ಹಾವೇರಿ: ಗಂಡ ಸಾಲದ ಕಂತು ಪಾವತಿ ಮಾಡದ ಹಿನ್ನೆಲೆ ನಗರದ ನಾಗೇಂದ್ರನಮಟ್ಟಿಯ ಬ್ಯಾಂಕ್‌ವೊಂದರ ಅಧಿಕಾರಿಗಳು ಆತನ ಹೆಂಡತಿಯ ಗೃಹಲಕ್ಷ್ಮೀ ಕಂತಿನ 15,000 ರೂ.ಗೆ ಕತ್ತರಿ ಹಾಕಿರುವ ಆರೋಪ ಕೇಳಿ ಬಂದಿದೆ.
ನಾಗೇಂದ್ರನಮಟ್ಟಿಯ ಹುಸೇನ್‌ಖಾನ್ ಪಠಾಣ ಎಂಬುವರು ಬ್ಯಾಂಕ್ ಒಂದರಲ್ಲಿ 2 ಲಕ್ಷ ರೂ.
ನಾಗೇಂದ್ರನಮಟ್ಟಿಯ ಹುಸೇನ್‌ಖಾನ್ ಪಠಾಣ ಎಂಬುವರು ಬ್ಯಾಂಕ್ ಒಂದರಲ್ಲಿ 2 ಲಕ್ಷ ರೂ.
ಸಾಲ ಪಡೆದಿದ್ದರು. ಪಠಾಣ ಸಮಯಕ್ಕೆ ಸರಿಯಾಗಿ ಸಾಲದ ಕಂತು ಪಾವತಿ ಮಾಡಿರಲಿಲ್ಲ. ಹೀಗಾಗಿ, ಅವರ ಪತ್ನಿ ಶಬಾನಬಾನು ಅವರ ಅದೇ ಬ್ಯಾಂಕ್‌ನ ಖಾತೆಗೆ ಜಮೆಯಾಗಿದ್ದ ಗೃಹಲಕ್ಷ್ಮೀ ಹಣವನ್ನು 11,000 ರೂ. ಹಾಗೂ 4,000 ರೂ. ಸೇರಿ 15,000 ರೂ.ಗೆ ಕತ್ತರಿ ಹಾಕಿದ್ದಾರೆ.
ಗೃಹಲಕ್ಷ್ಮೀ ಹಣಕ್ಕೂ ಭದ್ರತೆ ಇಲ್ಲದಾಗಿದೆ. ಯಾವ ಆಧಾರದ ಮೇಲೆ ನಮ್ಮ ಅನುಮತಿ ಇಲ್ಲದೇ ಗೃಹಲಕ್ಷ್ಮೀ ಹಣ ತೆಗೆದುಕೊಂಡಿದ್ದೀರಿ ಉತ್ತರಿಸಿ ಎಂದು ಪತಿ, ಪತ್ನಿ ಇಬ್ಬರೂ ಬ್ಯಾಂಕ್ ಮ್ಯಾನೇಜರ್‌ಗೆ ಪತ್ರ ಬರೆದಿದ್ದಾರೆ. ನಮ್ಮ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ.
ಇನ್ನಷ್ಟು ಓದಿ

