದ ರಾಜಶೇಖರ್ ಪುತ್ರ ರಾಜೇಶ್ ಅವರು 2025-26ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ಗುರುವಾರ ಸಿಎಂ ಸಿದ್ದರಾಮಯ್ಯ ಅವರಿಂದ ಪಡೆದರು.
ಸೈಬರ್ ಕ್ರೈಂ ತನಿಖಾ ವಿಭಾಗದಲ್ಲಿ 8 ವರ್ಷದ ಅನುಭವವನ್ನು ಹೊಂದಿರುವ ಇವರು ಕ್ರಿಪ್ರೋಕರೆನ್ಸಿ ಸೀಜರ್ ಮತ್ತು ಡಿಜಿಟಲ್ ಆಸ್ತಿ ವಶಪಡಿಸಿಕೊಳ್ಳುವ ವಿಷಯದಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ. ಎಸ್‌ಐಟಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇವರ ಸೇವೆಯನ್ನು ಮನಗಂಡು ಮುಖ್ಯಮಂತ್ರಿ ಪದಕ ಲಭಿಸಿದ್ದು, ಪಟ್ಟಣದ ಜನತೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani