Dailyhunt Logo
  • Light mode
    Follow system
    Dark mode
    • Play Story
    • App Story
ಗೃಹ ನಿರ್ಮಾಣ ಸಹಕಾರಿ ಸಂಘಗಳಿಂದಲೇ ಹೆಚ್ಚು ಮನೆ ವಿತರಣೆ

ಗೃಹ ನಿರ್ಮಾಣ ಸಹಕಾರಿ ಸಂಘಗಳಿಂದಲೇ ಹೆಚ್ಚು ಮನೆ ವಿತರಣೆ

ಚಿಕ್ಕಮಗಳೂರು: ಸರ್ಕಾರಿ ಸೌಮ್ಯದ ಸಂಸ್ಥೆಗಳು ಹಂಚಿಕೆ ಮಾಡುವುದಕ್ಕಿಂತ ಎರಡು ಪಟ್ಟು ಹೆಚ್ಚು ಗೃಹ ನಿರ್ಮಾಣ ಸಹಕಾರಿ ಸಂಘಗಳು ರಾಜ್ಯದಲ್ಲಿ ನಿವೇಶನ ಮತ್ತು ಮನೆಗಳನ್ನು ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿವೆ ಎಂದು ರಾಜ್ಯ ಸಹಕಾರಿ ವಸತಿ ಮಹಾಮಂಡಲದ ಅಧ್ಯಕ್ಷ ಹಾಗೂ ಶಾಸಕ ಎಸ್‌.ಟಿ.ಸೋಮಶೇಖರ್‌ ಹೇಳಿದರು.ಚಿಕ್ಕಮಗಳೂರು ನಗರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರಿ ಸೌಮ್ಯದ ಸಂಸ್ಥೆಗಳಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿ (ಬಿಡಿಎ), ಗೃಹ ಮಂಡಳಿಗಿಂತ ಹೆಚ್ಚು ಎರಡು ಪಟ್ಟು ನಿವೇಶನ ಹಂಚಿಕೆ ಮತ್ತು ಮನೆ ನಿರ್ಮಾಣ ಮಾಡಿಕೊಡುವ ಕೆಲಸವನ್ನು ಗೃಹ ನಿರ್ಮಾಣ ಸಹಕಾರಿ ಸಂಘಗಳು ರಾಜ್ಯದಲ್ಲಿ ಮಾಡುತ್ತಿವೆ.
ಅದೂ ಸಹ ಅತ್ಯಂತ ಕಡಿಮೆ ಬೆಲೆ ನೀಡುತ್ತಿವೆ ಎಂದು ತಿಳಿಸಿದರು.ರಾಜ್ಯದಲ್ಲಿ ಸಾವಿರಾರು ಗೃಹ ನಿರ್ಮಾಣ ಸಹಕಾರಿ ಸಂಘಗಳು ಇದೆ. ಈ ಪೈಕಿ ಕೆಲವೇ ಸಂಸ್ಥೆಗಳು ನಿವೇಶನ, ಅಪಾರ್ಟ್‌ಮೆಂಟ್‌ ನಿರ್ಮಾಣ, ಸಾಲ ಸೌಲಭ್ಯ ನೀಡುವ ಕೆಲಸ ಮಾಡುತ್ತಿವೆ. ಅದರಲ್ಲೂ ಕೆಲವು ವಂಚನೆ ಮಾಡುವ ಸಹಕಾರಿ ಸಂಘಗಳು ಇವೆ ಎಂದು ಎಚ್ಚರಿಸಿದರು.ಒಂದು ಸಹಕಾರಿ ಸಂಘಕ್ಕೆ ನೂರು ವರ್ಷ ದಾಟಿದೆ ಎಂದರೆ, ಅದಕ್ಕೆ ಅಧ್ಯಕ್ಷರಾಗಿ, ಸದಸ್ಯರ ಸಾಕಷ್ಟು ಶ್ರಮ ಇದೆ. ಇತ್ತೀಚಿನ ದಿನಗಳಲ್ಲಿ ಸಹಕಾರಿ ಸಂಸ್ಥೆಗಳು ಬೆಳೆಯುವುದು ಕಷ್ಟ. ಆದರೆ, ಚಿಕ್ಕಮಗಳೂರು ಗೃಹ ನಿರ್ಮಾಣ ಸಹಕಾರ ಸಂಘ ನೂರು ವರ್ಷ ಪೂರೈಸುತ್ತಿದೆ. ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಳ್ಳಬೇಕೆಂದು ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಚಿಕ್ಕಮಗಳೂರು ನಗರ ಗೃಹ ನಿರ್ಮಾಣ ಸಹಕಾರಿ ಸಂಸ್ಥೆಗೆ ನೂರು ವರ್ಷ ತುಂಬಿದೆ ಎಂದರೆ ಅದು ಸಾಮಾನ್ಯ ಸಂಗತಿ ಅಲ್ಲ.ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಮನೆ ಕಟ್ಟುವುದಕ್ಕೆ ಸಾಲ ಪಡೆಯುವುದು ಸುಲಭದ ಕೆಲಸವಲ್ಲ, ಸಾಲ ಮರು ಪಾವತಿಗೆ ಶಕ್ತಿ ಇದ್ದರೂ, ದಾಖಲೆಗಳನ್ನು ಸಲ್ಲಿಸುವುದಕ್ಕೆ ಆಗುವುದಿಲ್ಲ. ಅಂತಹವರಿಗೆ ಹಾಗಾಗಿ. ಆರಂಭಗೊಂಡಿದ್ದೇ, ಸಹಕಾರಿ ಸಂಸ್ಥೆಗಳು. ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳು ಬೆಳೆಯುವುದಕ್ಕೆ ಎಸ್‌,ಎಲ್‌.ಧರ್ಮೇಗೌಡರ ಶ್ರಮ ಸಾಕಷ್ಟು ಇದೆ ಎಂದರು.ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಮಾತನಾಡಿ ಗೃಹ ನಿರ್ಮಾಣ ಸಹಕಾರ ಸಂಘದಅಭಿವೃದ್ಧಿಗೆಅದರ ಕಾರ್ಯದರ್ಶಿಯಾಗಿ ಹಲವಾರು ವರ್ಷಕಾರ್ಯನಿರ್ವಹಿಸಿದ ಹೆಚ್.ಎಲ್. ಅನಂತರಾಮುಅವರಕೊಡುಗೆಅಪಾರವಾಗಿದೆಎಂದರು. ವಿಧಾನಪರಿಷತ್‌ ಸದಸ್ಯ ಸಿ,ಟಿ,ರವಿ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ವಿಧಾನಪರಿಷತ್ ಮಾಜಿ ಸದಸ್ಯೆಗಾಯತ್ರಿ ಶಾಂತೇಗೌಡ, ನಗರ ಸಭೆಅಧ್ಯಕ್ಷೆ ಶೀಲಾದಿನೇಶ್, ಮಲೆನಾಡು ವಿದ್ಯಾ ಸಂಸ್ಥೆಯಅ ಧ್ಯಕ್ಷ ಎನ್, ಕೇಶವಮೂರ್ತಿ, ಉದ್ಯಮಿ ಡಾ.ಅಪ್ಸರ್ ಹಿಂದೂಸ್ತಾನಿ ಉಪಸ್ಥಿತರಿದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani