Thursday, 22 Apr, 3.39 pm ವಿಜಯವಾಣಿ

ಮುಖಪುಟ
ದುಬಾರಿ ಕಾರಿನ ಒಡೆಯನಾದ ಮಾಡರ್ನ್​​ ರೈತ ಶಶಿ! ಕಾರಿನ ಬೆಲೆ ಕೇಳಿದರೆ ಹುಬ್ಬೇರಿಸೋದು ಗ್ಯಾರಂಟಿ

ಬೆಂಗಳೂರು: ಬಿಗ್​ಬಾಸ್​ ಸೀಸನ್​ 6ರ ವಿನ್ನರ್​ ಶಶಿ ನಿಮಗೆಲ್ಲರಿಗೂ ನೆನಪಿರಬೇಕು. ಉನ್ನತ ವಿದ್ಯಾಭ್ಯಾಸ ಪಡೆದು, ಕೃಷಿಯಲ್ಲಿ ತೊಡಗಿಸಿಕೊಂಡಿರುವ ಶಶಿ ಬಿಗ್​ಬಾಸ್​ ಮನೆಯಿಂದ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಇದೀಗ ಅದೇ ಮಾಡರ್ನ್​ ರೈತ ಶಶಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಶಶಿ ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಮಿನಿ ಕೂಪರ್​ ಕಾರನ್ನು ಖರೀದಿಸಿರುವ ಅವರು ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನನ್ನ ದೊಡ್ಡ ಕನಸೊಂದು ಇದೀಗ ಪಾರ್ಕಿಂಗ್​ಗೆ ಬಂದಿದೆ. ನನ್ನ ಮೊದಲನೇ ಕಾರು ಓಮ್ನಿ. ಆದರೆ ಈಗ ಕೇವಲ ಮಿನಿ ಎಂದು ಬರೆದುಕೊಂಡಿದ್ದಾರೆ. ಕೆಂಪು ಕಲರ್​ ಮಿನಿ ಕೂಪರ್​ ಕಾರಿನ ಮುಂದೆ ನಿಂತಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ.

ಅಂದ ಹಾಗೆ ಶಶಿ ಖರೀದಿಸಿರುವ ಈ ಕಾರಿನ ಬೆಲೆ 10 ಅಥವಾ 20 ಲಕ್ಷ ರೂಪಾಯಿಯೇನಲ್ಲ. ಈ ಕಾರಿನ ಆನ್​ರೋಡ್​ ಬೆಲೆ 43 ಲಕ್ಷ ರೂಪಾಯಿಯಷ್ಟಿದೆ. ಸಾಮಾನ್ಯ ಕೃಷಿಕ ಎನಿಸಿಕೊಂಡಿರುವ ಶಶಿಗೆ ಇಷ್ಟೊಂದು ದುಬಾರಿ ಕಾರನ್ನು ಖರೀದಿಸುವಷ್ಟು ಹಣ ಹೇಗೆ ಬಂತು ಎನ್ನುವುದರ ಬಗ್ಗೆಯೂ ಅನೇಕರು ಚರ್ಚೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ದಿನಗೂಲಿ ಕೆಲಸಕ್ಕೆ ಹೊರಟಿದ್ದ ಮಹಿಳೆಯನ್ನು ಗ್ಯಾಂಗ್​ ರೇಪ್​ ಮಾಡಿ ಕೊಂದ ಪಾಪಿಗಳು!

ಕರೊನಾ ವಾರ್ಡ್​ನಲ್ಲಿ ಜೋರಾಗಿ ಮಾತನಾಡಬೇಡ ಎಂದಿದ್ದಕ್ಕೆ ವೈದ್ಯರ ಮೇಲೆ ಚಾಕುವಿನಿಂದ ಹಲ್ಲೆ!

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top