ಸಾಮಾನ್ಯವಾಗಿ ನಿತ್ಯ ನಾವು ಸಾಂಬಾರು, ಪಲಾವ್, ಮಸಾಲೆ ಸಾರು, ಚಿಕನ್ ಸೇರಿದಂತೆ ನಾನಾ ಅಡುಗೆಗೆ ಪುದೀನಾ ಬಳಕೆ ಮಾಡುತ್ತೇವೆ. ಒಮ್ಮೊಮ್ಮೆ ಒಂದು ಕಟ್ಟು 30 ರೂ. ಇರುತ್ತದೆ. ಅದನ್ನು ಕೊಂಡು ಕೊಳ್ಳಲು ಆಗದೆ ಬಿಡಲು ಆಗದೆ ಹೆಣಗಾಡುತ್ತೇವೆ. ಮತ್ತೊಂದು ಭಯ ಎಂದರೆ ಅದನ್ನು ಬೆಳೆಯುವ ರೀತಿ.
ಇನ್ಮುಂದೆ ಇಷ್ಟೆಲ್ಲ ಚಿಂತೆ ಮಾಡೋದು ಬಿಡಿ. ಕಡಿಮೆ ಸಮಯದಲ್ಲಿ ಹೂಕೋಸ್ನಂತೆ ಹರಡಿಕೊಂಡು ಪುದೀನಾ ಬೆಳೆಯುವಂತೆ ಮಾಡಲು ಈ ಸಿಂಪಲ್ಸ್ ಟ್ರಿಕ್ಸ್ ಬಳಸಿ.

ಕಾಂಡವಿರುವ ಸಸಿ ಬೇಕು
ಪುದೀನಾ ಬಳಕೆ ಮಾಡಿ ಬಿಸಾಡಬೇಡಿ. ನೀವು ಅಂಗಡಿಯಿಂದ ತಂದ ಪುದೀನಾದಲ್ಲಿ ಬೇರು ಇರುವ ಪುದೀನಾವನ್ನು ಎತ್ತಿಟ್ಟುಕೊಳ್ಳಿ. ನೆನಪಿಡಿ ಪುದೀನಾ ಬೀಜದಿಂದ ಬೆಳೆಯಲು ಸಾಧ್ಯವಿಲ್ಲ. ಈಗ ನೀವು ತೆಗೆದಿಟ್ಟ ಕಾಂಡದಲ್ಲಿ ಎಲ್ಲ ಎಲೆಯನ್ನು ಕಿತ್ತು ಮೂರನ್ನು ಮಾತ್ರ ಉಳಿಸಿ, ಬೇರು ಇರುವಂತೆ ನೋಡಿಕೊಳ್ಳಿ.

ಪಾಟ್ನಲ್ಲಿ ಕಾಂಡ ಹೀಗಿಡಿ
ಸಾಮಾನ್ಯಾವಾಗಿ ಗಿಡವನ್ನು ಲಂಬವಾಗಿ ನೆಡುವುದು ಅಭ್ಯಾಸ. ಆದರೆ, ಪುದೀನಾ ಕಾಂಡವನ್ನು ಲಂಬವಾಗಿ ಅಲ್ಲದೆ ಕ್ರಾಸ್ ಆಗಿ ಅಥವಾ ಮಲಗಿದ ರೀತಿಯಲ್ಲಿ ನೆಡಿ. ಇದರಿಂದಾಗಿ ಬೇರುಗಳು ಒಂದೇ ಸ್ಥಳದಲ್ಲಿ ರೂಪುಗೊಳ್ಳುತ್ತವೆ ಮತ್ತು ಸಸ್ಯವು ದಪ್ಪ ಮತ್ತು ಎತ್ತರವಾಗಿ ಬೆಳೆಯುತ್ತದೆ.

ಮಣ್ಣಿನಿಂದ ಮುಚ್ಚಿ
ಪುದೀನಾವನ್ನು ನೆಟ್ಟ ನಂತರ ಅದರ ಮೇಲೆ ಮಣ್ಣನ್ನು ಮುಚ್ಚಿ ಆಗ ಪುದೀನಾ ದಷ್ಟಪುಷ್ಟವಾಗಿ ಹೂ ಕೋಸಿನಂತೆ ಹಬ್ಬಿ ಬೆಳೆಯಲು ಸಹಾಯ ಮಾಡುತ್ತದೆ.

ಇದು ನೆನಪಿರಲಿ
ಪುದೀನಾ ಇಟ್ಟ ಪಾಟ್ ಅಥವಾ ನೆಟ್ಟ ಜಾಗ ನೀರಿನಿಂದ ಕೂಡಿರಕೂಡದು ಆದರೆ, ತೇವಾಂಶದಿಂದ ಇರಬೇಕು. 3 ರಿಂದ 4 ಗಂಟೆಗಳ ನಿಮ್ಮ ಪಾಟ್ ಅನ್ನು ಸೂರ್ಯನ ಬೆಳಕುವಂತೆ ಇಡಿ. ಪುದೀನಾಕ್ಕೆ ಸೂರ್ಯನ ಬೆಳಕು ಅವಶ್ಯಕ. ಪುದೀನಾ ಹಬ್ಬಿಕೊಳ್ಳುತ್ತಾ ಹಾಗಾಗೆ ಬಳಸಿ, ಇಲ್ಲವೇ ಚಿವುಟಿ ಹಾಕಿ. ಇದರಿಂದ ಪುದೀನಾ ಬೇರೆ ಬೇರೆಯಾಗಿ ಚಿಗುರಿಕೊಂಡು ಹಬ್ಬಲು ಶುರುವಾಗುತ್ತದೆ.

ಆರೋಗ್ಯ ಪ್ರಯೋಜನ
ಪುದೀನಾ ಎಲೆಯು ಹೊಟ್ಟೆ ಉಬ್ಬರ, ಗ್ಯಾಸ್, ಅಜೀರ್ಣ ಸಮಸ್ಯೆಗೆ ಪುದೀನಾ ರಾಮಬಾಣ. ಜೀರ್ಣರಸವನ್ನು ಉತ್ತೇಜಿಸುತ್ತದೆ.ನೈಸರ್ಗಿಕವಾಗಿ ಬಾಯಿಯ ದುರ್ವಾಸನೆ ನಿವಾರಿಸುತ್ತದೆ, ಬ್ಯಾಕ್ಟೀರಿಯಾ ನಾಶ ಮಾಡುತ್ತದೆ.ಮೆಂಥಾಲ್ ಅಂಶ ಇರುವುದರಿಂದ ಮೂಗು ಕಟ್ಟಿದಾಗ, ಗಂಟಲು ನೋವಿಗೆ ಉತ್ತಮ ಪರಿಹಾರ ಪುದೀನಾ ಪರಿಮಳ ಮನಸ್ಸಿಗೆ ರಿಲ್ಯಾಕ್ಸ್ ನೀಡುತ್ತದೆ, ತಲೆನೋವನ್ನು ಕಡಿಮೆ ಮಾಡುತ್ತದೆ. ಮೊಡವೆ, ಕಲೆಗಳಿಗೆ ಪುದೀನಾ ರಸ ಹಚ್ಚಿದರೆ ಉರಿಯೂತ ಕಡಿಮೆಯಾಗುತ್ತದೆ.ಪುದೀನಾ ಎಲೆಗಳನ್ನು ಅಗಿದರೆ ವಾಕರಿಕೆ, ತಲೆತಿರುಗುವಿಕೆ ಕಡಿಮೆಯಾಗುತ್ತದೆ, (ಏಜೆನ್ಸೀಸ್).

