Monday, 21 Sep, 11.35 am ವಿಜಯವಾಣಿ

ಮುಖಪುಟ
FIRST LOOK: 'ಸತ್ಯಮೇವ ಜಯತೇ 2' ಚಿತ್ರಕ್ಕಾಗಿ ದೇಹದ ಆಕಾರವನ್ನೇ ಬದಲಿಸಿದ ಜಾನ್ ಅಬ್ರಹಂ!

ಮುಂಬೈ: ಬಾಲಿವುಡ್​ನ ಹ್ಯಾಂಡ್​ಸಮ್​ ನಟ ಜಾನ್​ ಅಬ್ರಹಂ, ಸಿನಿಮಾ ಸಲುವಾಗಿ ಬೇರೆ ಬೇರೆ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಡೀ ದೇಹವನ್ನೇ ಹುರಿಗೊಳಿಸಿಕೊಂಡು, ಪಾತ್ರಕ್ಕೆ ತಕ್ಕಂತೆ ಬದಲಾಗುತ್ತಾರೆ. ಅವರ ಬಹುತೇಕ ಸಿನಿಮಾಗಳನ್ನು ನೋಡಿದರೆ ಅಲ್ಲಿ ಅವರ ಅತ್ಯಾಕರ್ಷಕ ಬಾಡಿಯೇ ಹೈಲೈಟ್. ಇದೀಗ ಆ ಪ್ರಕ್ರಿಯೆ ಸತ್ಯಮೇವ ಜಯತೇ 2 ಚಿತ್ರದಲ್ಲೂ ಮುಂದುವರಿದಿದೆ.

2018ರಲ್ಲಿ ಸತ್ಯ ಮೇವ ಜಯತೇ ಸಿನಿಮಾ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿತ್ತು. ಇದೀಗ ಅದೇ ಚಿತ್ರದ ಮುಂದುವರಿದ ಭಾಗ ತಯಾರಾಗುತ್ತಿದೆ. ಸತ್ಯಮೇವ ಜಯತೇ 2 ಚಿತ್ರದ ಮೊದಲ ಪೋಸ್ಟರ್​ ಅನ್ನು ನಟ ಜಾನ್​ ಅಬ್ರಹಂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಬಿಡುಗಡೆ ದಿನಾಂಕವನ್ನೂ ಘೋಷಿಸಿಕೊಂಡಿದ್ದಾರೆ.

ಮೊದಲ ಭಾಗವನ್ನು ನಿರ್ದೇಶನ ಮಾಡಿದ್ದ ಮಿಲಾಪ್​ ಮಿಲನ್​ ಜವೇರಿ ಎರಡನೇ ಭಾಗಕ್ಕೂ ಆಯಕ್ಷನ್​ ಕಟ್​ ಹೇಳಲಿದ್ದು, 2021ರ ಮೇ12ಕ್ಕೆ ಈದ್​ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆಯಾಗಲಿದೆ. ಸದ್ಯ ಫಸ್ಟ್​ಲುಕ್​ನಲ್ಲಿ ಜಾನ್​ ಅಬ್ರಹಂ ರಗಡ್​ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಕಣಕಣದ ರಕ್ತದ ಅಣುವಿನಲ್ಲೂ ಭಾರತ ಎಂಬರ್ಥದಲ್ಲಿ ಪೋಸ್ಟರ್ ವಿನ್ಯಾಸ ಮಾಡಲಾಗಿದೆ. (ಏಜೆನ್ಸೀಸ್​)

'ಬೆಲ್​ಬಾಟಂ' ಚಿತ್ರಕ್ಕಾಗಿ 18 ವರ್ಷದ ರೂಲ್​ ಬ್ರೇಕ್​ ಮಾಡಿದ ಅಕ್ಷಯ್​ ಕುಮಾರ್!

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top