Dailyhunt Logo
  • Light mode
    Follow system
    Dark mode
    • Play Story
    • App Story
ದುಬಾರೆ ಸಾಕಾನೆ ಶಿಬಿರದಲ್ಲಿ ಮೃತಪಟ್ಟ ಗಂಡಾನೆ

ದುಬಾರೆ ಸಾಕಾನೆ ಶಿಬಿರದಲ್ಲಿ ಮೃತಪಟ್ಟ ಗಂಡಾನೆ

ಕುಶಾಲನಗರ

ಕಾದಾಟದಿಂದ ತೀವ್ರವಾಗಿ ಗಾಯಗೊಂಡು, ಕಳೆದ ಕೆಲವು ತಿಂಗಳಿನಿAದ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊAದು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಗ್ಗೆ ದುಬಾರೆ ಆನೆ ಶಿಬಿರದಲ್ಲಿ ಮೃತಪಟ್ಟಿದೆ.

ತೀವ್ರ ಗಾಯಗಳೊಂದಿಗೆ ಏಪ್ರಿಲ್‌ನಲ್ಲಿ ದುಬಾರೆ ಆನೆ ಶಿಬಿರಕ್ಕೆ ಬಂದಿದ್ದ ಈ ಗಂಡಾನೆಯ ದೇಹದಾದ್ಯಂತ ಕಾದಾಟದ ಗಾಯಗಳನ್ನು ಹೊಂದಿತ್ತು ಹಾಗೂ ದಂತವೂ ಮುರಿದಿತ್ತು.

ಅರಣ್ಯ ಇಲಾಖೆಯ ಪಶುವೈದ್ಯರ ತಂಡ ಕಳೆದ ಐದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಆನೆಗೆ ನಿರಂತರವಾಗಿ ಅತ್ಯಂತ ಎಚ್ಚರಿಕೆಯಿಂದ ಚಿಕಿತ್ಸೆ ನೀಡುತ್ತಿತ್ತು.

ಆನೆ ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ತಡೆಯಲು ಅದನ್ನು ಪ್ರತ್ಯೇಕವಾಗಿ ಇರಿಸಿ ನಿರಂತರ ಆರೈಕೆ ಮಾಡಲಾಗುತ್ತಿತ್ತು. ಪ್ರತಿದಿನ ನಿಯಮಿತವಾಗಿ ಆಂಟಿಬಯೋಟಿಕ್ಸ್, ನೋವು ನಿವಾರಕಗಳು, ಗಾಯಕ್ಕೆ ಅಗತ್ಯ ಔಷಧೋಪಚಾರ ಹಾಗೂ ದೇಹದ ಸತ್ವ ಹೆಚ್ಚಿಸಲು ಪೋಷಕಾಂಶಗಳನ್ನು ನೀಡಲಾಗುತ್ತಿತ್ತು.

ಇನ್ನು ಹೆಚ್ಚಿನ ತಜ್ಞ ಚಿಕಿತ್ಸೆಯ ಅಗತ್ಯ ಕಂಡುಬAದ ಹಿನ್ನೆಲೆಯಲ್ಲಿ ವೈಲ್ಡ್ಲೈಫ್ ಎಸ್.ಒ.ಎಸ್ ಸಂಸ್ಥೆಯ ನುರಿತ ವನ್ಯಜೀವಿ ಪಶುವೈದ್ಯರ ತಂಡವನ್ನು ಶಿಬಿರಕ್ಕೆ ಕರೆಸಿ ಜಂಟಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಈ ವೇಳೆ ನಡೆಸಿದ ಡಿಜಿಟಲ್ ಎಕ್ಸ್-ರೇ ಪರೀಕ್ಷೆಯಲ್ಲಿ ಆನೆಯ ಎಡ ಮೊಣಕೈ ಮೂಳೆಯಲ್ಲಿ ಬಿರುಕು ಇರುವುದು ಪತ್ತೆಯಾಗಿತ್ತು.

ತಜ್ಞ ವೈದ್ಯರ ಸಲಹೆಯಂತೆ ಸುಧಾರಿತ ಚಿಕಿತ್ಸೆಯನ್ನು ಮುಂದುವರಿಸಲಾಗಿತ್ತು. ಕಾಲಿನ ಮೇಲಿನ ಅತಿಯಾದ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ಆನೆಯನ್ನು ಕ್ರಾಲ್‌ನಿಂದ ಹೊರಗೆ ಬಿಟ್ಟು ಸ್ವತಂತ್ರವಾಗಿ ಓಡಾಡಲು ಅವಕಾಶ ಕಲ್ಪಿಸಲಾಗಿತ್ತು. ಗಾಯಗೊಂಡ ಕಾಲಿಗೆ ಸ್ಥಿರತೆ ನೀಡಲು ಸೆಪ್ಟೆಂಬರ್ 27 ರಂದು ನುರಿತ ತಜ್ಞರ ನೇತೃತ್ವದಲ್ಲಿ ಫೈಬರ್‌ಗ್ಲಾಸ್ ಬ್ಯಾಂಡೇಜ್ ಹಾಕಲಾಗಿತ್ತು.

ಮಂಗಳವಾರ ಬೆಳಿಗ್ಗೆ 09.50 ರ ಸುಮಾರಿಗೆ ಆನೆ ಏಕಾಏಕಿ ಕುಸಿದು ಬಿದ್ದಿದೆ. ಕೂಡಲೇ ಕಾರ್ಯಪ್ರವೃತ್ತರಾದ ವೈದ್ಯರ ತಂಡ ಗ್ಲೂಕೋಸ್ ಹಾಗೂ ತುರ್ತು ದ್ರವ ಚಿಕಿತ್ಸೆ ನೀಡಿ ತೀವ್ರ ನಿಗಾವಹಿಸಿದರೂ, ಆನೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ.

ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೀರ್ಘಕಾಲದ ಮೂಳೆ ಮುರಿತದ ತೊಂದರೆ, ನಿರಂತರ ಅನಾರೋಗ್ಯ ಹಾಗೂ ದೈಹಿಕ ದೌರ್ಬಲ್ಯದಿಂದ ಆನೆ ಮೃತಪಟ್ಟಿರಬಹುದು ಎಂದು ಪ್ರಾಥಮಿಕ ಪಶುವೈದ್ಯಕೀಯ ವರದಿಗಳಿಂದ ತಿಳಿದುಬಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Vijayvani