Friday, 20 Nov, 4.06 pm ವಿಜಯವಾಣಿ

ಮುಖಪುಟ
ಎರಡು ತಿಂಗಳ ಬಳಿಕ ಹೆಚ್ಚಾಯಿತು ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ: ಸರಿ ಸುಮಾರು ಎರಡು ತಿಂಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ದಾಖಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ದೇಶದಲ್ಲೂ ಪೆಟ್ರೋಲ್​ ದರ ಪ್ರತಿ ಲೀಟರಿಗೆ 17 ಪೈಸೆ ಮತ್ತು ಡೀಸೆಲ್ ದರ ಪ್ರತಿ ಲೀಟರಿಎ 22 ಪೈಸೆ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 81.06 ರೂಪಾಯಿ ಇದ್ದಿದ್ದು, ಇದೀಗ 81.23 ರೂಪಾಯಿ ಆಗಿದೆ. ಡೀಸೆಲ್​ ದರ ಪ್ರತಿ ಲೀಟರ್​ಗೆ 70.46 ರೂಪಾಯಿ ಇದ್ದದ್ದು 70.68 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ…

ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ ನಿನ್ನೆ ಏಳು ಪೈಸೆ ಹೆಚ್ಚಾಗಿದ್ದು 83.69 ರೂಪಾಯಿ ಇದ್ದದ್ದು 83.75 ರೂಪಾಯಿ ಆಗಿತ್ತು. ಇಂದು ಮತ್ತೆ 16 ಪೈಸೆ ಹೆಚ್ಚಳವಾಗಿದ್ದು 83.92 ರೂಪಾಯಿ ಆಗಿದೆ. ಇದೇ ರೀತಿ, ಡೀಸೆಲ್ ದರವೂ ಪ್ರತಿ ಲೀಟರಿಗೆ ನಿನ್ನೆ ಆರು ಪೈಸೆ ಹೆಚ್ಚಳವಾಗಿ 74.63 ರೂಪಾಯಿಯಿಂದ 74.69 ರೂಪಾಯಿಗೆ ಏರಿತ್ತು. ಇಂದು ಮತ್ತೆ 22 ಪೈಸೆ ಹೆಚ್ಚಾಗಿದ್ದು, ಪ್ರತಿ ಲೀಟರ್ ದರ 74.91 ರೂಪಾಯಿ ಆಗಿದೆ.

ಪೆಟ್ರೋಲ್ ದರ ಸೆಪ್ಟೆಂಬರ್ 22ರ ನಂತರ ಪರಿಷ್ಕರಣೆ ಆಗಿರಲಿಲ್ಲ. ಅದೇ ರೀತಿ ಡೀಸೆಲ್ ದರದಲ್ಲೂ ಅಕ್ಟೋಬರ್​ 2ರ ನಂತರ ಪರಿಷ್ಕರಣೆ ಆಗಿರಲಿಲ್ಲ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್​, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್​, ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್​ ಗಳು ಅಂತಾರಾಷ್ಟ್ರೀಯ ತೈಲ ಬೆಲೆ ಮತ್ತು ಫಾರಿನ್ ಎಕ್ಸ್​ಚೇಂಜ್​ ರೇಟ್​ಗೆ ಅನುಗುಣವಾಗಿ ದರ ಪರಿಷ್ಕರಣೆ ಮಾಡುತ್ತವೆ.

ಇದಕ್ಕೂ ಮೊದಲು ಜೂನ್ 30ರಿಂದ ಆಗಸ್ಟ್ 15ರ ತನಕ ಮತ್ತು ಮಾರ್ಚ್ 17ರಿಂದ ಜೂನ್ 6ರ ತನಕ ತೈಲ ಬೆಲೆ ಯಥಾಸ್ಥಿತಿ ಇತ್ತು. ಮುಂಬೈನಲ್ಲಿ ಶುಕ್ರವಾರದ ಪರಿಷ್ಕೃತ ಪೆಟ್ರೋಲ್ ದರ 87.94 ರೂಪಾಯಿ, ಡೀಸೆಲ್​ ದರ 77.11 ರೂಪಾಯಿ ಆಗಿದೆ. ಪೆಟ್ರೋಲ್​ ದರ ಚೆನ್ನೈನಲ್ಲಿ 84.31, ಕೋಲ್ಕತದಲ್ಲಿ 82.79 ರೂಪಾಯಿ, ಡೀಸೆಲ್ ದರ ಚೆನ್ನೈನಲ್ಲಿ 76.17 ರೂಪಾಯಿ, ಕೋಲ್ಕತದಲ್ಲಿ 74.24 ರೂಪಾಯಿ ಆಗಿದೆ.

26/11 ಮುಂಬೈ ದಾಳಿ ದಿನವೇ ಮತ್ತೊಂದು ದಾಳಿಗೆ ಯೋಜನೆ !

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top