Tuesday, 20 Oct, 2.47 pm ವಿಜಯವಾಣಿ

ಮುಖಪುಟ
ಎಮ್ಮೆ ಮೇಲೆ ಕುಳಿತು ಮತಯಾಚಿಸಿದ ಎಂಎಲ್​ಎ ಆಕಾಂಕ್ಷಿ ಅರೆಸ್ಟ್​

ಪಟ್ನಾ: ಬಿಹಾರದ ವಿಧಾನಸಭೆ ಚುನಾವಣೆಯ ರಂಗು ಕಾವೇರಿದೆ. ಇದೀಗ ಮತದಾರನನ್ನು ತಮ್ಮೆಡೆಗೆ ಸೆಳೆಯಲು ಏನೆನು ಸರ್ಕಸ್​ ಮಾಡಬೇಕೋ ಎಲ್ಲವನ್ನೂ ಮಾಡಲಾಗುತ್ತಿದೆ.

ಅದರಲ್ಲಿಯೂ ಇಂಟರ್​ನೆಟ್​ ಬಳಕೆ ಮಾಡಿಕೊಂಡು ಇ-ಪ್ರಚಾರಕ್ಕೆ ಹಲವಾರು ಮಂದಿ ಮುಂದಾಗಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಬೃಹತ್​ ಸಮಾವೇಶ ನಡೆಸಬಾರದು ಎನ್ನುವ ಕಾರಣಕ್ಕೆ ವರ್ಚುವಲ್​ ಸಮಾವೇಶವೂ ನಡೆಯುತ್ತಿದೆ.

ಆದರೆ ಇಲ್ಲೊಬ್ಬ ಅಭ್ಯರ್ಥಿ ಮಾತ್ರ ಸ್ವಲ್ಪ ಡಿಫರೆಂಟ್​ ಆಗಿ ಮತಯಾಚಿಸಿ ಇದೀಗ ಸುದ್ದಿ ಮಾಡಿದ್ದಾರೆ. ಗಯಾ ಕ್ಷೇತ್ರದ ರಾಷ್ಟ್ರೀಯ ಉಲೆಮಾ ಕೌನ್ಸಿಲ್ ಪಕ್ಷದ ಅಭ್ಯರ್ಥಿ ಮೊಹಮ್ಮದ್ ಪರ್ವೇಜ್ ಮನ್ಸೂರಿ ಎಂಬುವರು ಎಮ್ಮೆ ಸವಾರಿ ಮಾಡಿ, ಬೀದಿ ಬೀದಿಗಳಿಗೆ ತೆರಳಿ ಮತಯಾಚಿಸಿದ್ದಾರೆ.

ಮತಯಾಚನೆಯೇನೋ ಡಿಫರೆಂಟ್​ ಆಗಿಯೇ ಇತ್ತು. ಆದರೆ ಈ ರೀತಿ ಮಾಡುವುದು ಪ್ರಾಣಿ ಹಿಂಸೆ ಎನ್ನುವ ಕಾರಣಕ್ಕೆ, ಮೊಹಮ್ಮದ್ ಪರ್ವೇಜ್ ವಿರುದ್ಧ ಪ್ರಾಣಿಗಳ ವಿರುದ್ಧ ಹಿಂಸೆ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮಾತ್ರವಲ್ಲದೇ ಗುಂಪಾಗಿ ಜನರು ಬಂದು ಮತಯಾಚಿಸಿದ್ದ ಹಿನ್ನೆಲೆಯಲ್ಲಿ ಕೊವಿಡ್ 19 ಕಾಯ್ದೆ ಉಲ್ಲಂಘನೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೂ ಪ್ರಕರಣ ದಾಖಲಾಗಿದೆ.

ಚುನಾವಣಾ ನೀತಿ ಸಂಹಿತೆ ಪ್ರಕಾರ, ಪ್ರಾಣಿಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದು ನಿಷಿದ್ಧ, ಪಕ್ಷದ ಚಿಹ್ನೆಗೆ ಹೋಲಿಕೆ ಬರುವ ಪ್ರಾಣಿಗಳನ್ನು ಬಳಸುವಂತಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ಹಾಕಲಾಗಿದೆ. ಸದ್ಯ ಜಾಮೀನು ಪಡೆದು ಬಂದಿರುವುದಾಗಿ ವರದಿಯಾಗಿದೆ.

30 ವರ್ಷಗಳಿಂದ ಶಾಸಕರಾಗಿರುವ ಪ್ರೇಮ್ ಕುಮಾರ್, 15 ವರ್ಷಗಳಿಂದ ಮೇಯರ್ ಆಗಿರುವ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಶ್ರೀವಾಸ್ತವ ಅವರು ಗಯಾ ಕ್ಷೇತ್ರ ಅಭಿವೃದ್ಧಿಯಲ್ಲಿ ಸೋತಿದ್ದಾರೆ. ಈ ಕ್ಷೇತ್ರ ರಾಜಕೀಯದ ಹೊಲಸು ತುಂಬಿದೆ. ಇದನ್ನು ತೊಗಲಿಸಲು ನಾನು ಈ ರೀತಿ ಪ್ರಚಾರ ಕೈಗೊಂಡೆ ಎಂದು ಹೇಳಿದ್ದಾರೆ.

ದುರ್ಗೆಯಾಗಿ ಕಮಲಾ ಹ್ಯಾರಿಸ್​, ಜೋ ಬಿಡನ್​ ಸಿಂಹ, ಟ್ರಂಪ್​ ರಾಕ್ಷಸ… ಸಿಡಿಮಿಡಿಗೊಂಡ ಮತದಾರ

ಡಿಜೆಹಳ್ಳಿ ಗಲಭೆ: ಕಾಲ್​ ರೆಕಾರ್ಡ್ಸ್​ ಲೀಕ್​ ಆದ್ರೇನು? ಹೆದರಬೇಡಿ ಎಂದು ಕೈ ನಾಯಕರಿಗೆ ಡಿಕೆಶಿ ಅಭಯ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top