ಗ್ರಾಮೀಣ ಪ್ರದೇಶಕ್ಕೆ ಮೂಲ ಸೌಲಭ್ಯಗಳಾದ ರಸ್ತೆ, ವಿದ್ಯುತ್, ಚರಂಡಿ, ನೀರು, ಬೀದಿದೀಪವನ್ನು ಸರ್ಕಾರ ಕಡ್ಡಾಯವಾಗಿ ನೀಡಬೇಕು. ಈ ಸೌಲಭ್ಯ ಸಿಗದಿದ್ದಾಗ ಗ್ರಾಮಸ್ಥರು ಹತಾಶರಾಗುತ್ತಾರೆ. ಪಡವಗೋಡು ಗ್ರಾಮದ ಸಣ್ಣ ಸಮಸ್ಯೆಗೆ ಆಳುವ ಸರ್ಕಾರ ಸ್ಪಂದಿಸದಿರುವುದು ಬೇಸರ ತರಿಸಿದೆ. ಗ್ರಾಮದ ಜನರೇ ರಸ್ತೆ ಅಭಿವೃದ್ಧಿ ಮಾಡಿಕೊಂಡಿರುವುದು ಸರ್ಕಾರವೇ ತಲೆತಗ್ಗಿಸುವ ಸಂಗತಿ. ಗ್ರಾಮೀಣಾಭಿವೃದ್ಧಿ ಸಚಿವರು ತಕ್ಷಣ ಗ್ರಾಮೀಣ ಪ್ರದೇಶಗಳ ರಸ್ತೆಗಳ ಕಡೆಗೆ ಗಮನ ಹರಿಸಬೇಕು.
- ದಿನೇಶ್ ಶಿರವಾಳ, ರೈತ ಸಂಘದ ಜಿಲ್ಲಾಧ್ಯಕ್ಷಪಡವಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಗ್ರಾಮಸ್ಥರು ಸ್ಮಶಾನಕ್ಕೆ ಶವ ಸಾಗಿಸಲೂ ಸಹ ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಇದನ್ನು ಮನಗಂಡು ಗ್ರಾಮಸ್ಥರ ಮನವಿ ಮೇರೆಗೆ ರೈತ ಸಂಘ ಕೈಜೋಡಿಸಿ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಿದ್ದಾರೆ. ತಾಲೂಕಿನ ಅನೇಕ ಗ್ರಾಮಗಳಲ್ಲಿ ಇದೇ ಸ್ಥಿತಿ ಇದೆ. ರೈತ ಸಂಘ ಪ್ರತಿಭಟನಾ ರೂಪದಲ್ಲಿ ರಸ್ತೆಗಳನ್ನು ನಿರ್ಮಿಸಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಿದೆ.
ಇನ್ನಷ್ಟು ಓದಿ

